ನಾವು ಅಧಿಕಾರಕ್ಕೆ ಬಂದರೆ ಒಬ್ಬರನ್ನೂ ಸುಮ್ಮನೆ ಬಿಡೋದಿಲ್ಲ; ಎಸ್​ಪಿ ಅಭ್ಯರ್ಥಿಯ ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: Jan 26, 2022 | 1:25 PM

ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್ ಮಾಳವಿಯಾ ಕೂಡ ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದು, ಎಸ್‌ಪಿ ಅಭ್ಯರ್ಥಿ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಮಿತ್ ಮಾಳವಿಯಾ ಆರೋಪಿಸಿದ್ದಾರೆ.

ನಾವು ಅಧಿಕಾರಕ್ಕೆ ಬಂದರೆ ಒಬ್ಬರನ್ನೂ ಸುಮ್ಮನೆ ಬಿಡೋದಿಲ್ಲ; ಎಸ್​ಪಿ ಅಭ್ಯರ್ಥಿಯ ವಿಡಿಯೋ ವೈರಲ್
ಆದಿಲ್ ಚೌಧರಿಯ ವಿಡಿಯೋ ವೈರಲ್
Follow us on

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Assembly Elections 2022) ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಒಬ್ಬ ವ್ಯಕ್ತಿಯನ್ನೂ ಬಿಡುವುದಿಲ್ಲ ಎಂದು ಸಮಾಜವಾದಿ ಪಕ್ಷದ (Samajwadi Party) ಅಭ್ಯರ್ಥಿ ಆದಿಲ್ ಚೌಧರಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಯಾರ ಹೆಸರನ್ನೂ ಪ್ರಸ್ತಾಪಿಸದ ಆದಿಲ್ ಚೌಧರಿ, ನೀವು ಯಾರೂ ಯೋಚಿಸಬೇಡಿ, ನಾವು ಸರ್ಕಾರವನ್ನು ರಚಿಸುವುದು ಖಚಿತ. ನಾವೇನಾದರೂ ಅಧಿಕಾರಕ್ಕೆ ಬಂದರೆ ನಮ್ಮ ವಿರುದ್ಧ ಅಪರಾಧ ಎಸಗುತ್ತಿರುವವರ ವಿರುದ್ಧ ನಾವು ಸೇಡು ತೀರಿಸಿಕೊಳ್ಳುತ್ತೇವೆ. ನಾವು ನಮ್ಮ ವಿರುದ್ಧ ಪಿತೂರಿ ಮಾಡಿದ ಯಾರೊಬ್ಬರನ್ನೂ ಸುಮ್ಮನೆ ಬಿಡುವುದಿಲ್ಲ. ಇದರಿಂದ ಅವರು ಏನನ್ನಾದರೂ ಮಾಡುವ ಮೊದಲು 100 ಬಾರಿ ಯೋಚಿಸಬೇಕಾಗುತ್ತದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್ ಮಾಳವಿಯಾ ಕೂಡ ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದಾರೆ. ಎಸ್‌ಪಿ ಅಭ್ಯರ್ಥಿ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಾಳವಿಯಾ ಆರೋಪಿಸಿದ್ದಾರೆ. ಆದರೆ, ಆದಿಲ್ ಚೌಧರಿ ವಿಡಿಯೋದಲ್ಲಿ ಯಾವುದೇ ಸಮುದಾಯವನ್ನು ಹೆಸರಿಸಿರುವುದು ರೆಕಾರ್ಡ್ ಆಗಿಲ್ಲ.

ಮೀರತ್ ದಕ್ಷಿಣದ ಸಮಾಜವಾದಿ ಪಕ್ಷದ ಅಭ್ಯರ್ಥಿ ಆದಿಲ್ ಚೌಧರಿ, ‘ನಾವು ಸರ್ಕಾರ ರಚಿಸಿದರೆ ಅವರನ್ನು ಬಿಡುವುದಿಲ್ಲ… ಒಬ್ಬೊಬ್ಬರಾಗಿ ಎಲ್ಲರ ಮೇಲೂ ಸೇಡು ತೀರಿಸಿಕೊಳ್ಳುತ್ತೇವೆ’ ಎಂದು ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಅಮಿತ್ ಮಾಳವಿಯಾ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಮಾಳವಿಯಾ, ನಹಿದ್ ಹಸನ್ ಮತ್ತು ಆದಿಲ್ ಚೌಧರಿಯಂತಹ ಹಿಂದೂ ವಿರೋಧಿ ಗೂಂಡಾಗಳನ್ನು ಚುನಾವಣಾ ಅಭ್ಯರ್ಥಿಗಳಾಗಿ ಯಾಕೆ ಕಣಕ್ಕೆ ಇಳಿಸಿದ್ದೀರಾ? ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಯಾಕೆ ಬಹಿರಂಗ ಮಾಡುತ್ತಿಲ್ಲ?; ಬಿಜೆಪಿ ಪ್ರಶ್ನೆ 

ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಆರ್​​ಪಿಎನ್ ಸಿಂಗ್

Published On - 1:24 pm, Wed, 26 January 22