ನನ್ನ ಮಗ ಈಗಾಗಲೇ ಸಿಎಂ ಆಗಿದ್ದಾನೆ: ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅಮ್ಮ ಹರ್ಪಾಲ್ ಕೌರ್

| Updated By: ರಶ್ಮಿ ಕಲ್ಲಕಟ್ಟ

Updated on: Feb 20, 2022 | 7:41 PM

ದೇವರ ದಯೆಯಿಂದ, ಎಲ್ಲರೂ ಅವನನ್ನು ಪ್ರೀತಿಸುತ್ತಾರೆ. ನಮಗೆ ಅವನು ಈಗಾಗಲೇ ಸಿಎಂ ಆಗಿದ್ದಾನೆ. ಜನರು ಅವನನ್ನು ಪ್ರೀತಿಸುತ್ತಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಕೌರ್ ಹೇಳಿದ್ದಾರೆ. ಒಬ್ಬ ತಾಯಿ ಇದನ್ನಲ್ಲದೆ ಬೇರೇನು ಬಯಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ನನ್ನ ಮಗ ಈಗಾಗಲೇ ಸಿಎಂ ಆಗಿದ್ದಾನೆ: ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅಮ್ಮ ಹರ್ಪಾಲ್ ಕೌರ್
ಭಗವಂತ್ ಮಾನ್ ಅಮ್ಮ ಹರ್ಪಾಲ್ ಕೌರ್
Image Credit source: ಎಎನ್ಐ
Follow us on

ಚಂಡೀಗಢ: ಪಂಜಾಬ್ (Punjab Election)ಭಾನುವಾರ ನಿರ್ಣಾಯಕ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುತ್ತಿದ್ದಂತೆ, ಆಮ್ ಆದ್ಮಿ ಪಕ್ಷದ (AAP) ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ (Bhagwant Mann) ಅವರ ತಾಯಿ ಹರ್ಪಾಲ್ ಕೌರ್, ಮಗ ಈಗಾಗಲೇ ಸಿಎಂ ಆಗಿದ್ದಾನೆ ಎಂದು ಹೇಳಿದ್ದಾರೆ.  ದೇವರ ದಯೆಯಿಂದ, ಎಲ್ಲರೂ ಅವನನ್ನು ಪ್ರೀತಿಸುತ್ತಾರೆ. ನಮಗೆ ಅವನು ಈಗಾಗಲೇ ಸಿಎಂ ಆಗಿದ್ದಾನೆ. ಜನರು ಅವನನ್ನು ಪ್ರೀತಿಸುತ್ತಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಕೌರ್ ಹೇಳಿದ್ದಾರೆ. ಒಬ್ಬ ತಾಯಿ ಇದನ್ನಲ್ಲದೆ ಬೇರೇನು ಬಯಸಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಪಂಜಾಬ್‌ನಲ್ಲಿ ಯುವಕರು, ವಿದ್ಯಾರ್ಥಿಗಳು ಮತ್ತು ಪ್ರತಿಯೊಬ್ಬರೂ “ಬದಲಾವಣೆ ಬಯಸುತ್ತಾರೆ” ಎಂದು ಕೌರ್ ಹೇಳಿದ್ದಾರೆ. ಪ್ರಸ್ತುತ ಪಂಜಾಬ್ ಎಎಪಿ ಮುಖ್ಯಸ್ಥರಾಗಿರುವ ಮಾನ್, 2014 ರಲ್ಲಿ ರಾಜಕೀಯಕ್ಕೆ ಸೇರಿದ ಮಾಜಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಆಗಿದ್ದಾರೆ. ಅವರು ಪಂಜಾಬ್‌ನ ಸಂಗ್ರೂರ್ ಸಂಸದೀಯ ಕ್ಷೇತ್ರದಿಂದ ಎರಡು ಅವಧಿಯ ಮತ್ತು ಹಾಲಿ ಸಂಸದರಾಗಿದ್ದಾರೆ. ಅವರು ಧುರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್‌ನ ದಲ್ವಿರ್ ಸಿಂಗ್ ಗೋಲ್ಡಿ ವಿರುದ್ಧ ಸ್ಪರ್ಧಿಸಿದ್ದಾರೆ. ಗಮನಾರ್ಹವಾಗಿ, ಧುರಿ 2012 ರಿಂದ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ.  ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಳೆದ ತಿಂಗಳು ನಾಟಕೀಯ ರೀತಿಯಲ್ಲಿ ಮಾನ್ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರು. ಕೇಜ್ರಿವಾಲ್ ಅವರು ಪಂಜಾಬ್‌ನ ತಮ್ಮ ಅಪೇಕ್ಷಿತ ಮುಖ್ಯಮಂತ್ರಿಯ ಹೆಸರನ್ನು ಸೂಚಿಸುವ ಮೂಲಕ ಜನರು ಸಂದೇಶಗಳನ್ನು ಕಳುಹಿಸಬಹುದಾದ ಸಂಖ್ಯೆಯನ್ನು ಪ್ರಾರಂಭಿಸಿದರು. ಜನವರಿ 18 ರಂದು ನಡೆದ ಕಾರ್ಯಕ್ರಮವೊಂದರಲ್ಲಿ, ಕೇಜ್ರಿವಾಲ್ ಅವರು 2.3 ಮಿಲಿಯನ್ ಜನರು ಪ್ರತಿಕ್ರಿಯೆಗಳನ್ನು ಕಳುಹಿಸಿದ್ದಾರೆ, ಅದರಲ್ಲಿ ಶೇ 93.3 ಮಾನ್‌ ಪರವಾಗಿದೆ ಎಂದು ಹೇಳಿದರು.


