18ನೇ ಲೋಕಸಭಾ ಚುನಾವಣೆ 2024ರಲ್ಲಿ (Lok Sabha Elections 2024) ಏಪ್ರಿಲ್ನಿಂದ ಜೂನ್ವರೆಗೆ ಏಳು ಹಂತಗಳಲ್ಲಿ ನಡೆಯುತ್ತಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ 16ರಂದು ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್ 19, 26, ಮೇ 7, 13, 20, 25 ಮತ್ತು ಜೂನ್ 1ರಂದು ವಿವಿಧ ಕ್ಷೇತ್ರಗಳಿಗೆ ಮತದಾನವಾಗಲಿದೆ. ಏಳನೇ ಹಾಗು ಕೊನೆಯ ಹಂತದ ಮತದಾನ ಜೂನ್ 1ರಂದು ನಡೆಯಲಿದೆ. ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ 8 ರಾಜ್ಯಗಳಲ್ಲಿ 57 ಕ್ಷೇತ್ರಗಳಲ್ಲಿ ಜೂನ್ 1ರಂದು ಮತದಾನ ನಡೆಯಲಿದೆ. ಏಳನೇ ಹಂತದ ಮತದಾನಕ್ಕಾಗಿ ಮೇ 7ರಂದು ಈ ಕುರಿತು ಅಧಿಸೂಚನೆ ಹೊರಡಿಸಲಾಗುವುದು. ಮೇ 14ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇರುತ್ತದೆ. ಮೇ 15ರಂದು ನಾಮಪತ್ರಗಳ ಪರಿಶೀಲನೆ ಬಳಿಕ ಅಭ್ಯರ್ಥಿಗಳಿಗೆ ಮೇ 17ರವರೆಗೆ ನಾಮಪತ್ರ ಹಿಂಪಡೆಯುವ ಅವಕಾಶ ಕಲ್ಪಿಸಲಾಗಿದೆ.
ಜೂನ್ 1 ರಂದು ಎರಡು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಚಂಡೀಗಢದಲ್ಲಿ ಅಂದು ಒಂದೇ ಹಂತದಲ್ಲಿ ಚುನಾವಣೆ ಮುಗಿಯಲಿದೆ. ಈ ಮೂರು ಪ್ರದೇಶಗಳು ಸೇರಿದಂತೆ ಎಂಟು ರಾಜ್ಯಗಳಲ್ಲಿ ಮತದಾನ ಇರುತ್ತದೆ. ಮತದಾನದ ಎರಡು ದಿನಗಳ ನಂತರ ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಏಪ್ರಿಲ್ 26 ರಂದು 13 ರಾಜ್ಯಗಳ 89 ಲೋಕಸಭಾ ಸ್ಥಾನಗಳಿಗೆ ಎರಡನೇ ಹಂತದ ಚುನಾವಣೆ
State Name | Constituency Name | Phase | Date |
Bihar | Arrah | Phase 7 | 1-June-24 |
Bihar | Buxar | Phase 7 | 1-June-24 |
Bihar | Jahanabad | Phase 7 | 1-June-24 |
Bihar | Karakat | Phase 7 | 1-June-24 |
Bihar | Nalanda | Phase 7 | 1-June-24 |
Bihar | Pataliputra | Phase 7 | 1-June-24 |
Bihar | Patna Sahib | Phase 7 | 1-June-24 |
Bihar | Sasaram | Phase 7 | 1-June-24 |
Chandigarh | Chandigarh | Phase 7 | 1-June-24 |
Himachal Pradesh | Hamirpur | Phase 7 | 1-June-24 |
Himachal Pradesh | Kangra | Phase 7 | 1-June-24 |
Himachal Pradesh | Mandi | Phase 7 | 1-June-24 |
Himachal Pradesh | Shimla | Phase 7 | 1-June-24 |
Jharkhand | Dumka | Phase 7 | 1-June-24 |
Jharkhand | Godda | Phase 7 | 1-June-24 |
Jharkhand | Rajmahal | Phase 7 | 1-June-24 |
Orissa | Balasore | Phase 7 | 1-June-24 |
Orissa | Bhadrak | Phase 7 | 1-June-24 |
Orissa | Jagatsinghpur | Phase 7 | 1-June-24 |
Orissa | Jajpur | Phase 7 | 1-June-24 |
Orissa | Kendrapara | Phase 7 | 1-June-24 |
Orissa | Mayurbhanj | Phase 7 | 1-June-24 |
Punjab | Amritsar | Phase 7 | 1-June-24 |
