Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣ: ಕೆಸಿಆರ್, ರೇವಂತ್ ರೆಡ್ಡಿಯನ್ನು ಸೋಲಿಸಿದ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ! ಯಾರಿವರು?

KV Ramana Reddy: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಂದು ಅಚ್ಚರಿ ಫಲಿತಾಂಶ ಹೊರಬಿದಿದೆ. ಕಾಮರೆಡ್ಡಿ ಕ್ಷೇತ್ರದಲ್ಲಿ ಹಾಲಿ ಸಿಎಂ ಕೆ. ಚಂದ್ರಶೇಖರ ರಾವ್, ರೇವಂತ್‌ ರೆಡ್ಡಿಗೆ ಸೋಲು ಉಂಟಾಗಿದೆ.66,652 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕಾಟಿಪಲ್ಲಿ ವೆಂಕಟರಮಣರೆಡ್ಡಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ರಾಷ್ಟ್ರ ನಾಯಕರ ಗಮನ ಸೆಳೆದಿದ್ದಾರೆ.  

ತೆಲಂಗಾಣ: ಕೆಸಿಆರ್, ರೇವಂತ್ ರೆಡ್ಡಿಯನ್ನು ಸೋಲಿಸಿದ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ! ಯಾರಿವರು?
ಕೆ. ಚಂದ್ರಶೇಖರ ರಾವ್, ಕಾಟಿಪಲ್ಲಿ ವೆಂಕಟರಮಣರೆಡ್ಡಿ
Follow us
ಗಂಗಾಧರ​ ಬ. ಸಾಬೋಜಿ
|

Updated on: Dec 03, 2023 | 7:13 PM

ಹೈದರಾಬಾದ್​, ಡಿಸೆಂಬರ್​​ 03: ತೆಲಂಗಾಣದ ಹಾಲಿ ಸಿಎಂ ಹಾಗೂ ಆಡಳಿತಾರೂಢ ಬಿಆರ್​ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್, ಮತ್ತೊಬ್ಬ ಎದುರಾಳಿ ಕಾಂಗ್ರೆಸ್ ಅಧ್ಯಕ್ಷ ಎ ರೇವಂತ್ ರೆಡ್ಡಿ ಅವರನ್ನು ತೆಲಂಗಾಣದ ಪ್ರತಿಷ್ಠಿತ ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ (Katipalli Venkata Ramana Reddy) ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಹಾಲಿ ಮತ್ತು ಭಾವಿ ಸಿಎಂ ಇಬ್ಬರನ್ನೂ ಸೋಲಿಸುವ ಮೂಲಕ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು ರಾಷ್ಟ್ರ ನಾಯಕರ ಗಮನ ಸೆಳೆದಿದ್ದಾರೆ.

ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು 66652 ಮತಗಳನ್ನು ಪಡೆದುಕೊಂಡಿದ್ದು, ಕೆ. ಚಂದ್ರಶೇಖರ ರಾವ್ 59911 ಮತ್ತು ರೇವಂತ್‌ ರೆಡ್ಡಿ 54916 ಮತಗಳನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಯಾರಾಗಲಿದ್ದಾರೆ ಮಧ್ಯಪ್ರದೇಶ ಸಿಎಂ? ಶಿವರಾಜ್ ಸಿಂಗ್ ಚೌಹಾಣ್​ಗೆ ಮತ್ತೆ ಮಣೆ ಹಾಕಿಲಿದೆಯಾ ಬಿಜೆಪಿ

ವೃತ್ತಿಯಲ್ಲಿ ಉದ್ಯಮಿ ಆಗಿರುವ 53 ವರ್ಷದ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು, 12 ನೇ ತರಗತಿ ಪಾಸಾಗಿದ್ದಾರೆ. ಚುನಾವಣಾ ಅಫಿಡವಿಟ್ ಪ್ರಕಾರ ಅವರ ಒಟ್ಟು ಘೋಷಿತ ಆಸ್ತಿ 49.7 ಕೋಟಿ ರೂ.ಗಳಾಗಿದ್ದು, ಇದರಲ್ಲಿ 2.2 ಕೋಟಿ ರೂ. ಚರ ಆಸ್ತಿ ಮತ್ತು 47.5 ಕೋಟಿ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ. ಅವರ ಒಟ್ಟು ಘೋಷಿತ ಆದಾಯ 9.8 ಲಕ್ಷ ರೂ. ಅದರಲ್ಲಿ 4.9 ಲಕ್ಷ ರೂ. ಸ್ವಯಂ ಆದಾಯವಾಗಿದೆ. ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ವಿರುದ್ಧ 11 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

2018ರ ವಿಧಾನಸಭಾ ಚುನಾವಣೆಯಲ್ಲಿ, ತೆಲಂಗಾಣ ರಾಷ್ಟ್ರ ಸಮಿತಿಯ ಗಂಪ ಗೋವರ್ಧನ್​ ಅವರಿಂದ ಒಟ್ಟು 42% ರಷ್ಟು ಮತಗಳನ್ನು ಪಡೆದುಕೊಳ್ಳುವ ಮೂಲಕ ಕಾಮರೆಡ್ಡಿ ಅವರು ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಂಡಿದ್ದಾರು. ಕಾಂಗ್ರೆಸ್​ನ ಮೊಹಮ್ಮದ್ ಅಲಿ ಶಬ್ಬೀರ್ ವಿರುದ್ಧ ಶೇ.2ರ ಅಂತರದಿಂದ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: ಛತ್ತೀಸ್​ಗಢ, ಮಧ್ಯಪ್ರದೇಶದ ಸೋಲಿನಿಂದ ನಿರಾಸೆಯಾಗಿದೆ, ತೆಲಂಗಾಣ ಜನತೆಗೆ ಧನ್ಯವಾದ: ಮಲ್ಲಿಕಾರ್ಜುನ ಖರ್ಗೆ

2008ರ ಡಿಲಿಮಿಟೇಶನ್ ಆಯೋಗದ ವರದಿಯ ಪ್ರಕಾರ 2011 ಭಾರತದ ಜನಗಣತಿಯ ಆಧರಿಸಿ ಕಾಮರೆಡ್ಡಿ ಅಸೆಂಬ್ಲಿ ಕ್ಷೇತ್ರವು ಅಂದಾಜು 14.73% ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆ ಮತ್ತು 4.67% ರಷ್ಟು ಪರಿಶಿಷ್ಟ ಪಂಗಡದ ಜನಸಂಖ್ಯೆಯನ್ನು ಹೊಂದಿದೆ.

2023ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 2,45,822 ಅರ್ಹ ಮತದಾರರಿದ್ದರು, ಅದರಲ್ಲಿ 1,18,718 ಪುರುಷರು ಮತ್ತು 1,27,080 ಮಹಿಳೆಯರು ಮತ್ತು 24 ನೋಂದಾಯಿತ ಮತದಾರರು ತೃತೀಯಲಿಂಗಿಗಳಾಗಿದ್ದಾರೆ.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