ಇಂಡಿಯಾ ಬಣ ಗೆದ್ದಿದೆ, ಮೋದಿ ಸೋತಿದ್ದಾರೆ: ಮಮತಾ ಬ್ಯಾನರ್ಜಿ
ಪ್ರಧಾನಿಗೆ ಬಹುಮತ ಸಿಗದಿರುವುದು ಸಂತಸ ತಂದಿದೆ. ಈ ಬಾರಿ 400 ಸೀಟು ದಾಟುತ್ತೇವೆ ಎಂದು ಹೇಳಿದ್ದಕ್ಕೆ ಪ್ರಧಾನಿಯವರು ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ, ಕೂಡಲೇ ರಾಜೀನಾಮೆ ನೀಡಬೇಕು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಬ್ಯಾನರ್ಜಿ, "ನೀವು ಇಸಿಐ, ಸಿಬಿಐ ಅನ್ನು ನಿಯಂತ್ರಿಸಬಹುದು, ಆದರೆ ಇಂಡಿಯಾ ಬ್ಲಾಕ್ ನಿಮ್ಮನ್ನು ಕೆಳಗಿಳಿಸುತ್ತದೆ" ಎಂದು ಹೇಳಿದ್ದಾರೆ.
ಕೊಲ್ಕತ್ತಾ ಜೂನ್ 04: ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ (West Bengal) ಟಿಎಂಸಿ (TMC) 30 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಕೋಲ್ಕತ್ತಾದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಬಂಗಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಪ್ರಧಾನಿ ನರೇಂದ್ರ ಮೋದಿ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಕರೆ ನೀಡಿದ್ದಾರೆ. ಜನಾದೇಶಕ್ಕಾಗಿ ಪಶ್ಚಿಮ ಬಂಗಾಳದ ಜನತೆಗೆ ಧನ್ಯವಾದ ಅರ್ಪಿಸಿದ ಮಮತಾ, ಮೋದಿ ಅವರು ಎಲ್ಲ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಈ ಫಲಿತಾಂಶಗಳು ತೋರಿಸಿವೆ. ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ಈ ಬಾರಿ ಬಹಳಷ್ಟು ಜನ ನನ್ನನ್ನು ಕಡಿಮೆ ಅಂದಾಜು ಮಾಡಿದ್ದಾರೆ. ನನಗೆ ಷೇರು ಮಾರುಕಟ್ಟೆ ಹೆಚ್ಚು ಅರ್ಥವಾಗುತ್ತಿಲ್ಲ, ಆದರೆ ನೀವು ಇಂದು ಷೇರು ಮಾರುಕಟ್ಟೆಯನ್ನು ನೋಡಿದ್ದೀರಾ? ”ಎಂದು ಕೇಳಿದ್ದಾರೆ.
ಪ್ರಧಾನಿಗೆ ಬಹುಮತ ಸಿಗದಿರುವುದು ಸಂತಸ ತಂದಿದೆ. ಈ ಬಾರಿ 400 ಸೀಟು ದಾಟುತ್ತೇವೆ ಎಂದು ಹೇಳಿದ್ದಕ್ಕೆ ಪ್ರಧಾನಿಯವರು ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ, ಕೂಡಲೇ ರಾಜೀನಾಮೆ ನೀಡಬೇಕು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಬ್ಯಾನರ್ಜಿ, “ನೀವು ಇಸಿಐ, ಸಿಬಿಐ ಅನ್ನು ನಿಯಂತ್ರಿಸಬಹುದು, ಆದರೆ ಇಂಡಿಯಾ ಬ್ಲಾಕ್ ನಿಮ್ಮನ್ನು ಕೆಳಗಿಳಿಸುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ಫಲಿತಾಂಶ 2024 ಲೈವ್: ದೆಹಲಿ ಎಐಸಿಸಿ ಕಚೇರಿಯಲ್ಲಿ ರಾಹುಲ್, ಖರ್ಗೆ ಸುದ್ದಿಗೋಷ್ಠಿ
2019 ರಲ್ಲಿ ತೃಣಮೂಲ 22 ಸ್ಥಾನಗಳನ್ನು, ಬಿಜೆಪಿ 18 ಮತ್ತು ಸಿಪಿಐ(ಎಂ) ಜೊತೆ ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದವು. ಮಮತಾ ಬ್ಯಾನರ್ಜಿಯವರ ಪಕ್ಷವು ಇಂಡಿಯಾ ಬ್ಲಾಕ್‌ನ ಭಾಗವಾಗಿದ್ದರೂ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಒಟ್ಟಿಗೆ ಸ್ಪರ್ಧಿಸುತ್ತಿವೆ.
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