ಮಗಳಿಗೆ ದೃಷ್ಟಿ ಮರಳಿ ಬಂತು: ಕೇರಳದ ಆಯುರ್ವೇದ ವೈದ್ಯರಿಗೆ ಧನ್ಯವಾದ ಹೇಳಿದ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ
Raila Odinga ಕೀನ್ಯಾದ ಮಾಜಿ ಪ್ರಧಾನಿ ಮಗಳು ರೋಸ್ಮರಿ ಒಡಿಂಗಾ ಕಣ್ಣಿನ ನರ ಹಾನಿಯ ನಂತರ 2017 ರಲ್ಲಿ ದೃಷ್ಟಿ ಕಳೆದುಕೊಂಡರು. ದೃಷ್ಟಿ ಸಮಸ್ಯೆಯ ನಂತರ, ಅವರು ದಕ್ಷಿಣ ಆಫ್ರಿಕಾ, ಇಸ್ರೇಲ್ ಮತ್ತು ಚೀನಾದಲ್ಲಿ ಚಿಕಿತ್ಸೆ ಪಡೆದರು. ಆದರೆ ಯಾವುದೇ ಚಿಕಿತ್ಸೆ ಯಶಸ್ವಿಯಾಗಲಿಲ್ಲ
ಕೊಚ್ಚಿ: ಕೇರಳದ (Kerala) ಎರ್ನಾಕುಲಂನ ಕೂತ್ತಟ್ಟುಕುಳಂನಲ್ಲಿರುವ ಆಯುರ್ವೇದ ( Ayurveda) ಕಣ್ಣಿನ ಆಸ್ಪತ್ರೆ-ಸಂಶೋಧನಾ ಕೇಂದ್ರಕ್ಕೆ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ (Raila Odinga) ಅವರು ತಮ್ಮ ಮಗಳಿಗೆ ದೃಷ್ಟಿ ಮರಳಿ ಪಡೆಯಲು ಸಹಾಯ ಮಾಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಈ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಒಡಿಂಗಾ ತಮ್ಮ ಬ್ಯುಸಿ ಕೆಲಸಗಳ ನಡುವೆಯೂ ಮಗಳ ಚಿಕಿತ್ಸೆಗಾಗಿ ಕೇರಳಕ್ಕೆ ಭೇಟಿ ನೀಡಿದ್ದರು. ಸೆಕ್ಯುರಿಟಿ ಮತ್ತು ಹ್ಯೂಮನ್ ಇಂಟೆಲಿಜೆನ್ಸ್ ಪಿಆರ್ಒ ಡೆನ್ನಿಸ್ ನ್ಯಾಂಬಾನೆ ಈ ವಿಷಯದ ಬಗ್ಗೆ ಟ್ವೀಟ್ ಮಾಡಿದ್ದು,ಕೊಚ್ಚಿಯಲ್ಲಿ ರೈಲಾ ಒಡಿಂಗಾ. ಬಾಬಾ ಕೇರ್ -ಗುಣಮಟ್ಟದ ಪ್ರವೇಶ ಮತ್ತು ಎಲ್ಲಾ ಕೀನ್ಯಾದವರಿಗೆ ಕೈಗೆಟುಕುವ ಆರೋಗ್ಯ ಸೇವೆಗಳು ಎಂದು ಕೆಲವು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಮಾಜಿ ಪ್ರಧಾನಿ ಮಗಳು ರೋಸ್ಮರಿ ಒಡಿಂಗಾ ಕಣ್ಣಿನ ನರ ಹಾನಿಯ ನಂತರ 2017 ರಲ್ಲಿ ದೃಷ್ಟಿ ಕಳೆದುಕೊಂಡರು. ದೃಷ್ಟಿ ಸಮಸ್ಯೆಯ ನಂತರ, ಅವರು ದಕ್ಷಿಣ ಆಫ್ರಿಕಾ, ಇಸ್ರೇಲ್ ಮತ್ತು ಚೀನಾದಲ್ಲಿ ಚಿಕಿತ್ಸೆ ಪಡೆದರು. ಆದರೆ ಯಾವುದೇ ಚಿಕಿತ್ಸೆ ಯಶಸ್ವಿಯಾಗಲಿಲ್ಲ ಎಂದು ದಿ ಹಿಂದೂ ವರದಿ ಹೇಳಿದೆ, ನಂತರ, ರೈಲಾ ಒಡಿಂಗಾ ತನ್ನ ಸ್ನೇಹಿತನಿಂದ ಕೇರಳದ ಆಯುರ್ವೇದ ಸಂಪ್ರದಾಯದ ಬಗ್ಗೆ ಅರಿತರು. 