Bhagwant Mann: ಪಂಜಾಬ್​ ನೂತನ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್​ ಪ್ರಮಾಣ ವಚನ ಸ್ವೀಕಾರ

ಇಂದು ಭಗವಂತ್ ಮಾನ್​ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮುಂಜಾನೆ 9.30ರಿಂದಲೇ ಜನರು ಆಗಮಿಸುತ್ತಿದ್ದರು. 11.30 ಹೊತ್ತಿಗೆ ಕಾರ್ಯಕ್ರಮ ಸ್ಥಳ ಭರ್ತಿಯಾಗಿತ್ತು. ಆದರೆ ಭಗವಂತ್​ ಮಾನ್​, ಅರವಿಂದ್ ಕೇಜ್ರಿವಾಲ್​ ಇಲ್ಲಿಗೆ ಆಗಮಿಸಲು ವಿಳಂಬವಾಗಿದೆ.

Bhagwant Mann: ಪಂಜಾಬ್​ ನೂತನ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್​ ಪ್ರಮಾಣ ವಚನ ಸ್ವೀಕಾರ
ಭಗವಂತ್​ ಮಾನ್​
Follow us
TV9 Web
| Updated By: Lakshmi Hegde

Updated on:Mar 16, 2022 | 2:28 PM

ಪಂಜಾಬ್ ವಿಧಾನಸಭೆ ಚುನಾವಣೆ (Punjab Assembly Election)ಯಲ್ಲಿ ಭರ್ಜರಿ ಬಹುಮತ ಪಡೆದಿರುವ ಆಮ್​ ಆದ್ಮಿ ಪಕ್ಷದ ಭಗವಂತ್ ಮಾನ್ (Bhagwant Mann)​ ಇಂದು ಪಂಜಾಬ್​ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇಂದು, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್​ಸಿಂಗ್​ ಗ್ರಾಮವಾದ, ಪಂಜಾಬ್​​ನ ಖಟ್ಕರ್​ಕಲಾನ್​ನಲ್ಲಿ ಈ ಸಮಾರಂಭ ಅದ್ದೂರಿಯಾಗಿ ನಡೆದಿತ್ತು. ಸದ್ಯ ಭಗವಂತ್ ಮಾನ್​ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದು, ಅವರ ಕ್ಯಾಬಿನೆಟ್​​ ಸಚಿವರು ಇನ್ನು ಕೆಲವೇ ದಿನಗಳಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.  ಇಂದು ಖಟ್ಕರ್​ ಕಲಾನ್​​ನಲ್ಲಿ ಅಕ್ಷರಶಃ ಹಬ್ಬದ ವಾತಾವರಣವಿತ್ತು. ಅನೇಕ ಜನರು ಸೇರಿದ್ದರು. ಎಲ್ಲಿ ನೋಡಿದರೂ ಹಳದಿ ಪೇಟವೇ ಕಾಣಿಸುತ್ತಿತ್ತು. 