ಮಾನ್, ಗಡಿ ರಾಜ್ಯದ ಜನರಿಗೆ ಪಂಜಾಬ್‌ನ ಡ್ರಗ್ ಸಮಸ್ಯೆಯನ್ನು ಹೋಗಲಾಡಿಸುವ ಹಲವಾರು ಭರವಸೆಗಳನ್ನು ನೀಡಿದ್ದಾರೆ. ಕೇಜ್ರಿವಾಲ್ ಅವರು ಮಾನ್ ಅವರನ್ನು “ಅತ್ಯಂತ ಪ್ರಾಮಾಣಿಕ ವ್ಯಕ್ತಿ” ಎಂದು ಕಣಕ್ಕಿಳಿಸಿದ್ದಾರೆ, ಅವರು ಇನ್ನೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಯಾರಿಂದಲೂ 25 ಪೈಸೆಯನ್ನು ಸಹ ತೆಗೆದುಕೊಂಡಿಲ್ಲ ಎಂದಿದ್ದಾರೆ.

ಏತನ್ಮಧ್ಯೆ, ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಕಳೆದ ವಾರ ಬಟಿಂಡಾದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾನ್ ಅವರ ಮೇಲೆ ವಾಗ್ದಾಳಿ ಮಾಡಿದ್ದರು. ಎಎಪಿ ನಾಯಕ “ಕುಡುಕ ಮತ್ತು ಅನಕ್ಷರಸ್ಥ ವ್ಯಕ್ತಿ” ಎಂದು ಅವರು ಹೇಳಿದ್ದಾರೆ. “ಭಗವಂತ್ ಮಾನ್…ಮೂರು ವರ್ಷಗಳಲ್ಲಿ 12ನೇ ತರಗತಿ ಉತ್ತೀರ್ಣರಾದರು. ಅಂತಹ ವ್ಯಕ್ತಿಗೆ ನಾವು ಪಂಜಾಬ್‌ನ ಜನಾದೇಶವನ್ನು ಹೇಗೆ ನೀಡಬಹುದು? ಚನ್ನಿ ಕೇಳಿದರು.

ಕಾಂಗ್ರೆಸ್ ನಾಯಕ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಚಮ್ಕೌರ್ ಸಾಹಿಬ್ ಮತ್ತು ಭದೌರ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್, ಪಂಜಾಬ್‌ನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಭಾನುವಾರ ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: Punjab Election 2022 ಫಿರೋಜ್‌ಪುರದಲ್ಲಿ ಬಿಜೆಪಿ-ಆಮ್ ಆದ್ಮಿ ಪಕ್ಷ ನಡುವೆ ಘರ್ಷಣೆ: ಎಎಪಿ ಕಾರ್ಯಕರ್ತನಿಗೆ ಗಾಯ