ಅಪ್ಪನನ್ನು ಅಪಹರಿಸಿದ್ದಾರೆ ಎಂದು ಶಾಸಕನ ಪುತ್ರಿ ಆರೋಪ, ಅಪಹರಣ ನಡೆದಿಲ್ಲ ಎಂದ ಪೊಲೀಸ್; ಉತ್ತರ ಪ್ರದೇಶದಲ್ಲಿ ಹೈಡ್ರಾಮಾ

Uttar Pradesh "ಶಾಸಕರು ತಮ್ಮ ತಾಯಿಯೊಂದಿಗೆ ಇಟಾವಾ ಪಟ್ಟಣದಲ್ಲಿ ಇದ್ದಾರೆ. ಅವರನ್ನು ಅಪಹರಿಸಲಾಗಿದೆ ಎಂಬ ಆರೋಪಗಳು ಸುಳ್ಳು. ಇಡೀ ಘಟನೆಯು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದೆ" ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಅಪ್ಪನನ್ನು ಅಪಹರಿಸಿದ್ದಾರೆ ಎಂದು ಶಾಸಕನ ಪುತ್ರಿ ಆರೋಪ, ಅಪಹರಣ ನಡೆದಿಲ್ಲ ಎಂದ ಪೊಲೀಸ್; ಉತ್ತರ ಪ್ರದೇಶದಲ್ಲಿ ಹೈಡ್ರಾಮಾ
ವಿನಯ್ ಶಕ್ಯಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 12, 2022 | 12:33 PM

ಲಖನೌ: ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗೆ (Uttar Pradesh Election) ಮುನ್ನ ಮಂಗಳವಾರ ಬಿಜೆಪಿ (BJP) ತೊರೆದ ಐವರು ಶಾಸಕರ ಪೈಕಿ ಹಾಸಿಗೆ ಹಿಡಿದಿರುವ ಬಿಜೆಪಿ ಶಾಸಕ ವಿನಯ್ ಶಾಕ್ಯ (Vinay Shakya) ಕೂಡಾ ಒಬ್ಬರು. ಏತನ್ಮಧ್ಯೆ ಶಾಕ್ಯ ಅವರ ಮಗಳು ತನ್ನ ಅಪ್ಪ ಸಹೋದರನಿಂದ ‘ಅಪಹರಿಸಲ್ಪಟ್ಟಿದ್ದಾರೆ’ ಮತ್ತು ಸಮಾಜವಾದಿ ಪಕ್ಷಕ್ಕೆ(Samajwadi Party) ಸೇರುವಂತೆ ‘ಬಲವಂತ’ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವಿನಯ್ ಶಾಕ್ಯ ಅವರು ಉತ್ತರ ಪ್ರದೇಶದ ಔರಿಯಾ (Auraiya) ಜಿಲ್ಲೆಯ ಬಿಧುನಾದಿಂದ (Bidhuna )ಬಿಜೆಪಿ ಶಾಸಕರಾಗಿದ್ದಾರೆ. ಅವರು ಮತ್ತು ಅವರ ಸಹೋದರ, ದೇವೇಶ್ ಶಾಕ್ಯ ಒಬಿಸಿ ನಾಯಕ ಮತ್ತು ಸಚಿವ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya) ಅವರಿಗೆ ನಿಕಟವಾಗಿದ್ದಾರೆ. ಮಂಗಳವಾರ ಬಿಜೆಪಿ ತೊರೆದು ವಿಪಕ್ಷಕ್ಕೆ ಸೇರುವ ಮೂಲಕ ಇವರು ಸುದ್ದಿಯಾಗಿದ್ದಾರೆ. ಅಪ್ಪನನ್ನು ಅಪಹರಿಸಿದ್ದಾರೆ ಎಂಬ ಮಗಳ ಆರೋಪದ ಬೆನ್ನಲ್ಲೇ ಬುಧವಾರ ಬೆಳಿಗ್ಗೆ ಶಾಕ್ಯ ತಮ್ಮ ಇಟಾವಾ ಮನೆಯಲ್ಲಿ ಹಾಸಿಗೆಯಲ್ಲಿ ಅವರ ವಯಸ್ಸಾದ ತಾಯಿಯೊಂದಿಗೆ ಇರುವ ಫೋಟೊ ಹರಿದಾಡಿದೆ. ವಿನಯ್ ಶಕ್ಯಾ ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರು ತುಂಬಾ ಕಡಿಮೆ ಮಾತನಾಡುತ್ತಾರೆ.

