ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಮಕ್ಕಳು ಸೇರಿ, ನಾಲ್ವರು ದಾರುಣ ಸಾವು
ಮೃತರನ್ನು ರೋಜಲಿನ್ ದಿಗಲ್ ಮತ್ತು ಭಾಗಿಯಾ ದಿಗಲ್ (ಸಹೋದರರು), ದೀಪ್ತಿ ರಂಜನ್ ಪ್ರಧಾನ್ ಮತ್ತು ಪೂರ್ಣಚಂದ್ರ ಮಿಶ್ರಾ ಎಂದು ಗುರುತಿಸಲಾಗಿದೆ. ಇದರಲ್ಲಿ ರೋಜಲಿನ್ ದಿಗಲ್ ಮತ್ತು ಭಾಗಿಯಾ ದಿಗಲ್ ಸಹೋದರರು.
ಒಡಿಶಾದ ಕಂಧಮಾಲ್ ಜಿಲ್ಲೆಯ ಲಹಬಾದಿ ನಗರದಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು(Accident In Odisha), ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಹಾಗೇ, ಇನ್ನೂ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಫುಲ್ಬನಿ ಸಾದರ್ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ನಿನ್ನೆ ಮಧ್ಯರಾತ್ರಿ 12.30ರ ಹೊತ್ತಿಗೆ ನಡೆದಿದೆ. ಕಾರಿನಲ್ಲಿ ಡ್ರೈವರ್ ಸೇರಿ ಒಟ್ಟು 9 ಮಂದಿ ಇದ್ದರು. ರಾತ್ರಿ ವಿಪರೀತ ಇಬ್ಬನಿ (ಮಂಜು ಮುಸುಕಿದ ವಾತಾವರಣ) ಬೀಳುತ್ತಿದ್ದ ಕಾರಣ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು, ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಮೃತರನ್ನು ರೋಜಲಿನ್ ದಿಗಲ್ ಮತ್ತು ಭಾಗಿಯಾ ದಿಗಲ್ (ಸಹೋದರರು), ದೀಪ್ತಿ ರಂಜನ್ ಪ್ರಧಾನ್ ಮತ್ತು ಪೂರ್ಣಚಂದ್ರ ಮಿಶ್ರಾ ಎಂದು ಗುರುತಿಸಲಾಗಿದೆ. ಇದರಲ್ಲಿ ರೋಜಲಿನ್ ದಿಗಲ್ ಮತ್ತು ಭಾಗಿಯಾ ದಿಗಲ್ ಸಹೋದರರು. ಅಪಘಾತಕ್ಕೀಡಾದ ವಾಹನ ಒಮಿನಿ ಎಂದು ಹೇಳಲಾಗಿದ್ದು, ಇವರೆಲ್ಲ ಪಾರ್ಟಿಯೊಂದರಿಂದ ವಾಪಸ್ ಮಧ್ಯರಾತ್ರಿ ಮನೆಗೆ ಹೋಗುತ್ತಿದ್ದರು. ಅತಿಯಾಗಿ ಬೀಳುತ್ತಿದ್ದ ಇಬ್ಬನಿಯೇ ಕಾರಣವೆಂದು ಹೇಳಲಾಗಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
ಇದನ್ನೂ ಓದಿ: ಭೂಮಿ ತಾಯಿಯ ಋತುಸ್ರಾವವನ್ನು ಸಂಭ್ರಮಿಸುವ ದಿನ ಕೆಡ್ಡಸ! ಇಂದು ತುಳುನಾಡಿಗೆ ಮಧ್ಯಾಹ್ನ ಕೆಡ್ಡಸ