ಉತ್ತರ ಪ್ರದೇಶದಲ್ಲಿ 2024ರ ಲೋಕಸಭೆ ಚುನಾವಣೆ(Lok Sabha Election 2024)ಯ ಕಾವು ತೀವ್ರಗೊಂಡಿದೆ. ವರುಣ್ ಗಾಂಧಿ ಹಾಗೂ ವಿಕೆ ಸಿಂಗ್ ಹೆಸರು ಕೈಬಿಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ತನ್ನ 9 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಭಾರತೀಯ ಜನತಾ ಪಕ್ಷ ಈಗಾಗಲೇ 51 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೀಗ ಬಿಜೆಪಿ ಯುಪಿಯ ಬಾರಾಬಂಕಿ ಸೇರಿದಂತೆ 25 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.
ಶನಿವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಯುಪಿಯ ಉಳಿದ ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಿರ್ಧರಿಸುವ ಕುರಿತು ಚರ್ಚೆ ನಡೆದಿದೆ. ಇದರಲ್ಲಿ ಪ್ರತಿ ಲೋಕಸಭಾ ಸ್ಥಾನಕ್ಕೆ ಅನುಗುಣವಾಗಿ ಹೆಸರುಗಳನ್ನು ನಿರ್ಧರಿಸಲಾಗಿದೆ. ಭಾನುವಾರ ಅಭ್ಯರ್ಥಿಗಳ ಘೋಷಣೆಯಾಗಬಹುದು ಎಂದು ಹೇಳಲಾಗುತ್ತಿದೆ.
ಯುಪಿಯ ಬಾರಾಬಂಕಿ ಸೇರಿದಂತೆ 25 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರಿಗೆ ಸಂಬಂಧಿಸಿದಂತೆ ಬಿಜೆಪಿ ಶನಿವಾರ ದೆಹಲಿ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಚಿಂತನ ಮಂಥನ ನಡೆಸಿತು. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಿಎಂ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಬ್ರಜೇಶ್ ಪಾಠಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ಅಭ್ಯರ್ಥಿಗಳ ಪಟ್ಟಿಯನ್ನು ಚರ್ಚಿಸಿದರು.
ಮತ್ತಷ್ಟು ಓದಿ:ಬಿಜೆಪಿ ಟಿಕೆಟ್ ಕೈತಪ್ಪಿದರೆ ವರುಣ್ ಗಾಂಧಿ ಸ್ವತಂತ್ರ ಸ್ಪರ್ಧೆ ಸಾಧ್ಯತೆ
ಕೆಲವು ಹಾಲಿ ಸಂಸದರ ಟಿಕೆಟ್‌ಗೆ ಬಿಜೆಪಿ ಕತ್ತರಿ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮೊದಲ ಪಟ್ಟಿಯಲ್ಲಿ ಬಿಜೆಪಿ 51 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ 44 ಟಿಕೆಟ್‌ಗಳನ್ನು ಉಳಿಸಿಕೊಳ್ಳಲಾಗಿದೆ.
ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರ ಪುತ್ರಿ ಮತ್ತು ಬದೌನ್ ಸಂಸದ ಸಂಘ ಮಿತ್ರ ಮೌರ್ಯ, ಪ್ರಯಾಗರಾಜ್ ಸಂಸದೆ ರೀಟಾ ಬಹುಗುಣ ಜೋಶಿ, ಕಾನ್ಪುರ ಸಂಸದ ಸತ್ಯದೇವ್ ಪಚೌರಿ, ಬಹ್ರೈಚ್ ಸಂಸದ ಅಕ್ಷಯ್ವರ್ ಲಾಲ್ ಗೊಂಡ್, ಬರೇಲಿ ಸಂಸದ ಸಂತೋಷ್ ಗಂಗ್ವಾರ್, ಮೀರತ್ ಸಂಸದರು ಟಿಕೆಟ್ ಸಂಕಷ್ಟದಲ್ಲಿರುವ ಹಾಲಿ ಸಂಸದರು ಎಂದು ಮೂಲಗಳು ತಿಳಿಸಿವೆ.
ರಾಜೇಂದ್ರ ಅಗರ್ವಾಲ್, ಗಾಜಿಯಾಬಾದ್ ವಿಕೆ ಸಿಂಗ್. ಕೈಸರ್‌ಗಂಜ್ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್, ಪಿಲಿಭಿತ್ ಸಂಸದ ವರುಣ್ ಗಾಂಧಿ, ಸುಲ್ತಾನ್‌ಪುರ ಸಂಸದೆ ಮೇನಕಾ ಗಾಂಧಿ ಅವರ ಹೆಸರುಗಳೂ ಚರ್ಚೆಗೆ ಬಂದವು. ಮೇನಕಾ ಗಾಂಧಿಗೆ ಟಿಕೆಟ್ ನೀಡಬಹುದು ಎನ್ನಲಾಗಿದೆ.
ಮೂಲಗಳ ಪ್ರಕಾರ, ಪಿಲಿಭಿತ್ನಿಂದ ಲೋಕಸಭಾ ಸಂಸದರಾಗಿರುವ ವರುಣ್ ಗಾಂಧಿ ಹಾಗೂ ಗಾಜಿಯಾಭಾದ್ನಿಂದ ಜನರಲ್ ವಿಕೆ ಸಿಂಗ್ ಅವರನ್ನು ಕೈಬಿಡಬಹುದು ಎನ್ನಲಾಗಿದೆ. ಸುಲ್ತಾನ್ಪರದ ಬಿಜೆಪಿ ಸಂಸದೆ ಮೇನಕಾ ಗಾಂಧಿ ಹಾಗೂ ಪಿಲಿಭಿತ್ನಿಂದ ಜಿತಿನ್ ಪ್ರಸಾದ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಕೈಬಿಡಬಹುದಾದ ಸಂಸದರ ಪಟ್ಟಿ
ಘಾಜಿಯಾಬಾದ್ನಿಂದ ವಿಕೆ ಸಿಂಗ್
ಬಲ್ಲಿಯಾದಿಂದ ವೀರೇಂದ್ರ ಸಿಂಗ್
ಹತ್ರಾಸ್ನಿಂದ ರಾಜ್ವೀರ್ ದಿಲರ್
ಪಿಲಿಭಿತ್ನಿಂದ ವರುಣ್ ಗಾಂಧಿ
ಪ್ರಯಾಗ್ರಾಜ್ನಿಂದ ರೀಟಾ ಬಹುಗುಣ
ಜೈಪುರದಿಂದ ರಾಮ್ಚರಣ್ ಬೊಹ್ರಾ
ಗಂಗಾನಗರದಿಂದ ನಿಹಾಲ್ ಚಂದ್
ಬಂದಾಯುವಿನಿಂದ ಸಂಘಮಿತ್ರ ಅವರ ಹೆಸರು ಕೈಬಿಡಬಹುದು ಎನ್ನಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