ನನ್ನ ಮಗಳು ಹೇಳಿದ್ದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಶಾಕ್ಯ ಹೇಳಿದ್ದಾರೆ. ಮಗಳು ಯಾಕೆ ಈ ರೀತಿ ಆರೋಪ ಮಾಡಿದ್ದು ಎಂದು ಕೇಳಿದಾಗ ಶಾಕ್ಯ ಉತ್ತರ ಬರೀ ನಗು ಆಗಿತ್ತು.

ಗಂಟೆಗಳ ಹಿಂದೆ ಶಾಕ್ಯ ಅವರ ಮಗಳು ತನ್ನ ತಂದೆಯನ್ನು ಅಪಹರಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು. “ನಿಮಗೆ ಗೊತ್ತಾ ನನ್ನ ತಂದೆ ಕೆಲವು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾಗಿದ್ದರು, ನಂತರ ಅವರು ನಡೆಯಲು ಸಾಧ್ಯವಾಗಲಿಲ್ಲ. ನನ್ನ ಚಿಕ್ಕಪ್ಪ, ದೇವೇಶ್ ಶಾಕ್ಯ ಅವರು ತಮ್ಮ ಅನಾರೋಗ್ಯದ ಲಾಭವನ್ನು ಪಡೆದರು ಮತ್ತು ಅವರ ಹೆಸರಿನಲ್ಲಿ ವೈಯಕ್ತಿಕ ರಾಜಕೀಯ ಮಾಡಲು ಪ್ರಾರಂಭಿಸಿದರು. ಇಂದು ಅವರು ಎಲ್ಲಾ ಮಿತಿಗಳನ್ನು ದಾಟಿದ್ದಾರೆ .( ಅವರು) ನನ್ನ ತಂದೆಯನ್ನು ನಮ್ಮ ಮನೆಯಿಂದ ಬಲವಂತವಾಗಿ ಕರೆದೊಯ್ದು ಸಮಾಜವಾದಿ ಪಕ್ಷಕ್ಕೆ ಸೇರಲು ಲಖನೌಗೆ ಹೋಗಿದ್ದರು ಎಂದು ರೀನಾ ಶಾಕ್ಯ ತಾನೇ ರೆಕಾರ್ಡ್ ಮಾಡಿದ ವಿಡಿಯೊವೊಂದರಲ್ಲಿ ಹೇಳಿದ್ದಾರೆ.

“ನಾವು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಪಕ್ಷದೊಂದಿಗೆ ಯಾವಾಗಲೂ ದೃಢವಾಗಿ ನಿಲ್ಲುತ್ತೇವೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಯಾರೂ ನಮಗೆ ಸಹಾಯ ಮಾಡಲಿಲ್ಲ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರ ಸಹಾಯ ಮಾಡಿದ್ದಾರೆ ” ಎಂದು ಅವರು ಹೇಳಿದರು.

ರೀನಾ ಶಾಕ್ಯ ಅವರ ಆರೋಪದ ಸುತ್ತ ವಿವಾದವು ಬೆಳೆಯುತ್ತಿದ್ದಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಮ್ಮದೇ ಆದ ವಿಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದರು, ಅದರಲ್ಲಿ ಅವರು ಅಪಹರಣ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.

“ಶಾಸಕರು ತಮ್ಮ ತಾಯಿಯೊಂದಿಗೆ ಇಟಾವಾ ಪಟ್ಟಣದಲ್ಲಿ ಇದ್ದಾರೆ. ಅವರನ್ನು ಅಪಹರಿಸಲಾಗಿದೆ ಎಂಬ ಆರೋಪಗಳು ಸುಳ್ಳು. ಇಡೀ ಘಟನೆಯು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದೆ” ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಶಾಕ್ಯ ಕುಟುಂಬದಲ್ಲಿನ ನಾಟಕವು ಉತ್ತರ ಪ್ರದೇಶ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ಫೆಬ್ರವರಿ 10 ರಂದು ಪ್ರಾರಂಭವಾಗುವ ಏಳು ಹಂತದ ಚುನಾವಣೆಯು ನಿಖರವಾಗಿ 28 ದಿನಗಳ ನಂತರ ಫಲಿತಾಂಶಗಳನ್ನು ನೀಡುತ್ತದೆ.

