ಲುಧಿಯಾನ: ಪಂಜಾಬ್ ವಿಧಾನಸಭಾ ಚುನಾವಣೆಗೆ (Punjab Assembly polls) ಮುನ್ನ ಲುಧಿಯಾನದಲ್ಲಿ (Ludhiana)ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ದೇಶಕ್ಕೆ ಪಂಜಾಬ್‌ನ ಕೊಡುಗೆಗಳನ್ನು ಶ್ಲಾಘಿಸಿದರು, ಪಂಜಾಬ್ನ್ನು ಭಾರತದ “ಜಿಗರ್” ಎಂದು ಕರೆದ ಶಾ, ದೇಶದ ಪ್ರಧಾನಿಯನ್ನು ರಕ್ಷಿಸುವಲ್ಲಿ ಚನ್ನಿ ಸರ್ಕಾರ ವಿಫಲವಾಗಿದೆ, ಅವರು ಇಡೀ ರಾಜ್ಯವನ್ನು ಹೇಗೆ ರಕ್ಷಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಶಾ ಅವರು ಇತ್ತೀಚೆಗೆ ಪಂಜಾಬ್‌ನಲ್ಲಿ ಪ್ರಧಾನಿ ಮೋದಿ 20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ ಸಿಲುಕಲು ಕಾರಣವಾದ ಭದ್ರತಾ ಉಲ್ಲಂಘನೆ ಪ್ರಕರಣವನ್ನು ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ. ಯುಪಿಎಯಂತೆ ಅಲ್ಲ, ಬಿಜೆಪಿಗೆ ದೇಶದಲ್ಲಿ ಭಯೋತ್ಪಾದನೆಯ ಸಮಸ್ಯೆಯನ್ನು ಬೇರುಸಹಿತ ಕಿತ್ತೊಗೆಯಲು ಸಾಧ್ಯವಾಗುತ್ತದೆ ಎಂದು ಶಾ ಹೇಳಿದರು. ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, “ಇಡೀ ದೆಹಲಿಯನ್ನು ಮದ್ಯದಲ್ಲಿ ಮುಳುಗಿಸಿದ ನಂತರ, ಕೇಜ್ರಿವಾಲ್ ಪಂಜಾಬ್‌ನಲ್ಲಿ ಡ್ರಗ್ಸ್ ಅನ್ನು ಹೇಗೆ ನಿಲ್ಲಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ. “ಕೇಜ್ರಿವಾಲ್ ಜಿಗೆ ಭದ್ರತೆಯೊಂದಿಗೆ ಯಾವುದೇ ಸಂಬಂಧವಿಲ್ಲ. ಇದು ಮುಂದುವರಿದರೆ, ನಾವು ಎಲ್ಲಾ ಭಯೋತ್ಪಾದಕರಿಗೆ ಶಿಕ್ಷೆ ನೀಡುತ್ತೇವೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮಾತ್ರ ಪಂಜಾಬ್ ಅನ್ನು ರಕ್ಷಿಸುತ್ತದೆ ಎಂದು ಹೇಳಿದ್ದಾರೆ.
ಅದೇ ವೇಳೆ ಪಂಜಾಬ್ ಸಿಎಂ ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದ ಅವರು 1984 ರ ಗಲಭೆಗಳನ್ನು ಚನ್ನಿ ವಿವರಿಸಬೇಕೆಂದು ಒತ್ತಾಯಿಸಿದರು. 1984ರ ಗಲಭೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ, ಈಗಲೂ ಕಣ್ಣಲ್ಲಿ ನೀರು ಬರುತ್ತಿದೆ ಎಂದರು. ಪಂಜಾಬ್ ಈ ದೇಶದ ಜಿಗರ್ (ಯಕೃತ್ತು). ಇದು ಈ ದೇಶವನ್ನು ಪೋಷಿಸಿತು ಮತ್ತು ಆಹಾರ ಉತ್ಪಾದನೆಯಲ್ಲಿ ನಮ್ಮನ್ನು ಸ್ವತಂತ್ರಗೊಳಿಸಿತು. “ಸ್ವಾತಂತ್ರ್ಯ ಹೋರಾಟದಿಂದ ಇಲ್ಲಿಯವರೆಗೆ ದೇಶಕ್ಕಾಗಿ ತನ್ನ ಮಕ್ಕಳನ್ನು ನೀಡಿದ್ದಕ್ಕಾಗಿ” ಶಾ ಪಂಜಾಬ್ ನ್ನು ಶ್ಲಾಘಿಸಿದರು. ಪಂಜಾಬ್‌ನಲ್ಲಿ ಮತಾಂತರ “ದೊಡ್ಡ ಸಮಸ್ಯೆ” ಎಂದು ಹೇಳಿದ ಶಾ,”ಚನ್ನಿ ಸಾಹಿಬ್ ಮತಾಂತರವನ್ನು ತಡೆಯಲು ಸಾಧ್ಯವಿಲ್ಲ, ಕೇಜ್ರಿವಾಲ್ ಜಿ ಪಕ್ಷದ ಯಾರಾದರೂ ಮುಖ್ಯಮಂತ್ರಿಯಾದರೆ, ಅವರಿಗೂ ಮತಾಂತರವನ್ನು ತಡೆಯಲು ಸಾಧ್ಯವಿಲ್ಲ. ಬಿಜೆಪಿ ಸಕ್ರಾರ ಬಂದರೆ ಪಂಜಾಬ್‌ನ ಹೊರಗೂ ಅದೇ ರೀತಿ ವ್ಯವಹರಿಸುವವರು ಕಾಣಸಿಗುತ್ತಾರೆ.
