ಮಧ್ಯಪ್ರದೇಶ ಚುನಾವಣೆ: ಅಮಿತ್​ ಶಾರಿಂದ ಭರವಸೆಗಳ ಸುರಿಮಳೆ, ಡಬಲ್​ ಇಂಜಿನ್ ಸರ್ಕಾರ ರಚನೆಗೆ ಅವಕಾಶ ನೀಡಲು ಮನವಿ

ಮಧ್ಯಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರ ಭರದಿಂದ ಸಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ನೀಡುವಂತೆ ಮನವಿ ಮಾಡಿದರು ಮತ್ತು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಡಬಲ್ ಇಂಜಿನ್ ಸರ್ಕಾರ ರಚನೆ ಮಾಡಿದರೆ 6 ಸಾವಿರ ರೂ.ಗಳ ಯೋಜನೆಯನ್ನು 12 ಸಾವಿರ ರೂ.ಗೆ ಪರಿವರ್ತಿಸುತ್ತೇವೆ ಎಂದರು.

ಮಧ್ಯಪ್ರದೇಶ ಚುನಾವಣೆ: ಅಮಿತ್​ ಶಾರಿಂದ ಭರವಸೆಗಳ ಸುರಿಮಳೆ, ಡಬಲ್​ ಇಂಜಿನ್ ಸರ್ಕಾರ ರಚನೆಗೆ ಅವಕಾಶ ನೀಡಲು ಮನವಿ
ಅಮಿತ್ ಶಾ
Image Credit source: Business Standard

Updated on: Nov 13, 2023 | 3:11 PM

ಮಧ್ಯಪ್ರದೇಶ(Madhya Pradesh)ದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರ ಭರದಿಂದ ಸಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah)  ರಾಜ್ಯದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ನೀಡುವಂತೆ ಮನವಿ ಮಾಡಿದರು ಮತ್ತು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಡಬಲ್ ಇಂಜಿನ್ ಸರ್ಕಾರ ರಚನೆ ಮಾಡಿದರೆ ಈಗಿರುವ ಸಮ್ಮಾನ್ ನಿಧಿಯ 6 ಸಾವಿರ ರೂ.ಗಳನ್ನು 12 ಸಾವಿರ ರೂ.ಗೆ ಪರಿವರ್ತಿಸುತ್ತೇವೆ ಎಂದರು.

ರಾಹುಲ್ ಗಾಂಧಿ ಹೇಳ್ತಿದ್ರು, 370ನೇ ವಿಧಿಯನ್ನು ತೆಗೆದುಹಾಕಬೇಡಿ, ಕಾಶ್ಮೀರದಲ್ಲಿ ರಕ್ತದ ನದಿ ಹರಿಯುತ್ತದೆ ಎಂದು ಆದರೆ ಅಂಥಹ ಯಾವುದೇ ಘಟನೆಗಳು ನಡೆದಿಲ್ಲ, ಕಾಶ್ಮೀರ ಎಂದೂ ನಮ್ಮದೆ ಎಂದರು. ಯುಪಿಎ ಸರಕಾರವನ್ನು ನೆನಪಿಸಿಕೊಂಡ ಗೃಹ ಸಚಿವರು, ಸೋನಿಯಾ-ಮನಮೋಹನ್ ಸರ್ಕಾರದ ಅವಧಿಯಲ್ಲಿ ಆಲಿಯಾ, ಮಲಿಯಾ, ಜಮಾಲಿಯಾ ಪಾಕಿಸ್ತಾನದಿಂದ ನುಗ್ಗಿ ದಾಳಿ ನಡೆಸುತ್ತಿದ್ದರು.

ಮೋದಿ ಸರ್ಕಾರ ಪಾಕಿಸ್ತಾನದ ಮನೆಗೆ ನುಗ್ಗಿ ಉಗ್ರರನ್ನು ಕೊಂದಿತು. ಈ ಜನರು ಯಾವಾಗಲೂ ತ್ರಿವರ್ಣ ಧ್ವಜವನ್ನು ಅವಮಾನಿಸುತ್ತಿದ್ದರು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವರ್ಣ ಧ್ವಜಕ್ಕೆ ಕೀರ್ತಿ ತಂದರು ಎಂದರು. ರಾಜ್ಯದಲ್ಲಿ ಹಗರಣಗಳನ್ನು ಹೊರತುಪಡಿಸಿ ಕಮಲನಾಥ್‌ರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಬಡತನವನ್ನು ಹೋಗಲಾಡಿಸುತ್ತೇವೆ ಎಂದು ಹೋಗಿ ಬದಲಿಗೆ ಬಡವರನ್ನೇ ದೂರ ತಳ್ಳಿದೆ.

ಮತ್ತಷ್ಟು ಓದಿ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ -ಎಸ್‌ಪಿ ಸಂಬಂಧದಲ್ಲಿ ಬಿರುಕು?; ಯುಪಿಯಲ್ಲಿ ಅಖಿಲೇಶ್​​ಗೆ ಸಿಕ್ಕಿದರೆ ಹೊಸ ಪಾಲುದಾರ?

‘India’ ಮೈತ್ರಿಕೂಟ ಅಥವಾ ಕಾಂಗ್ರೆಸ್​ ಮಧ್ಯಪ್ರದೇಶದ ಕಲ್ಯಾಣ ಮಾಡಲು ಸಾಧ್ಯವಿಲ್ಲ, ಧಾನಿ ಮೋದಿಯವರು ಒಂಬತ್ತು ವರ್ಷಗಳಲ್ಲಿ ಏನು ಹೇಳುತ್ತಾರೋ ಅದನ್ನೇ ಮಾಡಿದ್ದಾರೆ. ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಮಧ್ಯಪ್ರದೇಶಕ್ಕೆ ಕೊಟ್ಟ ಹಣವೆಷ್ಟು? ಎಂದು ಪ್ರಶ್ನೆ ಮಾಡಿದರು.

ಮತ್ತೊಮ್ಮೆ ಬಿಜೆಪಿ ಸರ್ಕಾರ ರಚಿಸಲು ನೀವು ಸಹಾಯ ಮಾಡಬೇಕು, ಮುಂದಿನ ದಿನಗಳಲ್ಲಿ 10 ಲಕ್ಷದವರೆಗೆ ಉಚಿತ ಚಿಕಿತ್ಸೆ, 82 ಲಕ್ಷ ತಾಯಂದಿರು ಮತ್ತು ಸಹೋದರಿಯರಿಗೆ ಉಜ್ವಲ ಅನಿಲ ಸಂಪರ್ಕವನ್ನು ನೀಡಲಾಗಿದೆ ಎಂದರು. ನವೆಂಬರ್ 17 ರಂದು ಮಧ್ಯಪ್ರದೇಶ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಹೊರಬರಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:06 pm, Mon, 13 November 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us