2019 ರಲ್ಲಿ ರೋಸ್ಮರಿ ಒಡಿಂಗಾ ಕೂತ್ತಟ್ಟುಕುಳಂನಲ್ಲಿರುವ ಶ್ರೀಧರೀಯಮ್ ಆಯುರ್ವೇದಿಕ್ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ತನ್ನ ಚಿಕಿತ್ಸೆಯನ್ನು ಪ್ರಾರಂಭಿಸಿದರು. ಕೇರಳದಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದು ಮನೆಗೆ ಮರಳಿ ಅಲ್ಲಿ ತನ್ನ ಔಷಧಿಯನ್ನು ಮುಂದುವರೆಸಿದರು. ಮುಂದುವರಿದ ಚಿಕಿತ್ಸೆ ಮತ್ತು ತಪಾಸಣೆಯ ನಂತರ ಆಸ್ಪತ್ರೆಯ ಹೇಳಿಕೆಯ ಪ್ರಕಾರ, ರೋಸ್ಮರಿ ಒಡಿಂಗಾ ತನ್ನ ದೃಷ್ಟಿಯನ್ನು ಮರಳಿ ಪಡೆದರು.
I came to India for my daughter’s eye treatment in Kochi, Kerala. After three weeks of treatment, there was a substantial improvement in her eyesight. It was a big surprise for my family that our daughter could see almost everything: Former Kenya PM Raila Odinga (1/2) pic.twitter.com/4SSIXFift4
— ANI (@ANI) February 13, 2022
ಮುಂದಿನ ಮೂರು ವಾರಗಳವರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರು ಆಸ್ಪತ್ರೆಯಲ್ಲಿ ಉಳಿಯುವ ನಿರೀಕ್ಷೆಯಿದೆ. ಚಿಕಿತ್ಸೆಗೆ ಮಾರ್ಗದರ್ಶನ ನೀಡಿದ ಮುಖ್ಯ ವೈದ್ಯ ನಾರಾಯಣನ್ ನಂಬೂದಿ ರಿ ಅವರು, ಕೀನ್ಯಾದ ಮಾಜಿ ಪ್ರಧಾನಿಯವರ ಭೇಟಿಯು ಆಯುರ್ವೇದ ಚಿಕಿತ್ಸೆಯ ಹೆಮ್ಮೆ ಮತ್ತು ಸಾಧ್ಯತೆಗಳನ್ನು ಪುನರುಚ್ಚರಿಸಿದೆ ಎಂದಿದ್ದಾರೆ.
ಮಗಳ ಆಯುರ್ವೇದ ನೇತ್ರ ಚಿಕಿತ್ಸೆಗಾಗಿ ಕುಟುಂಬ ಸಮೇತ ಕೇರಳದಲ್ಲಿದ್ದ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ನಾನು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಪ್ರಪಂಚದಾದ್ಯಂತ ಆಯುರ್ವೇದ ಐ ಕೇರ್ ಸಂಸ್ಥೆಗಳನ್ನು ಹೆಚ್ಚಿಸಬೇಕು ಎಂದು ಮನವಿ ಮಾಡುವುದಾಗಿ ಹೇಳಿದರು. ಶ್ರೀಧರೀಯಮ್ ಆಯುರ್ವೇದಿಕ್ ಐ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್‌ನ ಪ್ರವರ್ತಕರನ್ನು ಭೇಟಿ ಮಾಡಿದ ನಂತರ ಸಮಾರಂಭದಲ್ಲಿ ಮಾತನಾಡಿದ ಅವರು ನಾನು ಕೀನ್ಯಾದ ಅಧ್ಯಕ್ಷನಾದರೆ ನೈರೋಬಿಯಲ್ಲಿ ಶ್ರೀಧರೀಯಮ್ ಕಣ್ಣಿನ ಆಸ್ಪತ್ರೆಯನ್ನು ಸ್ಥಾಪಿಸುವುದು ನನ್ನ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.