ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಶೋಚನೀಯವಾಗಿದೆ, ಮತ ವ್ಯರ್ಥ ಮಾಡಬೇಡಿ: ಮಾಯಾವತಿ

| Updated By: ರಶ್ಮಿ ಕಲ್ಲಕಟ್ಟ

Updated on: Jan 23, 2022 | 6:03 PM

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ತುಂಬಾ ಶೋಚನೀಯವಾಗಿದೆ, ಅವರ ಸಿಎಂ ಅಭ್ಯರ್ಥಿ ಕೆಲವೇ ಗಂಟೆಗಳಲ್ಲಿ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ. ಜನರು ಕಾಂಗ್ರೆಸ್‌ಗೆ ತಮ್ಮ ಮತವನ್ನು ನೀಡಿ ತಮ್ಮ ಮತವನ್ನು ವ್ಯರ್ಥ ಮಾಡದಿದ್ದರೆ ಒಳ್ಳೆಯದು ಎಂದು ಮಾಯಾವತಿ ಟ್ವೀಟ್.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಶೋಚನೀಯವಾಗಿದೆ, ಮತ ವ್ಯರ್ಥ ಮಾಡಬೇಡಿ: ಮಾಯಾವತಿ
ಮಾಯಾವತಿ
Follow us on

ಲಖನೌ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಸ್ಥಿತಿ ತುಂಬಾ ಶೋಚನೀಯವಾಗಿದೆ.ಅವರು ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದ ಒಂದು ಗಂಟೆಯಲ್ಲಿ ಅವರನ್ನು ಬದಲಿಸಿದರು ಎಂದು ಬಹುಜನ ಸಮಾಜ ಪಕ್ಷದ  (Bahujan Samaj Party) ಮುಖ್ಯಸ್ಥೆ ಮಾಯಾವತಿ (Mayawati) ಭಾನುವಾರ ಹೇಳಿದ್ದಾರೆ. “ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ತುಂಬಾ ಶೋಚನೀಯವಾಗಿದೆ, ಅವರ ಸಿಎಂ ಅಭ್ಯರ್ಥಿ ಕೆಲವೇ ಗಂಟೆಗಳಲ್ಲಿ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ. ಜನರು ಕಾಂಗ್ರೆಸ್‌ಗೆ ತಮ್ಮ ಮತವನ್ನು ನೀಡಿ ತಮ್ಮ ಮತವನ್ನು ವ್ಯರ್ಥ ಮಾಡದಿದ್ದರೆ ಒಳ್ಳೆಯದು. ಬಿಎಸ್​​ಪಿಗಾಗಿ ಒಂದು ಮತ ನೀಡಿ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮತಗಳನ್ನು ವಿಭಜಿಸುವ ಪಕ್ಷ ಕಾಂಗ್ರೆಸ್ ಎಂದು ಬಣ್ಣಿಸಿದ ಅವರು, ಮತದಾರರು ಅದನ್ನು ನಿರ್ಲಕ್ಷಿಸುವಂತೆ ಮನವಿ ಮಾಡಿದರು.  “ಉತ್ತರಪ್ರದೇಶದ ಜನರು ಕಾಂಗ್ರೆಸ್ ಅನ್ನು ವೋಟ್ ಕಟ್ ಮಾಡುವ ಪಕ್ಷವೆಂದು ನೋಡುತ್ತಾರೆ. ಸಮಾಜದ ಎಲ್ಲಾ ವರ್ಗಗಳ ಪರವಾಗಿ ಕೆಲಸ ಮಾಡುವ ಸರ್ಕಾರದ ಪರವಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಾದರೆ, ಈ ಸಂದರ್ಭದಲ್ಲಿ ಬಿಎಸ್ಪಿ ಮೊದಲ ಸ್ಥಾನವನ್ನು ಹೊಂದಿದೆ ಎಂದು ಮಾಯಾವತಿ ಹೇಳಿದ್ದಾರೆ.


ಎರಡು ದಿನಗಳ ಹಿಂದೆ ದೆಹಲಿಯ ಕಾಂಗ್ರೆಸ್ ಪ್ರಧಾನ ಕಛೇರಿಯಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಲ್ಲಿ ಯುಪಿಯಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಕೇಳಿದಾಗ, “ನೀವು ಉತ್ತರ ಪ್ರದೇಶದ ಕಾಂಗ್ರೆಸ್‌ನಲ್ಲಿ ಅಂಥಾ ಯಾರನ್ನಾದರೂ ನೋಡುತ್ತಿದ್ದೀರಾ? ಎಂದು ಕೇಳಿದ್ದರು.

ನಂತರ ಶನಿವಾರ ಸಂದರ್ಶನವೊಂದರಲ್ಲಿ ವಾದ್ರಾ ಅವರು ನಾನು ಪಕ್ಷದ ಏಕೈಕ ಮುಖವಲ್ಲ ಎಂದು ಹೇಳಿದ್ದರು. ಸಂದರ್ಶನದಲ್ಲಿ, ಬಿಎಸ್ಪಿಯ ಕಡಿಮೆ ಪ್ರಚಾರದ ಬಗ್ಗೆ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದ ಪ್ರಿಯಾಂಕಾ ಗಾಂಧಿ; ಉಲ್ಟಾ ಹೊಡೆದಿದ್ದು ಯಾಕೆ?