Dharmendran Pradhan: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಒಡಿಶಾದ ದೇವಗಡ್ನಲ್ಲಿ ಭರ್ಜರಿ ರೋಡ್ಶೋ
Union Minister Dharmendra Pradhan Road Show: ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಡಿಶಾದ ದೇವಗಡ್ನಲ್ಲಿ ಭಾನುವಾರ ಚುನಾವಣಾ ಪ್ರಚಾರ ಮಾಡಿದರು. ಪ್ರಧಾನ್ ಬಿಜೆಪಿ ಅಭ್ಯರ್ಥಿಯಾಗಿರುವ ಸಂಬಲಪುರ ಕ್ಷೇತ್ರದ ವ್ಯಾಪ್ತಿಗೆ ದೇವಗಡ್ ಬರುತ್ತದೆ. ಎಪ್ರಿಲ್ 5ರಿಂದಲೂ ಧರ್ಮೇಂದ್ರ ಪ್ರಧಾನ್ ಈ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕಳೆದ 10 ವರ್ಷದಲ್ಲಿ ದೇಶದಲ್ಲಿ ಮತ್ತು ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ವಿಚಾರಗಳ ಬಗ್ಗೆ ಧರ್ಮೇಂದ್ರ ಪ್ರಧಾನ್ ಮಾತನಾಡುತ್ತಿದ್ದಾರೆ.
ಭುವನೇಶ್ವರ್, ಏಪ್ರಿಲ್ 7: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಒಡಿಶಾದ ದೇವಗಡ್ ಪಟ್ಟಣದಲ್ಲಿ ರೋಡ್ಶೋ ನಡೆಸಿದರು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು. ಧರ್ಮೇಂದ್ರ ಪ್ರಧಾನ್ ಅವರು ಸಂಬಲಪುರ್ ಲೋಕಸಭಾ ಕ್ಷೇತ್ರದಲ್ಲಿ (Sambalpur Constituency) ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ದೇವಗಡ್ ಇವರ ಕ್ಷೇತ್ರದಲ್ಲಿದೆ. ಕಳೆದ ಮೂರು ದಿನಗಳಿಂದ ಪ್ರಧಾನ್ ಅವರು ತಮ್ಮ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಏಪ್ರಿಲ್ 5, ಶುಕ್ರವಾರದಂದು ಧರ್ಮೇಂದ್ರ ಪ್ರಧಾನ್ ಅವರು ಒಡಿಶಾದ ಅಂಗುಲ್ ಜಿಲ್ಲೆಯ ಛೇಂದಿಪಾದ ಬ್ಲಾಕ್ನ ಬ್ರಾಹ್ಮಣಿಬಿಲ್ ಗ್ರಾಮದಿಂದ ಚುನಾವಣಾ ಪ್ರಚಾರ ಆರಂಭಿಸಿದ್ದರು. ಮಾತೆ ಡಾಕೇಶ್ವರಿ ಮಂದಿರಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿ ಬಳಿಕ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.
ಇದನ್ನೂ ಓದಿ: ತಿರುಚ್ಚಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರೋಡ್ ಶೋಗಿಲ್ಲ ಅನುಮತಿ, ಪೊಲೀಸ್ ಆಯುಕ್ತರ ಭೇಟಿ
ನಿನ್ನೆ ಶನಿವಾರದಂದು ಸಂಬಲಪುರ ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಿದ್ದರು. ಕಳೆದ 10 ವರ್ಷದಲ್ಲಿ ದೇಶದಲ್ಲಿ ಹಾಗೂ ಸಂಬಲಪುರ ಲೋಕಸಭಾ ಕ್ಷೇತ್ರದಲ್ಲಿ ಆಗಿರುವ ಸಕಾರಾತ್ಮಕ ಬದಲಾವಣೆ ಮತ್ತು ಅಭಿವೃದ್ಧಿ ಬಗ್ಗೆ ತಿಳಿಸಿದರು.
ಪ್ರಧಾನ್ ರೋಡ್ಶೋ ವಿಡಿಯೋ
#WATCH | Dharmendra Pradhan, Union Minister and BJP Lok Sabha candidate from Sambalpur, holds a roadshow in Deogarh, under the Sambalpur parliamentary constituency in Odisha.#LokSabhaElections2024 pic.twitter.com/P9PPdOW9B3
— ANI (@ANI) April 7, 2024
ಸಂಬಲಪುರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುತ್ತಿರುವುದು, ಜಿಲ್ಲೆಯಲ್ಲಿ ಐಐಎಂ ತಂದಿರುವುದು, ಪಿಎಂ ಆವಾಸ್ ಯೋಜನೆಯಲ್ಲಿ ಜಿಲ್ಲೆಯ ಸಾಕಷ್ಟು ಬಡವರಿಗೆ ಮನೆಗಳು ಸಿಕ್ಕಿರುವುದು, ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಿರುವುದು, ಉಜ್ವಲ ಯೋಜನೆಯಲ್ಲಿ ಮಹಿಳೆಯರಿಗೆ ಅಡುಗೆ ಅನಿಲದ ಭಾಗ್ಯ ಸಿಕ್ಕಿರುವುದು ಹೀಗೆ ಹಲವು ಅಭಿವೃದ್ಧಿ ಸಾಧನೆಗಳ ಬಗ್ಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿದರು. ಈ ಬಾರಿಯೂ ಸಂಬಲಪುರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟವು ಭ್ರಷ್ಟ ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳ ಅಡಗುತಾಣವಾಗಿದೆ: ನರೇಂದ್ರ ಮೋದಿ
ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾಗಿರುವ ಧರ್ಮೇಂದ್ರ ಪ್ರಧಾನ್ ಮಧ್ಯಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. 2004ರಲ್ಲಿ ಅವರು ದೇವಗಡ್ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿ ಆಯ್ಕೆ ಆಗಿದ್ದರು. 2014ರ ಚುನಾವಣೆಯಲ್ಲಿ ಸಂಬಲಪುರ್ ಕ್ಷೇತ್ರವು ಬಿಜು ಜನತಾ ದಳದ ಪಾಲಾಗಿತ್ತು. 2019ರಲ್ಲಿ ಬಿಜೆಪಿಯ ನಿತೇಶ್ ಗಂಗಾ ದೇಬ್ ಈ ಕ್ಷೇತ್ರವನ್ನು ಜಯಿಸಿದ್ದರು. ಈ ಬಾರಿ ಧರ್ಮೇಂದ್ರ ಪ್ರಧಾನ್ ಅವರಿಗೆ ಸಂಬಲಪುರ್ ಕ್ಷೇತ್ರದ ಟಿಕೆಟ್ ಸಿಕ್ಕಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:41 pm, Sun, 7 April 24