AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Goa Assembly Elections 2022: ಮನೋಹರ್ ಪರಿಕ್ಕರ್ ಪುತ್ರನಿಗೆ ಆಪ್‌ನಿಂದ ಆಹ್ವಾನ: ಕುತೂಹಲ ಕೆರಳಿಸಿದ ಬಿಜೆಪಿ ನಿರ್ಧಾರ

ಪರಿಕ್ಕರ್ ಕುಟುಂಬವನ್ನು ಬಿಜೆಪಿ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಉಪಯೋಗ ಪಡೆದ ನಂತರ ಬಿಟ್ಟುಬಿಡುವುದು ಬಿಜೆಪಿಯ ಜಾಯಮಾನ ಎಂದು ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ.

Goa Assembly Elections 2022: ಮನೋಹರ್ ಪರಿಕ್ಕರ್ ಪುತ್ರನಿಗೆ ಆಪ್‌ನಿಂದ ಆಹ್ವಾನ: ಕುತೂಹಲ ಕೆರಳಿಸಿದ ಬಿಜೆಪಿ ನಿರ್ಧಾರ
ಉತ್ಪಲ್ ಪರಿಕರ್ ಮತ್ತು ಅರವಿಂದ್ ಕೇಜ್ರಿವಲ್
TV9 Web
| Edited By: |

Updated on: Jan 20, 2022 | 5:29 PM

Share

ದೆಹಲಿ: ಪಶ್ಚಿಮ ಕರಾವಳಿಯ ಸಣ್ಣ ರಾಜ್ಯವಾಗಿದ್ದರೂ ಗೋವಾ ವಿಧಾನಸಭಾ ಚುನಾವಣೆಯು ಈ ವರ್ಷ ಇಡೀ ದೇಶದ ಗಮನ ಸೆಳೆದಿದೆ. ಪ್ರತಿ ಬಾರಿ ಇಲ್ಲಿನ ಚುನಾವಣೆ ಮತ್ತು ಇತರ ರಾಜಕೀಯ ವಿದ್ಯಮಾನಗಳು ದೇಶದ ಇತರ ರಾಜ್ಯಗಳ ಗಮನ ಸೆಳೆಯುತ್ತಿರಲಿಲ್ಲ. ಸಾಮಾನ್ಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮಾತ್ರ ಇಲ್ಲಿ ಮೈತ್ರಿಮಾಡಿಕೊಂಡು ಸೆಣೆಸುತ್ತಿದ್ದವು. ಆದರೆ ಈ ಬಾರಿ ಈ ಎರಡು ರಾಷ್ಟ್ರೀಯ ಪಕ್ಷಗಳೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಆಮ್ ಆದ್ಮಿ ಪಾರ್ಟಿ (ಆಪ್), ಶಿವಸೇನೆ, ಎನ್​ಸಿಪಿ ಸಹ ಅಖಾಡಕ್ಕಿಳಿದಿದ್ದು, ಚುನಾವಣಾ ಕಣ ರಂಗೇರಿದೆ.

ಗೋವಾದ ಮುಖ್ಯಮಂತ್ರಿಯೂ ಆಗಿದ್ದ ಬಿಜೆಪಿ ನಾಯಕ ಮನೋಹರ್ ಪರಿಕ್ಕರ್ ಕುಟುಂಬವನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪರಿಕ್ಕರ್ ಕುಟುಂಬ ಸದಸ್ಯರು ಇತರ ಪಕ್ಷಗಳಿಗೆ ಸೇರುವ ಸಾಧ್ಯತೆಯ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಉತ್ಪಲ್ ಅವರನ್ನು ತಮ್ಮ ಆಪ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಪರಿಕ್ಕರ್ ಕುಟುಂಬವನ್ನು ಬಿಜೆಪಿ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಉಪಯೋಗ ಪಡೆದ ನಂತರ ಬಿಟ್ಟುಬಿಡುವುದು ಬಿಜೆಪಿಯ ಜಾಯಮಾನ. ಉತ್ಪಲ್ ಅವರಿಗೆ ಆಮ್ ಆದ್ಮಿ ಪಕ್ಷದಿಂದ ಚುನಾವಣೆಗೆ ನಿಲ್ಲುವಂತೆ ಆಮಂತ್ರಣ ನೀಡುತ್ತಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು.

