Loksabha Polls 2024: ಅರೆಸೇನಾ ಪಡೆ, ಚುನಾವಣಾ ಆಯೋಗಕ್ಕೆ ಬೆದರಿಕೆಯೊಡ್ಡಿದ ತೃಣಮೂಲ ಅಭ್ಯರ್ಥಿ ಪ್ರಸೂನ್ ಬ್ಯಾನರ್ಜಿ
ಬೆದರಿಕೆಯ ದನಿಯಲ್ಲಿ ಮಾತನಾಡಿದ ಟಿಎಂಸಿ ಅಭ್ಯರ್ಥಿ, ಅವರಲ್ಲಿ ಪ್ರಸೂನ್ ಬ್ಯಾನರ್ಜಿ ಆಟವಾಡಲು ಬಂದಿದ್ದಾರೆ ಎಂದಷ್ಟೇ ಹೇಳಿ. ಬೂಟು, ಎಕೆ-47 ಬಳಸುತ್ತಿಲ್ಲ. ನಾನು ಪ್ರಸೂನ್ ಬ್ಯಾನರ್ಜಿಗೆ ಫೋನ್ ಮಾಡುತ್ತಿದ್ದೇನೆ ಅವರು ಅರ್ಧ ಗಂಟೆಯಲ್ಲಿ ಬರುತ್ತಾರೆ. ಅವರು ಬಂದು ಎಲ್ಲ ಕಾನೂನುಗಳನ್ನು ನಿಮಗೆ ಅರ್ಥ ಮಾಡಿಸುತ್ತಾರೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಮಾಲ್ಡಾ ಮಾರ್ಚ್ 18:ಮಾಲ್ಡಾ ಉತ್ತರ ಲೋಕಸಭಾ ಕ್ಷೇತ್ರಕ್ಕೆ ತೃಣಮೂಲ ಕಾಂಗ್ರೆಸ್ (TMC) ನಿಂದ ನಾಮನಿರ್ದೇಶನಗೊಂಡ ಪ್ರಸೂನ್ ಬ್ಯಾನರ್ಜಿ (Prasun Banerjee) ಅವರು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ತಮ್ಮ ಪ್ರಚಾರ ಭಾಷಣದಲ್ಲಿ ಅರೆಸೈನಿಕ ಪಡೆಗಳು ಬೆದರಿಕೆಯೊಡ್ಡಲು ಪ್ರಯತ್ನಿಸಿದರೆ ತಾನು ಮತದಾರರ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಮಾಲ್ಡಾದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಐಪಿಎಸ್ ಅಧಿಕಾರಿ ಪ್ರಸೂನ್ ಬ್ಯಾನರ್ಜಿ, “ಎಲ್ಲಾ ಬಿಎಸ್‌ಎಫ್ ಮತ್ತು ಅರೆಸೇನಾ ಪಡೆಗಳು ಕಾನೂನಿನೊಳಗೆ ಇರಿ ಎಂದು ನಾನು ಹೇಳುತ್ತಿದ್ದೇನೆ. ನಾವೂ ಕಾನೂನಿನೊಳಗೆ ಇರುತ್ತೇವೆ. ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿರಲಿ. ಅರೆಸೇನಾ ಪಡೆ ಬೆದರಿಸಲು ಪ್ರಯತ್ನಿಸಿದರೆ, ‘ಮೇ ಹೂ ನಾ’ (ನಾನಿದ್ದೇನೆ).” ಎಂದು ಹೇಳಿದ್ದಾರೆ.
ಚುನಾವಣಾ ಆಯೋಗದ ಅಧಿಕಾರಿಗಳನ್ನು ನಿರ್ಲಕ್ಷಿಸಬಾರದು. ಅವರನ್ನು ಗೌರವಿಸಬೇಕು.ಚುನಾವಣಾ ಆಯೋಗ (ಅಧಿಕಾರಿಗಳು) ಶಾಲೆಗಳಲ್ಲಿ ಕುಳಿತುಕೊಳ್ಳಲಿ. ಅವರಿಗೆ ನೀರು ಕೊಡಿ, ಅವರನ್ನು ನಿರ್ಲಕ್ಷಿಸಬೇಡಿ. ಬೆದರಿಕೆಯ ದನಿಯಲ್ಲಿ ಮಾತನಾಡಿದ ಟಿಎಂಸಿ ಅಭ್ಯರ್ಥಿ, ಅವರಲ್ಲಿ ಪ್ರಸೂನ್ ಬ್ಯಾನರ್ಜಿ ಆಟವಾಡಲು ಬಂದಿದ್ದಾರೆ ಎಂದಷ್ಟೇ ಹೇಳಿ. ಬೂಟು, ಎಕೆ-47 ಬಳಸುತ್ತಿಲ್ಲ. ನಾನು ಪ್ರಸೂನ್ ಬ್ಯಾನರ್ಜಿಗೆ ಫೋನ್ ಮಾಡುತ್ತಿದ್ದೇನೆ ಅವರು ಅರ್ಧ ಗಂಟೆಯಲ್ಲಿ ಬರುತ್ತಾರೆ. ಅವರು ಬಂದು ಎಲ್ಲ ಕಾನೂನುಗಳನ್ನು ನಿಮಗೆ ಅರ್ಥ ಮಾಡಿಸುತ್ತಾರೆ ಎಂದು ಹೇಳಿ. ವೀಕ್ಷಕರು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ. ‘ಖೇಲಾ ಹೋಬೆ’ (ಆಟ ನಡೆಯುತ್ತಿದೆ) ಎಂದು ಬ್ಯಾನರ್ಜಿ ಹೇಳಿದ್ದಾರೆ.
