ಲೋಕಸಭಾ ಚುನಾವಣೆ ಫಲಿತಾಂಶ; ಕಾರ್ಯಕರ್ತರ ಪ್ರರಿಶ್ರಮದಿಂದ ಗೆಲುವು ಸಾಧ್ಯವಾಗಿದೆ: ಶ್ರೇಯಸ್ ಪಟೇಲ್, ಕಾಂಗ್ರೆಸ್ ಅಭ್ಯರ್ಥಿ
ಶ್ರೇಯಸ್ ಪಟೇಲ್ ಗೆಲುವು ದೊಡ್ಡ ಸಾಧನೆಯೆಂದು ಹೇಳಲಾಗುತ್ತಿದೆ ಯಾಕೆಂದರೆ, ಕಳೆದ 20 ವರ್ಷಗಳಿಂದ ಹಾಸನ ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿತ್ತು. ಮತದಾನಕ್ಕಿಂತ ಮೊದಲು ಸಾರ್ವಜನಿಕಗೊಂಡ ಪ್ರಜ್ವಲ್ ರೇವಣ್ಣ ಸೆಕ್ಸ್ ಟೇಪುಗಳು ಜೆಡಿಎಸ್ ಗೆ ಮರ್ಮಾಘಾತವಾಗಿ ಪರಿಣಮಿಸಿದವು ಅಂತ ಹೇಳಿದರೆ ಅತಿಶಯೋಕ್ತಿ ಅನಿಸದು.
ಹಾಸನ: ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ (Shreyas Patel) ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಘೋಷಣೆಯಾದ ನಂತರ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಅವರು ಇದು ಕೇವಲ ನನ್ನ ಗೆಲುವು ಮಾತ್ರ ಅಲ್ಲ, ಕ್ಷೇತ್ರದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರ (party workers) ಗೆಲುವು, ಅವರ ಪರಿಶ್ರಮವಿಲ್ಲದೆ ಗೆಲುವು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು. ತನ್ನನ್ನು ಗೆಲ್ಲಿಸುವ ಮೂಲಕ ಜನತೆ ದೊಡ್ಡ ಜವಾಬ್ದಾರಿಯನ್ನು ಹೆಗಲ ಮೇಲೆ ಹೊರೆಸಿದ್ದಾರೆ, ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಸಂಸತ್ತಿನಲ್ಲಿ (parliament) ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ಪಟೇಲ್ ಹೇಳಿದರು. ಮತ ಎಣಿಕೆ ಸಂದರ್ಭದಲ್ಲಿ ವಿಜಯಲಕ್ಷ್ಮಿ ತೂಗುಯ್ಯಾಲೆ ಆಡುತ್ತಿದ್ದಳು, ಒಮ್ಮೆ ಪಟೇಲ್ ಗೆ ಲೀಡ್ ಮತ್ತೊಮ್ಮೆ ಪ್ರಜ್ವಲ್ ರೇವಣ್ಣಗೆ. ಅದರ ಬಗ್ಗೆ ಮಾತಾಡಿದ ಪಟೇಲ್, ಅಭ್ಯರ್ಥಿಯಾಗಿ ಅತಂಕ ಇದ್ದೇ ಇತ್ತು, ಆದರೆ ಗೆಲುವಿನ ವಿಶ್ವಾಸ ಅಚಲವಾಗಿತ್ತು ಎಂದರು. ಶ್ರೇಯಸ್ ಪಟೇಲ್ ಗೆಲುವು ದೊಡ್ಡ ಸಾಧನೆಯೆಂದು ಹೇಳಲಾಗುತ್ತಿದೆ ಯಾಕೆಂದರೆ, ಕಳೆದ 20 ವರ್ಷಗಳಿಂದ ಹಾಸನ ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿತ್ತು. ಮತದಾನಕ್ಕಿಂತ ಮೊದಲು ಸಾರ್ವಜನಿಕಗೊಂಡ ಪ್ರಜ್ವಲ್ ರೇವಣ್ಣ ಸೆಕ್ಸ್ ಟೇಪುಗಳು ಜೆಡಿಎಸ್ ಗೆ ಮರ್ಮಾಘಾತವಾಗಿ ಪರಿಣಮಿಸಿದವು ಅಂತ ಹೇಳಿದರೆ ಅತಿಶಯೋಕ್ತಿ ಅನಿಸದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾನು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಬೇಕಾದರೆ ಶ್ರೇಯಸ್ ಪಟೇಲ್ರನ್ನು ಗೆಲ್ಲಿಸಬೇಕು: ಕೆಎಂ ಶಿವಲಿಂಗೇಗೌಡ