ಬಿಜೆಪಿ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಉತ್ಪಲ್ ಪರಿಕ್ಕರ್ ಅವರ ಹೆಸರು ಇಲ್ಲ. ಹೀಗಾಗಿ ಇದನ್ನೇ ಆಧಾರವಾಗಿಟ್ಟುಕೊಂಡು ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಪರಿಕ್ಕರ್ ಪುತ್ರ ಉತ್ಪಲ್ ಅವರಿಗೆ ಆಹ್ವಾನ ನೀಡಿದ್ದಾರೆ. ಉತ್ಪಲ್ ಅವರು ಗೋವಾ ರಾಜಧಾನಿ ಪಣಜಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸುತ್ತಿದ್ದಾರೆ. ಬಿಜೆಪಿ ಮತ್ತು ಉತ್ಪಲ್ ಅವರ ಮುಂದಿನ ನಡೆಯ ಬಗ್ಗೆ ಕುತೂಹಲ ವ್ಯಕ್ತವಾಗಿದೆ.

ಪರಿಕ್ಕರ್ ಕುಟುಂಬಕ್ಕೆ ಈ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್ ಸಿಗುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಬಿಜೆಪಿಯ ಉನ್ನತ ನಾಯಕರು ವಿಧಾನಸಭೆ ಸ್ಪೀಕರ್ ರಾಜೇಶ್ ಪಟ್ನೇಕರ್ ಅವರಿಗೆ ಟಿಕೆಟ್ ನೀಡಲು ಒಲವು ತೋರಿದ್ದಾರೆ. ಆದರೆ ಅನಾರೋಗ್ಯದಿಂದ ಬಳಲುತ್ತಿರುವ ಪಟ್ನೇಕರ್ ಈವರೆಗೂ ಯಾವುದೇ ನಿಲುವು ಸ್ಪಷ್ಟಪಡಿಸಿಲ್ಲ.

ಪಣಜಿ ವಿಧಾನಸಭಾ ಕ್ಷೇತ್ರದಲ್ಲಿ ಉತ್ಪಲ್ ಅವರು ಈಗಾಗಲೇ ಮನೆಮನೆ ಸಂಪರ್ಕ ಆರಂಭಿಸಿದ್ದು ಸಂಘಟನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ಪರೀಕ್ಕರ್ ನಿಧನದ ನಂತರ ಬಿಜೆಪಿಯು ಅತ್ಯಂತ ಕಿರಿಯ ಅಭ್ಯರ್ಥಿ ಸಿದ್ಧಾರ್ಥ ಕುನ್​ಕಲಿನ್​ಕರ್ ಅವರನ್ನು ನಿಲ್ಲಿಸಿತ್ತು. ಆದರೆ ಕಾಂಗ್ರೆಸ್ ನಾಯಕ ಅತನಾಸಿಯೊ ಬಬುಶ್ ಮನ್​ಸೆರಟ್ಟೆ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯಿಂದ ಒಂದು ಸ್ಥಾನ ಕಸಿದುಕೊಂಡಿದ್ದರು.

ಇದನ್ನೂ ಓದಿ: Goa Assembly Election 2022: ಗೋವಾದಲ್ಲಿ ಆಮ್​ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಮಿತ್ ಪಾಲೇಕರ್​; ಅರವಿಂದ್ ಕೇಜ್ರಿವಾಲ್​ ಘೋಷಣೆ ಇದನ್ನೂ ಓದಿ: ಗೋವಾ ವಿಧಾನಸಭೆ ಚುನಾವಣೆ; ಮೈತ್ರಿ ಮಾಡಿಕೊಂಡು ಸ್ಪರ್ಧೆಗೆ ಇಳಿಯಲಿವೆ ಶಿವಸೇನೆ-ಎನ್​ಸಿಪಿ