ಭಾನುವಾರ ತಮ್ಮ ಪ್ರಚಾರದ ಸಂದರ್ಭದಲ್ಲಿ, ಬಿಎಸ್‌ಎಫ್ ಮತ್ತು ಅರೆಸೇನಾ ಪಡೆಗಳು ಸೇರಿದಂತೆ ಎಲ್ಲಾ ಭದ್ರತಾ ಸಿಬ್ಬಂದಿಯನ್ನು ಕಾನೂನಿನ ಮಿತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಬ್ಯಾನರ್ಜಿ ಹೇಳಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಅಗತ್ಯವನ್ನು ಅವರು ಒತ್ತಿ ಹೇಳಿದ ಅವರು ಮತದಾರರ ವಿರುದ್ಧ ಯಾವುದೇ ಬೆದರಿಕೆ ತಂತ್ರಗಳನ್ನು ಬಳಸಿದರೆ ಮಧ್ಯಪ್ರವೇಶಿಸುವುದಾಗಿ ಹೇಳಿದ್ದಾರೆ.
ಬ್ಯಾನರ್ಜಿ ಪ್ರಚಾರ ವೇಳೆ ಹೇಳಿದ ಮಾತುಗಳ ವಿಡಿಯೊವನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಪ್ರಸೂನ್ ಬ್ಯಾನರ್ಜಿ, ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಅಡಚಣೆಗಳನ್ನು ಪರಿಹರಿಸುವುದಾಗಿ ಮತದಾರರರಿಗೆ ಭರವಸೆ ನೀಡಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳನ್ನು ಗೌರವದಿಂದ ನಡೆಸಿಕೊಳ್ಳುವಂತೆ ಮತದಾರರಿಗೆ ಹೇಳಿದ ಅವರು, ಚುನಾವಣಾ ಪ್ರಕ್ರಿಯೆಯಲ್ಲಿ ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳನ್ನು ನಾನು ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ. ಅಧಿಕಾರಿಗಳೊಂದಿಗೆ ಘರ್ಷಣೆ ಮಾಡದಂತೆ ಸಲಹೆ ನೀಡಿದ ಅವರು ಯಾವುದೇ ಸಮಸ್ಯೆಗಳನ್ನು ಶಾಂತಿಯುತ ಮಾರ್ಗಗಳ ಮೂಲಕ ನಿಭಾಯಿಸಲು ಸಲಹೆ ನೀಡಿದರು.
ಮಾಳವಿಯಾ ಟ್ವೀಟ್
Prasun Bandyopadhyay, the ‘colourful’ TMC candidate from Uttar Malda and former police officer, warns central forces and election commission.
He said, “I am telling all the BSF, paramilitary to stay within the law. We will also stay within the law. Let the elections be free and… pic.twitter.com/tjwiDjmokg
— Amit Malviya (मोदी का परिवार) (@amitmalviya) March 17, 2024
ತಮ್ಮ ಕ್ಷೇತ್ರದಲ್ಲಿ ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿಯೂ ಬ್ಯಾನರ್ಜಿ ಎಚ್ಚರಿಸಿದ್ದಾರೆ.
ಏತನ್ಮಧ್ಯೆ, ಬಿಜೆಪಿಯ ಅಮಿತ್ ಮಾಳವಿಯಾ ಅವರು ಬ್ಯಾನರ್ಜಿಯವರ ಹೇಳಿಕೆಗಳನ್ನು ಕೇಂದ್ರ ಪಡೆಗಳು ಮತ್ತು ಚುನಾವಣಾ ಆಯೋಗಕ್ಕೆ ಎಚ್ಚರಿಕೆ ಎಂದು ವ್ಯಾಖ್ಯಾನಿಸಿದ್ದು, ಟಿಎಂಸಿ ನಾಯಕನ ಹೇಳಿಕೆಗಳ ವಿವಾದಾತ್ಮಕ ಸ್ವರೂಪವನ್ನು ಎತ್ತಿ ತೋರಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದ ಎಲ್ಲಾ ಕ್ಷೇತ್ರಗಳಿಗೆ ಟಿಎಂಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಚುನಾವಣಾ ಆಯೋಗದ ಪ್ರಕಟಣೆಯ ಪ್ರಕಾರ ಏಳು ಹಂತಗಳಲ್ಲಿ ಇಲ್ಲಿ ಚುನಾವಣೆ ನಡೆಯಲಿದೆ. ಮಾಲ್ಡಾ ಉತ್ತರ ಕ್ಷೇತ್ರಕ್ಕೆ ಮೇ 4 ರಂದು ಮತದಾನ ನಡೆಯಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:29 pm, Mon, 18 March 24