ಪಂಜಾಬ್: ಧುರಿ ವಿಧಾನಸಭಾ ಕ್ಷೇತ್ರದಿಂದ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಸ್ಪರ್ಧೆ

| Updated By: ರಶ್ಮಿ ಕಲ್ಲಕಟ್ಟ

Updated on: Jan 20, 2022 | 8:07 PM

Punjab Assembly Election 2022 ಮಾನ್ ಇನ್ನೊಂದು ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಾರೆಯೇ ಎಂದು ಕೇಳಿದಾಗ, ಪಂಜಾಬ್‌ನ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಅವರು ಗೆಲ್ಲುತ್ತಾರೆ ಎಂದು ಚಡ್ಡಾ ಹೇಳಿದರು.

ಪಂಜಾಬ್: ಧುರಿ ವಿಧಾನಸಭಾ ಕ್ಷೇತ್ರದಿಂದ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಸ್ಪರ್ಧೆ
ಭಗವಂತ್ ಮಾನ್
Follow us on

ಚಂಡೀಗಢ: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (AAP) ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ (Bhagwant Mann) ಅವರನ್ನು ಸಂಗ್ರೂರ್ ಜಿಲ್ಲೆಯ ಧುರಿ ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಘೋಷಿಸಿದೆ. “ಧುರಿ ಜನರು ಈ ಬಾರಿಯೂ ಅವರ ಮೇಲೆ ತಮ್ಮ ಪ್ರೀತಿಯನ್ನು ತೋರಿಸುತ್ತಾರೆ ಎಂದು ನಮಗೆ ಖಚಿತವಾಗಿದೆ” ಎಂದು ಎಎಪಿ ಸಹ-ಪ್ರಭಾರಿ ರಾಘವ್ ಚಡ್ಡಾ ಗುರುವಾರ ಹೇಳಿದರು. ಪ್ರಸ್ತುತ ಸಂಗ್ರೂರ್‌ನಿಂದ ಸಂಸದರಾಗಿರುವ ಮಾನ್ ಅವರು ಹೆಚ್ಚಿನ ಮತಗಳಿಂದ ಚುನಾವಣೆ  ಗೆದ್ದಿದ್ದರು. ಧುರಿಯಿಂದಲೇ ಅವರು 2014 ಮತ್ತು 2019 ರ ಲೋಕಸಭೆ ಚುನಾವಣೆ ಗೆದ್ದಿದ್ದರು. ಮಾನ್ ಇನ್ನೊಂದು ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಾರೆಯೇ ಎಂದು ಕೇಳಿದಾಗ, ಪಂಜಾಬ್‌ನ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಅವರು ಗೆಲ್ಲುತ್ತಾರೆ ಎಂದು ಚಡ್ಡಾ ಹೇಳಿದರು. “ನಾವು ಮಾನ್ ಸಾಹೇಬ್ ಅವರನ್ನು ಯಾವುದೇ ಒಂದು ಸ್ಥಳದಲ್ಲಿ ಕಟ್ಟಿಹಾಕಲು ಬಯಸುವುದಿಲ್ಲ, ಆದ್ದರಿಂದ ನಾವು ಅವರ ಕ್ಷೇತ್ರವನ್ನು ಎಚ್ಚರಿಕೆಯಿಂದ ಆರಿಸಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ ಭಗವಂತ್ ಮಾನ್ ಅವರ ಸಾಮರ್ಥ್ಯಗಳನ್ನು ಗರಿಷ್ಠವಾಗಿ ಬಳಸಿಕೊಳ್ಳಲು ನಾವು ಬಯಸುತ್ತೇವೆ ಎಂದು ದೆಹಲಿ ಶಾಸಕರು ಹೇಳಿದ್ದಾರೆ.  ಕಾಂಗ್ರೆಸ್, ಎಸ್‌ಎಡಿ, ಬಿಜೆಪಿ ಮತ್ತು ಸಂಯುಕ್ತ ಸಮಾಜ ಮೋರ್ಚಾ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಿಸುವ “ಸ್ಥಾನದಲ್ಲಿಲ್ಲ”. ಮುಖ್ಯಮಂತ್ರಿ ಅಭ್ಯರ್ಥಿಯವನ್ನು ಚುನಾವಣೆಯಲ್ಲಿ ಕಣಕ್ಕಿಳಿಸುವ ಏಕೈಕ ಪಕ್ಷ ಎಎಪಿ ಎಂದು ಚಡ್ಡಾ ಹೇಳಿದರು.  ಘೋಷಣೆಯ ವೇಳೆ ಗೈರಾಗಿದ್ದ ಮಾನ್ ಕ್ಷೇತ್ರದಲ್ಲಿ ಪ್ರಚಾರದಲ್ಲಿ ನಿರತರಾಗಿದ್ದರು ಎಂದು ಎಎಪಿ ಸಹ-ಪ್ರಭಾರಿ ತಿಳಿಸಿದ್ದಾರೆ.