ಆದಿತ್ಯನಾಥ ನೇತೃತ್ವದ ಆಡಳಿತಾರೂಢ ಬಿಜೆಪಿಯು ಅತ್ಯಂತ ರಾಜಕೀಯವಾಗಿ ನಿರ್ಣಾಯಕ ರಾಜ್ಯಗಳಲ್ಲಿ ಒಂದರಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.  ಅಖಿಲೇಶ್ ಯಾದವ್ ಮತ್ತು ಸಮಾಜವಾದಿ ಪಕ್ಷವು ಈ ಚುನಾವಣೆಗಳಲ್ಲಿ ಬಿಜೆಪಿಯ ಪ್ರಮುಖ ಸವಾಲಾಗಿ ಕಾಂಗ್ರೆಸ್ ಅನ್ನು ಬದಲಿಸಿದೆ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ. ವಿಶೇಷವಾಗಿ ಯಾದವೇತರ ಒಬಿಸಿಗಳನ್ನು ಪ್ರತಿನಿಧಿಸುವ ಸಣ್ಣ ಪಕ್ಷಗಳೊಂದಿಗೆ ಮೈತ್ರಿಗಳ ಬೆಂಬಲದೊಂದಿಗೆ ಕಠಿಣ ಸವಾಲನ್ನು ಎದುರಿಸುತ್ತಿದೆ.

ಪೂರ್ವ ಯುಪಿಯಿಂದ ಯಾದವೇತರ ಒಬಿಸಿಯ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಅವರ ಸಹಾಯಕರು ಸಮಾಜವಾದಿ ಪಕ್ಷವನ್ನು ಮತ್ತು ಮುಖ್ಯಮಂತ್ರಿಯಾಗಿ ಹಿಂದಿರುಗುವ ಯಾದವ್ ಅವರ ಪ್ರಯತ್ನಗಳಿಗೆ ಕೈಜೋಡಿಸಲಿದ್ದಾರೆ.

2016 ರಲ್ಲಿ ಮಾಯಾವತಿಯವರ ಬಹುಜನ ಸಮಾಜ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದ ಮೌರ್ಯ (2017 ರ ಚುನಾವಣೆಯಲ್ಲಿ ಪಕ್ಷವು ಗೆಲ್ಲುವ ಮೊದಲು) ಬಿಜೆಪಿಯು ಜನರ ಹಿತಾಸಕ್ತಿಗಳ ವಿರುದ್ಧ ಕೆಲಸ ಮಾಡಿದೆ. ಅವರು ಸತತ ಎರಡನೇ ಬಾರಿಗೆ ಚುನಾವಣೆಗೆ ಮುಂಚೆಯೇ ಗೆಲ್ಲುವ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ಎನ್​​ಡಿಟಿವಿಗೆ ಹೇಳಿದ್ದಾರೆ. “ಅವರು (ಬಿಜೆಪಿ) ಜನರ ವಿರುದ್ಧ ಕೆಲಸ ಮಾಡಿದ್ದಾರೆ. ನಾನು ಸೂಕ್ತ ವೇದಿಕೆಗಳಲ್ಲಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ ಆದರೆ ನನ್ನ ಧ್ವನಿ ಎಂದಿಗೂ ಕೇಳಿಸಲಿಲ್ಲ. ಪರಿಣಾಮ ನಾನು ರಾಜೀನಾಮೆ ನೀಡಬೇಕಾಯಿತು” ಎಂದು ಅವರು ಹೇಳಿದರು.

ನಾನು ಬಿಎಸ್‌ಪಿ ತೊರೆಯುವ ಮುನ್ನ ಅದು ಉತ್ತರ ಪ್ರದೇಶದಲ್ಲಿ ನಂಬರ್ 1 ಆಗಿತ್ತು. ಈಗ ಅದು ಎಲ್ಲಿಯೂ ಇಲ್ಲ. ನಾನು ಬಿಜೆಪಿಗೆ ಸೇರಿದಾಗ, ಅದು 14 ವರ್ಷಗಳ ‘ಬನ್ವಾಸ್’ (ವನವಾಸ)ದಿಂದ ಹೊರಬಂದು ಬಹುಮತದ ಸರ್ಕಾರವನ್ನು ರಚಿಸಿತು ಎಂದು ಅವರು ಘೋಷಿಸಿದರು.  ಮೌರ್ಯ ಅವರು ಮುಖ್ಯಮಂತ್ರಿ ಆದಿತ್ಯನಾಥ ಅವರೊಂದಿಗೆ ಜಗಳವಾಡುತ್ತಿದ್ದರು. ಎರಡು ತಿಂಗಳ ಹಿಂದೆ, ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದರು, ಆದರೆ ಏನೂ ಪ್ರಯೋಜನವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಚುನಾವಣೆಗೆ ಇನ್ನೊಂದೇ ತಿಂಗಳು ಬಾಕಿ ಇರುವಾಗ ಉತ್ತರ ಪ್ರದೇಶ ಬಿಜೆಪಿಗೆ ಶಾಕ್ ಮೇಲೆ ಶಾಕ್​ !- ಪಕ್ಷಕ್ಕೆ ರಾಜೀನಾಮೆ ಕೊಟ್ಟ ಮೂವರು ಶಾಸಕರು

Published On - 12:30 pm, Wed, 12 January 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್