Punjab | Anandpur Sahib | Phase 7 | 1-June-24 |
Punjab | Bathinda | Phase 7 | 1-June-24 |
Punjab | Faridkot | Phase 7 | 1-June-24 |
Punjab | Fatehgarh Sahib | Phase 7 | 1-June-24 |
Punjab | Firozpur | Phase 7 | 1-June-24 |
Punjab | Gurdaspur | Phase 7 | 1-June-24 |
Punjab | Hoshiarpur | Phase 7 | 1-June-24 |
Punjab | Jalandhar | Phase 7 | 1-June-24 |
Punjab | Khadoor Sahib | Phase 7 | 1-June-24 |
Punjab | Ludhiana | Phase 7 | 1-June-24 |
Punjab | Patiala | Phase 7 | 1-June-24 |
Punjab | Sangrur | Phase 7 | 1-June-24 |
Uttar Pradesh | Ballia | Phase 7 | 1-June-24 |
Uttar Pradesh | Bansgaon | Phase 7 | 1-June-24 |
Uttar Pradesh | Chandauli | Phase 7 | 1-June-24 |
Uttar Pradesh | Deoria | Phase 7 | 1-June-24 |
Uttar Pradesh | Ghazipur | Phase 7 | 1-June-24 |
Uttar Pradesh | Ghosi | Phase 7 | 1-June-24 |
Uttar Pradesh | Gorakhpur | Phase 7 | 1-June-24 |
Uttar Pradesh | Kushi Nagar | Phase 7 | 1-June-24 |
Uttar Pradesh | Maharajganj | Phase 7 | 1-June-24 |
Uttar Pradesh | Mirzapur | Phase 7 | 1-June-24 |
Uttar Pradesh | Robertsganj | Phase 7 | 1-June-24 |
Uttar Pradesh | Salempur | Phase 7 | 1-June-24 |
Uttar Pradesh | Varanasi | Phase 7 | 1-June-24 |
West Bengal | Barasat | Phase 7 | 1-June-24 |
West Bengal | Basirhat | Phase 7 | 1-June-24 |
West Bengal | Diamond Harbour | Phase 7 | 1-June-24 |
West Bengal | Dum Dum | Phase 7 | 1-June-24 |
West Bengal | Jadavpur | Phase 7 | 1-June-24 |
West Bengal | Joynagar | Phase 7 | 1-June-24 |
West Bengal | Kolkata Dakshin | Phase 7 | 1-June-24 |
West Bengal | Kolkata Uttar | Phase 7 | 1-June-24 |
West Bengal | Mathurapur | Phase 7 | 1-June-24 |
ಈ ಹಂತದಲ್ಲಿ ಪಂಜಾಬ್‌ನ ಎಲ್ಲಾ 13 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹಿಮಾಚಲ ಪ್ರದೇಶದಲ್ಲೂ ಈ ಹಂತದಲ್ಲಿ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ಉತ್ತರ ಪ್ರದೇಶದ 13 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬಿಹಾರದ ಉಳಿದ 8 ಸ್ಥಾನಗಳಿಗೂ ಅದೇ ದಿನ ಮತದಾನ ನಡೆಯಲಿದೆ. ಇದಲ್ಲದೆ, ಒಡಿಶಾದ ಉಳಿದ 6 ಸ್ಥಾನಗಳು, ಜಾರ್ಖಂಡ್‌ನ ಉಳಿದ 3 ಸ್ಥಾನಗಳು, ಪಶ್ಚಿಮ ಬಂಗಾಳದ ಉಳಿದ 9 ಸ್ಥಾನಗಳು ಮತ್ತು ಚಂಡೀಗಢದ ಏಕೈಕ ಸಂಸದೀಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