ಮಾನ್ ಎರಡನೇ ಬಾರಿಗೆ ಪ್ರತಿನಿಧಿಸುತ್ತಿರುವ ಸಂಗ್ರೂರ್ ಲೋಕಸಭಾ ಕ್ಷೇತ್ರವನ್ನು ಒಳಗೊಂಡಿರುವ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಧುರಿ ಕೂಡ ಸೇರಿದೆ. ಲೆಹ್ರಾ, ಸುನಮ್, ದಿರ್ಬಾ, ಬರ್ನಾಲಾ, ಮಲೇರ್‌ಕೋಟ್ಲಾ, ಸಂಗ್ರೂರ್, ಭದೌರ್ ಮತ್ತು ಮೆಹಲ್ ಕಲಾನ್ ಇತರ ವಿಭಾಗಗಳಾಗಿವೆ. 2017 ರ ಚುನಾವಣೆಯಲ್ಲಿ ಎಎಪಿ ಈ ಅಸೆಂಬ್ಲಿ ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ಗೆದ್ದಿತು, ಮೂರು ಕಾಂಗ್ರೆಸ್ ಮತ್ತು ಒಂದು ಸ್ಥಾನವನ್ನು ಎಸ್ಎಡಿ ಗಳಿಸಿತ್ತು.


2017 ರಲ್ಲಿ ಎಎಪಿ ಅಭ್ಯರ್ಥಿ ಜಸ್ವಿರ್ ಸಿಂಗ್ ಜಸ್ಸಿ ಅವರನ್ನು ಸುಮಾರು 3,000 ಮತಗಳಿಂದ ಸೋಲಿಸಿದ ಹಾಲಿ ಶಾಸಕ ಕಾಂಗ್ರೆಸ್ ಅಭ್ಯರ್ಥಿ ದಲ್ವಿರ್ ಸಿಂಗ್ ಗೋಲ್ಡಿ ವಿರುದ್ಧ ಮಾನ್ ಕಣಕ್ಕಿಳಿಯಲಿದ್ದಾರೆ.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ, ಮಾನ್ ಕಾಂಗ್ರೆಸ್ ಅಭ್ಯರ್ಥಿ ಕೇವಲ್ ಧಿಲ್ಲೋನ್ ಅವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು. 2014 ರಲ್ಲಿ ಚುನಾಯಿತರಾದ ನಾಲ್ವರು ಎಎಪಿ ಸಂಸದರ ಪೈಕಿ ಮಾನ್ ಅವರಿಗೆ ಮಾತ್ರ 2019 ರಲ್ಲಿ ತಮ್ಮ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. 2014 ರಲ್ಲಿ ಅವರು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಎಸ್ಎಡಿ ಸ್ಟಾಲ್ವರ್ಟ್ ಸುಖದೇವ್ ಸಿಂಗ್ ದಿಂಡ್ಸಾ ಅವರನ್ನು ಸೋಲಿಸಿದರು. ದಿಂಡ್ಸಾ ಈಗ ಎನ್‌ಡಿಎಯಲ್ಲಿದ್ದಾರೆ.

ಧುರಿ ಕೂಡ ಮಾಲ್ವಾ ಪ್ರದೇಶದ ಭಾಗವಾಗಿದೆ. ಇದು 2017 ರಲ್ಲಿ 20 ಪಕ್ಷದ ಶಾಸಕರಲ್ಲಿ 18 ಎಎಪಿ ಅಭ್ಯರ್ಥಿಗಳನ್ನು ವಿಧಾನ ಸಭೆಗೆ ಕಳುಹಿಸಿದ್ದ ಅತಿ ಹೆಚ್ಚು ಎಎಪಿ ಅಭ್ಯರ್ಥಿಗಳನ್ನು ಕಳುಹಿಸಿದೆ. ಈ ಪೈಕಿ ಹಲವಾರು ಶಾಸಕರು ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದಾರೆ ಮತ್ತು ಮುಂಬರುವ ಚುನಾವಣೆಗೆ ಮಾಲ್ವಾ ಮತ್ತು ದೋಬಾದಿಂದ ತಲಾ ಒಬ್ಬರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ:  Goa Assembly Elections 2022: ಮನೋಹರ್ ಪರಿಕ್ಕರ್ ಪುತ್ರನಿಗೆ ಆಪ್‌ನಿಂದ ಆಹ್ವಾನ: ಕುತೂಹಲ ಕೆರಳಿಸಿದ ಬಿಜೆಪಿ ನಿರ್ಧಾರ