Meghalaya Election Result: ಮೇಘಾಲಯ ಸರ್ಕಾರ ರಚನೆಗೆ ಟ್ವಿಸ್ಟ್, ಬಹುಮತಕ್ಕೆ ಕಗ್ಗಂಟಾದ ಇಬ್ಬರು ಶಾಸಕರು

ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಗೆ ನೀಡಿದ ಬೆಂಬಲವನ್ನು HSPDP ಇಬ್ಬರು ಶಾಸಕರು ಶುಕ್ರವಾರ ಸಂಜೆ ಹಿಂತೆಗೆದುಕೊಂಡಿದ್ದಾರೆ.

Meghalaya Election Result: ಮೇಘಾಲಯ ಸರ್ಕಾರ ರಚನೆಗೆ ಟ್ವಿಸ್ಟ್, ಬಹುಮತಕ್ಕೆ ಕಗ್ಗಂಟಾದ ಇಬ್ಬರು ಶಾಸಕರು
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Mar 04, 2023 | 10:23 AM

ಶಿಲ್ಲಾಂಗ್: ಇತ್ತೀಚೆಗೆ ನಡೆದ 3 ರಾಜ್ಯಗಳ (ತ್ರಿಪುರ, ನಾಗಲ್ಯಾಂಡ್, ಮೇಘಾಲಯ) ಚುನಾವಣೆಯಲ್ಲಿ ಭಾರಿ ಚರ್ಚೆಗಳು ನಡೆದಿತ್ತು. ಸರ್ಕಾರ ರಚನೆಗೆ ಎಲ್ಲ ಪಕ್ಷಗಳು ಸಮ್ಮಿಶ್ರ ಮಾಡಿಕೊಳ್ಳುವಂತೆ ಕಾಯುತ್ತಿದ್ದವು, ಎರಡು ರಾಜ್ಯಗಳಲ್ಲಿ ಈ ವಿಚಾರಗಳು ಸುಖಾಂತ್ಯ ಕಂಡರು, ಮೇಘಾಲಯಕ್ಕೆ (Meghalaya) ಇದೊಂದು ದೊಡ್ಡ ಸಂಕಷ್ಟವಾಗಿ ಎದುರಾಗಿದೆ. ಮಾ. 7ರಂದು ಮೇಘಾಲಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಬೇಕುನ್ನೆವಷ್ಟರಲ್ಲಿ HSPDP ಪಕ್ಷ ಕೈಕೊಡುವ ಸಾಧ್ಯತೆಗಳು ಇದೆ ಎಂದು ಹೇಳಲಾಗುತ್ತಿದೆ. ಹೌದು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಗೆ ನೀಡಿದ ಬೆಂಬಲವನ್ನು HSPDP ಇಬ್ಬರು ಶಾಸಕರು ಶುಕ್ರವಾರ ಸಂಜೆ ಹಿಂತೆಗೆದುಕೊಂಡಿದ್ದಾರೆ.

ಶುಕ್ರವಾರ, ಸಂಗ್ಮಾ ಅವರು 32 ಶಾಸಕರು ಸಹಿ ಮಾಡಿದ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು. ಸರ್ಕಾರ ರಚನೆಗೆ ಅಗತ್ಯವಿರುವ 31 ಶಾಸಕರಿಗಿಂತ ಹೆಚ್ಚು ಮಂದಿ ಇದ್ದರೆ ಎಂದು ಮುಂದಿನ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಮಾರ್ಚ್ 7ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಪತ್ರದಲ್ಲಿ ಎನ್‌ಪಿಪಿಯ 26 ಶಾಸಕರು, ಬಿಜೆಪಿಯ ಇಬ್ಬರು, ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಎಚ್‌ಎಸ್‌ಪಿಡಿಪಿ) ಇಬ್ಬರು ಮತ್ತು ಇಬ್ಬರು ಸ್ವತಂತ್ರ ಶಾಸಕರ ಸಹಿ ಇದೆ. ನಮಗೆ ಸಂಪೂರ್ಣ ಬಹುಮತವಿದೆ. ಬಿಜೆಪಿ ಈಗಾಗಲೇ ಬೆಂಬಲ ನೀಡಿದೆ. ಇನ್ನು ಕೆಲವರು ಬೆಂಬಲ ನೀಡಿದ್ದಾರೆ ಎಂದು ಪತ್ರ ಸಲ್ಲಿಸಿದ ನಂತರ ಕಾನ್ರಾಡ್ ಹೇಳಿದ್ದಾರೆ.