ಪಂಜಾಬ್​ ನೂತನ ಮುಖ್ಯಮಂತ್ರಿ ಭಗವಂತ್​ ಮಾನ್​ ಅವರಿಗೆ, ಕಾಂಗ್ರೆಸ್ ನಾಯಕ ಮನೀಶ್​ ತಿವಾರಿ, ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್​ ಯಾದವ್​,  ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​ ಸೇರಿ ಅನೇಕರು ಶುಭಹಾರೈಸಿದ್ದಾರೆ. ಅಖಿಲೇಶ್ ಯಾದವ್ ಟ್ವೀಟ್ ಮಾಡಿ,  ಪಂಜಾಬ್​​ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಅಭಿನಂದನೆಗಳು. ಅವರ ಸಮರ್ಥ ನಾಯಕತ್ವದಲ್ಲಿ ಪಂಜಾಬ್​​ ಪ್ರಗತಿ ಕಾಣಲಿ. ಅಲ್ಲಿ ಸೋದರತ್ವ ಬೆಳೆಯಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.  ಹಾಗೇ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶುಭಕೋರಿದ್ದು, ಭಾರತೀಯ ಒಕ್ಕೂಟದಲ್ಲಿ ಭಾಷಾವಾರು ಹಕ್ಕುಗಳು ಮತ್ತು ರಾಜ್ಯದ ಹಕ್ಕುಗಳ ಬಗ್ಗೆ ಧ್ವನಿ ಎತ್ತಿರುವ ರಾಜ್ಯಗಳು ತಮಿಳುನಾಡು ಮತ್ತು ಪಂಜಾಬ್​. ಈ ವಿಚಾರಗಳಲ್ಲಿ ಎರಡೂ ರಾಜ್ಯಗಳು ಸುದೀರ್ಘ ಇತಿಹಾಸ ಹೊಂದಿವೆ ಎಂದು ಹೇಳಿದ ಸ್ಟಾಲಿನ್​, ಪಂಜಾಬ್​ನ ಹೊಸ ಸರ್ಕಾರ ಅತ್ಯುತ್ತಮವಾಗಿ ಆಡಳಿತ ನಡೆಸಲಿ ಎಂದು ಹಾರೈಸಿದ್ದಾರೆ.

ಬೆಳಗ್ಗೆಯಿಂದಲೇ ಜನರ ಆಗಮನ

ಇಂದು ಭಗವಂತ್ ಮಾನ್​ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮುಂಜಾನೆ 9.30ರಿಂದಲೇ ಜನರು ಆಗಮಿಸುತ್ತಿದ್ದರು. 11.30 ಹೊತ್ತಿಗೆ ಕಾರ್ಯಕ್ರಮ ಸ್ಥಳ ಭರ್ತಿಯಾಗಿತ್ತು. ಸಮಾರಂಭಕ್ಕೆ ಬಹಳ ಬೇಗನೇ ಬಂದವರಲ್ಲಿ ಆಪ್​ ಶಾಸಕರಾದ ಅಮನ್ ಅರೋರಾ, ಹರ್ಪಾಲ್ ಸಿಂಗ್ ಚೀಮಾ, ಕುಲ್ತರ್​ ಸಿಂಗ್ ಸಾಂಧವಾ, ನೀನಾ ಮಿತ್ತಲ್​, ಜೈಕಿಶನ್​ ಸಿಂಗ್ ರೋರಿ, ಸಂತೋಶ್​ ಕಟಾರಿಯಾ ಕೂಡ ಸೇರಿದ್ದಾರೆ.  ಹೊಸದಾಗಿ ಆಯ್ಕೆಯಾದ ಶಾಸಕರೆಲ್ಲರೂ ಬೆಳಗ್ಗೆ 11.30ರ ಹೊತ್ತಿಗೇ ಖಟ್ಕರ್​ಕಲಾನ್​ಗೆ ತಲುಪಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮ ಮಧ್ಯಾಹ್ನ 12.30ಕ್ಕೆ ಎಂದು ಹೇಳಲಾಗಿತ್ತಾದರೂ, ಭಗವಂತ್ ಮಾನ್​, ಅರವಿಂದ್ ಕೇಜ್ರಿವಾಲ್​ ಮತ್ತು ರಾಜ್ಯಪಾಲರು ಇಲ್ಲಿಗೆ ತಲುಪಲು ವಿಳಂಬವಾಗಿದ್ದರಿಂದ ಕಾರ್ಯಕ್ರಮ ತಡವಾಗಿದೆ.

ಇದನ್ನೂ ಓದಿ: ಇವರೆಂಥಾ ದುಬಾರಿ ಸಿಎಂ?-ಭಗವಂತ್​ ಮಾನ್​ ಪ್ರಮಾಣ ವಚನ ಸ್ವೀಕಾರಕ್ಕಾಗಿ 40 ಎಕರೆ ಗೋಧಿ ಬೆಳೆ ನಾಶ !

Published On - 1:30 pm, Wed, 16 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