ಎಬಿಜಿ ಶಿಪ್‌ಯಾರ್ಡ್ ಒಂದು ಹಗರಣ ಎಂದು ನಾವು ಮೊದಲೇ ಎಚ್ಚರಿಸಿದ್ದೆವು: ಕಾಂಗ್ರೆಸ್
ಈ ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೊದಲ ದೂರನ್ನು ನವೆಂಬರ್ 8, 2019 ರಂದು ದಾಖಲಿಸಿತ್ತು . ತನಿಖಾ ಸಂಸ್ಥೆ ಹೆಚ್ಚಿನ ವಿವರಗಳನ್ನು ಕೋರಿದೆ ಮತ್ತು ದೂರು ವಂಚನೆಯ ಸಮಯ, ವಿಧಾನದ ಕಾರ್ಯಾಚರಣೆ ಇತ್ಯಾದಿಗಳಂತಹ ವಿವರಗಳನ್ನು ಬಿಟ್ಟಿದೆ ಎಂದು ವರದಿಯಾಗಿದೆ.
ದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ₹ 22,842 ಕೋಟಿ ವಂಚಿಸಿದ ಆರೋಪದಲ್ಲಿ ಎಬಿಜಿ ಶಿಪ್‌ಯಾರ್ಡ್ (ABG Shipyard scam )ಮತ್ತು ಅದರ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಿಷಿ ಕಮಲೇಶ್ ಅಗರ್ವಾಲ್ (Rishi Kamlesh Agarwal ) ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ ನಂತರ ಬೃಹತ್ ಎಬಿಜಿ ಶಿಪ್‌ಯಾರ್ಡ್ ಹಗರಣವು ಬಹಿರಂಗವಾಗಿದೆಯೇ? ಎಂದು ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ಪ್ರಶ್ನಿಸಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಎಲ್ಲಾ ಬ್ಯಾಂಕ್ ವಂಚನೆ ಪ್ರಕರಣಗಳನ್ನು ಪಟ್ಟಿ ಮಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, ಈಗ ರಿಷಿ ಅಗರ್ವಾಲ್ ಅವರು ನೀರವ್ ಮೋದಿ, ಮೆಹುಲ್ ಚೋಕ್ಸಿ, ಲಲಿತ್ ಮೋದಿ, ವಿಜಯ್ ಮಲ್ಯ, ಜತಿನ್ ಮೆಹ್ತಾ, ಚೇತನ್ ಸಂದೇಸರಾ ಮೊದಲಾದವರ ದೊಡ್ಡ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು. 2018 ರಲ್ಲಿ ಈ ಬಗ್ಗೆ ಕಾಂಗ್ರೆಸ್ ಸಾರ್ವಜನಿಕವಾಗಿ ಪತ್ರಿಕಾಗೋಷ್ಠಿ ನಡೆಸಿ ಎಬಿಜಿ ಶಿಪ್‌ಯಾರ್ಡ್ ಹಗರಣ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು ಎಂದು ಸುರ್ಜೆವಾಲಾ ಹೇಳಿದರು. ಎಬಿಜಿ ಶಿಪ್‌ಯಾರ್ಡ್ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಐದು ವರ್ಷ ಯಾಕೆ ಬೇಕಾಯಿತು ಎಂದು ಪ್ರಶ್ನಿಸಿದ ಕಾಂಗ್ರೆಸ್, 2007ರಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಸರ್ಕಾರ ಎಬಿಜಿ ಶಿಪ್‌ಯಾರ್ಡ್‌ಗೆ 1,21,000 ಚದರ ಮೀಟರ್ ಭೂಮಿಯನ್ನು ಮಂಜೂರು ಮಾಡಿತ್ತು ಎಂದು ಆರೋಪಿಸಿದೆ. ಶನಿವಾರ ಸಿಬಿಐ ಸೂರತ್, ಭರೂಚ್, ಮುಂಬೈ ಮತ್ತು ಪುಣೆಯ 13 ಸ್ಥಳಗಳಲ್ಲಿ ಶೋಧ ನಡೆಸಿದ್ದು, ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಈ ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೊದಲ ದೂರನ್ನು ನವೆಂಬರ್ 8, 2019 ರಂದು ದಾಖಲಿಸಿತ್ತು . ತನಿಖಾ ಸಂಸ್ಥೆ ಹೆಚ್ಚಿನ ವಿವರಗಳನ್ನು ಕೋರಿದೆ ಮತ್ತು ದೂರು ವಂಚನೆಯ ಸಮಯ, ವಿಧಾನದ ಕಾರ್ಯಾಚರಣೆ ಇತ್ಯಾದಿಗಳಂತಹ ವಿವರಗಳನ್ನು ಬಿಟ್ಟಿದೆ ಎಂದು ವರದಿಯಾಗಿದೆ. ನಂತರ ಬ್ಯಾಂಕ್ ಹೊಸದಾಗಿ ಆಗಸ್ಟ್ 2020 ರಲ್ಲಿ ದೂರು ದಾಖಲಿಸಿದ್ದು ದೂರನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಸಿಬಿಐ ಫೆಬ್ರವರಿ 7 ರಂದು ಎಫ್ಐಆರ್ ದಾಖಲಿಸಿದೆ.
“Loot & Escape” is Modi Govts ‘Flagship Scheme’ for Bank Fraudsters
₹2,20,00,00,00,842 of Public Money Swindled
India’s Biggest Bank Fraud in 75yrs has taken place under Modi Govts watch
‘Bank Frauds’ of ₹5,35,000 Cr in 7yrs have Wrecked our ‘Banking System’
Our Statement-: pic.twitter.com/89UlFNPLbz
— Randeep Singh Surjewala (@rssurjewala) February 13, 2022
ಮೋದಿ ಸರ್ಕಾರದ ಕಳೆದ 7.5 ವರ್ಷಗಳಲ್ಲಿ ₹5 ಲಕ್ಷದ 35 ಸಾವಿರ ಕೋಟಿ ಬ್ಯಾಂಕ್ ವಂಚನೆಗಳು ನಡೆದಿವೆ, ಇದು ಜನರ ಹಣ ಎಂದು ಕಾಂಗ್ರೆಸ್ ಹೇಳಿದೆ.
ಎಬಿಜಿ ಶಿಪ್‌ಯಾರ್ಡ್ ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿಯಲ್ಲಿ ತೊಡಗಿರುವ ಎಬಿಜಿ ಗ್ರೂಪ್‌ನ ಪ್ರಮುಖ ಕಂಪನಿಯಾಗಿದೆ. ಕಂಪನಿಗೆ 28 ಬ್ಯಾಂಕ್‌ಗಳಿಂದ ₹2468.51 ಕೋಟಿ ಸಾಲ ಸೌಲಭ್ಯ ಮಂಜೂರಾಗಿದೆ. 2012-17ರ ನಡುವೆ ಕಂಪನಿಯ ಪ್ರವರ್ತಕರು ಹಣದ ತಿರುವು, ದುರುಪಯೋಗ ಮತ್ತು ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಾಲದ ಖಾತೆಯನ್ನು ಜುಲೈ 2016 ರಲ್ಲಿ ಅನುತ್ಪಾದಕ ಆಸ್ತಿ ಎಂದು ಮತ್ತು 2019 ರಲ್ಲಿ ವಂಚನೆ ಎಂದು ಘೋಷಿಸಲಾಯಿತು.