ಆದರೆ ಸಂಜೆಯ ನಂತರ ಈ ಪತ್ರಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. NPP ನೇತೃತ್ವದ ಸರ್ಕಾರ ರಚನೆಯನ್ನು ಬೆಂಬಲಿಸಲು ಪಕ್ಷದ ಶಾಸಕರಿಗೆ ಅಧಿಕಾರ ನೀಡಿಲ್ಲ ಎಂದು HSPDP ಪತ್ರವೊಂದನ್ನು ನೀಡಿತು. ಪತ್ರಿಕಾ/ಮಾಧ್ಯಮ ವರದಿಯ ಮೂಲಕ ನಾವು ನೋಡಿದಂತೆ ನಿಮ್ಮ ಸರ್ಕಾರ ರಚನೆಗೆ ಬೆಂಬಲ ನೀಡಲು ಎಚ್‌ಎಸ್‌ಪಿಡಿಪಿ ಇಬ್ಬರು ಶಾಸಕರಾದ ಮೆಥೋಡಿಯಸ್ ದಖರ್ ಮತ್ತು ಶಕ್ಲಿಯಾರ್ ವಾರ್ಜ್ರಿ ಅವರಿಗೆ ಅಧಿಕಾರ ನೀಡಿಲ್ಲ ಎಂದು ಎಚ್‌ಎಸ್‌ಪಿಡಿಪಿ ಅಧ್ಯಕ್ಷ ಕೆಪಿ ಪಾಂಗ್ನಿಯಾಂಗ್ ಮತ್ತು ಕಾರ್ಯದರ್ಶಿ ಪನ್ಬೋರ್ಲಾಂಗ್ ರಿಂಟಾಥಿಯಾಂಗ್ ಕಾನ್ರಾಡ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Northeast Election Results: ನಾಗಾಲ್ಯಾಂಡ್, ತ್ರಿಪುರಾದಲ್ಲಿ ಬಿಜೆಪಿ ಜಯಭೇರಿ; ಮೇಘಾಲಯದಲ್ಲಿ ಸಂಗ್ಮಾ ಜತೆ ಮೈತ್ರಿ ಸರ್ಕಾರ ರಚನೆಗೆ ಸಿದ್ಧತೆ

ಈ ಸಂಬಂಧದ ಪಕ್ಷವು (HSPDP) ಯಾವುದೇ ಪಾತ್ರವನ್ನು ಹೊಂದಿಲ್ಲ ಮತ್ತು ಆದ್ದರಿಂದ ನಿಮ್ಮ ಪಕ್ಷಕ್ಕೆ ನಮ್ಮ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತದೆ. ಇಂದಿನಿಂದ ಜಾರಿಗೆ ಬರಲಿದೆ. ಈ ಬಗ್ಗೆ ರಾಜ್ಯಪಾಲರಿಗೂ ಪತ್ರ ಕಳುಹಿಸಲಾಗಿದೆ ಎಂದು ಹೇಳಿದೆ. ಎಚ್‌ಎಸ್‌ಪಿಡಿಪಿ ಪತ್ರಕ್ಕೆ ಎನ್‌ಪಿಪಿಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಇಲ್ಲ, ಆದರೆ ಪಕ್ಷದ ಮೂಲಗಳ ಪ್ರಕಾರ ಇದು ಸಣ್ಣ ಬಿಕ್ಕಟ್ಟುಗಳು ಮತ್ತು ಸುಲಭವಾಗಿ ಸರ್ಕಾರವನ್ನು ರಚಿಸಲು ಅಗತ್ಯವಿರುವ ಸಂಖ್ಯೆಯನ್ನು ಹೊಂದಿದೆ ಎಂದು ಹೇಳಿಕೊಂಡಿವೆ.

ಶುಕ್ರವಾರದಂದು, ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಚ್‌ಎಸ್‌ಪಿಡಿಪಿ, ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ (ಪಿಡಿಎಫ್) ಮತ್ತು ವಾಯ್ಸ್ ಆಫ್ ಪೀಪಲ್ ಪಾರ್ಟಿ (ವಿಪಿಪಿ) ಯ ಹೊಸದಾಗಿ ಚುನಾಯಿತ ಶಾಸಕರು ಮತ್ತು ನಾಯಕರು ಶುಕ್ರವಾರ ಶಿಲ್ಲಾಂಗ್‌ನಲ್ಲಿ ಐಕ್ಯರಂಗವನ್ನು ರಚಿಸಲು ಮತ್ತು ಈ ಬಗ್ಗೆ ಸಭೆ ನಡೆಸಿದರು. NPP ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಬೇಕು ಎಂದು ಈ ಸಭೆಯಲ್ಲಿ ಸಿದ್ಧರಿಸಲಾಗಿತ್ತು.

ಇಬ್ಬರು HSPDP ಶಾಸಕರು ಆರಂಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದರು, ಆದರೆ ನಂತರ ಆ ಆ ಸಭೆಯಿಂದ ಹೊರಗೆ ಬಂದಿದ್ದಾರೆ ಎಂದು ಟಿಎಂಸಿ ನಾಯಕ ಮುಕುಲ್ ಸಂಗ್ಮಾ ಹೇಳಿದ್ದಾರೆ. HSPDP ಮತ್ತು UDP ಎರಡೂ ಭಾಗವಾಗಿದ್ದ ಹಿಂದಿನ NPP ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ UDP ನಾಯಕ ಲಹ್ಕ್ಮೆನ್ ರಿಂಬುಯಿ ಅವರ ನಿವಾಸದಲ್ಲಿ ಸಭೆ ನಡೆಯಿತು. ಕಾನ್ರಾಡ್ ಸಿಎಂ ಅಧಿಕಾರಿಕ್ಕೆ ಬರದಂತೆ ತಡೆಯುವ ಪ್ರಯತ್ನಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕ ಮುಕುಲ್ ಸಂಗ್ಮಾ ಅವರ ನೇತೃತ್ವವನ್ನು ವಹಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Published On - 10:22 am, Sat, 4 March 23

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು