TMC ಅಭ್ಯರ್ಥಿ ಯೂಸುಫ್ ಪಠಾಣ್​ರಿಂದ ವಿಶ್ವಕಪ್‌ ಪೋಸ್ಟರ್‌ ಬಳಕೆ: I.N.D.I.A ಮಿತ್ರ ಕೂಟದ ಕಾಂಗ್ರೆಸ್ಸಿನಿಂದ ಚುನಾವಣಾ ಆಯೋಗಕ್ಕೆ ದೂರು

|

Updated on: Mar 28, 2024 | 11:27 AM

ಪ್ರಚಾರಕ್ಕೆ ಕ್ರಿಕೆಟ್ ವಿಶ್ವಕಪ್‌ ವಿಜಯದ ಪೋಸ್ಟರ್‌ ಬಳಸಿದ TMC ಅಭ್ಯರ್ಥಿ ಯೂಸುಫ್ ಪಠಾಣ್: ತೃಣಮೂಲ ಕಾಂಗ್ರೆಸ್ಸಿಗನ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಮಿತ್ರ ಪಕ್ಷ ಕಾಂಗ್ರೆಸ್​​

TMC ಅಭ್ಯರ್ಥಿ ಯೂಸುಫ್ ಪಠಾಣ್​ರಿಂದ ವಿಶ್ವಕಪ್‌ ಪೋಸ್ಟರ್‌ ಬಳಕೆ: I.N.D.I.A ಮಿತ್ರ ಕೂಟದ ಕಾಂಗ್ರೆಸ್ಸಿನಿಂದ ಚುನಾವಣಾ ಆಯೋಗಕ್ಕೆ ದೂರು
ವಿಶ್ವಕಪ್‌ ಪೋಸ್ಟರ್‌ ಬಳಸಿದ ಯೂಸುಫ್ ಪಠಾಣ್​​: ಕಾಂಗ್ರೆಸ್ಸಿನಿಂದ ದೂರು
Follow us on

Lok Sabha polls 2024: ಹಾಲಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮಾಜಿ ಕ್ರಿಕೆಟಿಗ ಮತ್ತು ಹಾಲಿ ತೃಣಮೂಲ ಕಾಂಗ್ರೆಸ್ ( Trinamool Congress -TMC) ಅಭ್ಯರ್ಥಿ ಯೂಸುಫ್ ಪಠಾಣ್ (Yusuf Pathan) ಅವರು 2011ರ ಐಸಿಸಿ ವಿಶ್ವಕಪ್ ಪೋಸ್ಟರ್‌ಗಳನ್ನು ಬಳಸಿದ ಬಗ್ಗೆ ಟಿಎಂಸಿ ಮಿತ್ರ ಪಕ್ಷ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ (Election Commission) ಬುಧವಾರ ದೂರು ಸಲ್ಲಿಸಿದೆ. ಯೂಸುಫ್ ಪಠಾಣ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ, ಮಾಜಿ ಕ್ರಿಕೆಟಿಗ- ಹಾಲಿ ರಾಜಕಾರಣಿಯು 2011 ಕ್ರಿಕೆಟ್ ವಿಶ್ವಕಪ್‌ನಲ್ಲಿ (2011 ICC World Cup) ಭಾರತದ ವಿಜಯದ ಕ್ಷಣಗಳ ಪೋಸ್ಟರ್‌ಗಳನ್ನು ಪ್ರಚಾರಕ್ಕಾಗಿ (2024 Lok Sabha election campaign) ಬಳಸುವ ಮೂಲಕ ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಉಲ್ಲಂಘಿಸುತ್ತಿದ್ದಾರೆ ಎಂದು ಗ್ರ್ಯಾಂಡ್ ಓಲ್ಡ್ ಪಾರ್ಟಿ ಕಾಂಗ್ರೆಸ್ ಅಲವತ್ತುಕೊಂಡಿದೆ.

ಹಾಲಿ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬಹರಂಪುರದಿಂದ (Baharampur) ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಪಠಾಣ್ ಅವರು ಈ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಬ್ಯಾನರ್, ಪೋಸ್ಟರ್ ಮತ್ತು ಫೋಟೋಗಳನ್ನು ಬಳಸಲು ಪ್ರಾರಂಭಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ

ಭಾರತ ರತ್ನ ಸಚಿನ್ ತೆಂಡೂಲ್ಕರ್ ಮತ್ತು ಇತರರು ಸೇರಿದಂತೆ ನಮ್ಮ ರಾಷ್ಟ್ರದ ಉನ್ನತ ಮಟ್ಟದ ಕ್ರಿಕೆಟ್ ಸೆಲೆಬ್ರಿಟಿಗಳ ಫೋಟೋಗಳು ಜೊತೆಗೆ ಐಸಿಸಿ ಕ್ರಿಕೆಟ್ ವಿಶ್ವಕಪ್, 2011 ರ ವಿಜೇತ ಕ್ಷಣಗಳು ಸ್ಪಷ್ಟವಾಗಿ ಚಿತ್ರಗಳಲ್ಲಿವೆ ಎಂದು ಪಕ್ಷವು ಗಮನ ಸೆಳೆದಿದೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ 2011 ಗೆಲುವಿನ ಕ್ಷಣಗಳು “ರಾಷ್ಟ್ರೀಯ ಹೆಮ್ಮೆಯ ವಿಷಯ ಮತ್ತು ಪ್ರತಿಯೊಬ್ಬ ಭಾರತೀಯ ಆರಾಧಿಸುವ ಭಾವನೆ. ಆದರೆ 2011 ರ ವಿಶ್ವಕಪ್ ಗೆಲುವನ್ನು ಚುನಾವಣಾ ಪ್ರಚಾರದ ಸಮಯದಲ್ಲಿ ಸಣ್ಣ ಲಾಭಕ್ಕಾಗಿ ಹೀಗೆಲ್ಲಾ ಬಳಸಿಕೊಳ್ಳಬಾರದು ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಹೇಳಿದೆ. ಇದು ಈಗಾಗಲೇ ದೇಶದಲ್ಲಿ ಹೇರಲಾಗಿರುವ ಮಾದರಿ ನೀತಿ ಸಂಹಿತೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ನಾವು ಭಾವಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.

ಚುನಾವಣಾ ಪ್ರಚಾರದ ಸಮಯದಲ್ಲಿ ನಮ್ಮ ರಾಷ್ಟ್ರೀಯ ವೀರರ ಫೋಟೋಗಳ ಅನೈತಿಕ ಮತ್ತು ಕಾನೂನುಬಾಹಿರ ಬಳಕೆಯನ್ನು ತಡೆಯಬೇಕು ಮತ್ತು ಅದನ್ನು ತಕ್ಷಣ ನಿಲ್ಲಿಸಬೇಕು ಎಂದು ಪಕ್ಷವು ಚುನಾವಣಾ ಸಮಿತಿಯನ್ನು ವಿನಂತಿಸಿದೆ.

ಈ ಮಧ್ಯೆ, ಮಾಜಿ ಕ್ರಿಕೆಟಿಗ ಮತ್ತು ಟಿಎಂಸಿ ಅಭ್ಯರ್ಥಿ ವಿಶ್ವಕಪ್ ಫೋಟೋಗಳ ಬಳಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ವಿಶ್ವಕಪ್ ಗೆದ್ದಿದ್ದೇನೆ. ಈ ಸಾಧನೆ ಮಾಡಿದವರು ಬಹಳ ಕಡಿಮೆ. ಆದರೆ ಇದು (ವಿಶ್ವಕಪ್ ಫೋಟೋಗಳ ಬಳಕೆ) ತಪ್ಪಾಗಿದ್ದರೆ, ಚುನಾವಣಾ ಆಯೋಗವು ನೋಡುತ್ತದೆ ಮತ್ತು ಕಾನೂನು ತಂಡವು ಈ ವಿಷಯವನ್ನು ಪರಿಶೀಲಿಸುತ್ತದೆ ಎಂದು ಯೂಸುಫ್ ಪಠಾಣ್ ಅವರನ್ನು ಉಲ್ಲೇಖಿಸಿ ಇಂಡಿಯಾ ಟುಡೇ ಟಿವಿ ವರದಿ ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