“ಪಂಜಾಬ್‌ನ ಪ್ರತಿ ಮನೆಯ ಮಗ ಮಿಲಿಟರಿ ಸೇವೆಯಲ್ಲಿದ್ದಾನೆ. ಸೈನಿಕರು ಕಳೆದ 40 ವರ್ಷಗಳಿಂದ ‘ಒಂದು ಶ್ರೇಣಿ ಒಂದು ಪಿಂಚಣಿ’ ಬೇಡಿಕೆಯನ್ನು ಸಲ್ಲಿಸುತ್ತಿದ್ದರು. ಆದರೆ ಕಾಂಗ್ರೆಸ್ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ. ಮೋದಿ ಸರ್ಕಾರವು ‘ಒಂದು ಶ್ರೇಣಿ ಒಂದು ಪಿಂಚಣಿ’ಯನ್ನು ಜಾರಿಗೆ ತಂದಿತು.
ಪಂಜಾಬ್‌ನಲ್ಲಿ ಡ್ರಗ್ಸ್ ಹಾವಳಿಯನ್ನು ನಿರ್ಮೂಲನೆ ಮಾಡಲು ಬಿಜೆಪಿ ಬದ್ಧವಾಗಿದೆ ಎಂದು ಶಾ ಹೇಳಿದರು.
“ಮೋದಿ ಜಿಯವರ ನಾಯಕತ್ವದಲ್ಲಿ, ನಾವು ಡ್ರಗ್ಸ್ ವಿರುದ್ಧ ದೊಡ್ಡ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. 2020 ಮತ್ತು 2021 ರಲ್ಲಿ ಭಾರತ ಸರ್ಕಾರ ವಶಪಡಿಸಿಕೊಂಡ ಡ್ರಗ್ಸ್ ಸಂಗ್ರಹವು 10 ವರ್ಷಗಳಲ್ಲಿ ಸಿಕ್ಕಿಹಾಕಿಕೊಂಡಿಲ್ಲ”ಎಂದು ಅವರು ಹೇಳಿದರು.
ಪಂಜಾಬ್‌ನಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಮೇಲೆ ರಾಜ್ಯದ ನಾಲ್ಕು ನಗರಗಳಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಶಾಖೆಗಳನ್ನು ಸ್ಥಾಪಿಸಲಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಮಾದಕ ದ್ರವ್ಯ ತಡೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕಾರ್ಯಪಡೆ ರಚಿಸುತ್ತೇವೆ ಎಂದು ಅವರು ಹೇಳಿದರು. ಪಂಜಾಬ್ ಅನ್ನು ಮಾದಕ ದ್ರವ್ಯ ಮುಕ್ತ ರಾಜ್ಯವನ್ನಾಗಿ ಮಾಡುವ ಕೇಜ್ರಿವಾಲ್ ಅವರ ಹೇಳಿಕೆಗಳನ್ನು ಶಾ ಟೀಕಿಸಿದ್ದಾರೆ.
ಕೇಜ್ರಿವಾಲ್ ಅವರು ಇಡೀ ದೆಹಲಿಯನ್ನು ಮದ್ಯದಲ್ಲಿ ಮುಳುಗಿಸಿದ ನಂತರ ಪಂಜಾಬ್‌ಗೆ ಬಂದು ಡ್ರಗ್ಸ್ ಮುಕ್ತ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಪಂಜಾಬ್ ಅನ್ನು ಮಾದಕ ದ್ರವ್ಯ ಮುಕ್ತವನ್ನಾಗಿ ಮಾಡಬಹುದೇ? ಎಂದು ಶಾ ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಸುಖದೇವ್ ಸಿಂಗ್ ದಿಂಡ್ಸಾ ಅವರ ಶಿರೋಮಣಿ ಅಕಾಲಿ ದಳ (ಸಂಯುಕ್ತ) ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಪಂಜಾಬ್‌ನಲ್ಲಿ ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿರುವ ಕಾಂಗ್ರೆಸ್, ಹಾಲಿ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಕೇಜ್ರಿವಾಲ್ ನೇತೃತ್ವದ ಎಎಪಿ ಪಂಜಾಬ್‌ನಲ್ಲಿಯೂ ಬಿರುಸಿನ ಪ್ರಚಾರ ನಡೆಸುತ್ತಿದೆ.
ಪಂಜಾಬ್ ವಿಧಾನಸಭೆಗೆ ಫೆಬ್ರವರಿ 20ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು.
ಇದನ್ನೂ ಓದಿ: ಎಬಿಜಿ ಶಿಪ್‌ಯಾರ್ಡ್ ಒಂದು ಹಗರಣ ಎಂದು ನಾವು ಮೊದಲೇ ಎಚ್ಚರಿಸಿದ್ದೆವು: ಕಾಂಗ್ರೆಸ್
Published On - 3:16 pm, Sun, 13 February 22