UP Assembly Elections 2022: ಲಕ್ಷ್ಮಿ ದೇವತೆ ಆನೆ, ಸೈಕಲ್ ಮೇಲೆ ಯಾರ ಮನೆಗೂ ಬರುವುದಿಲ್ಲ; ರಾಜನಾಥ್ ಸಿಂಗ್ ಟೀಕೆ

| Updated By: ಸುಷ್ಮಾ ಚಕ್ರೆ

Updated on: Feb 22, 2022 | 6:05 PM

ನಾವು ಕೇವಲ ಸರ್ಕಾರ ರಚನೆಗಾಗಿ ರಾಜಕೀಯ ಮಾಡುತ್ತಿಲ್ಲ, ಸಮಾಜ ಮತ್ತು ದೇಶವನ್ನು ಕಟ್ಟಲು ರಾಜಕೀಯ ಮಾಡುತ್ತೇವೆ. ಆದ್ದರಿಂದ ನಾವು ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

UP Assembly Elections 2022: ಲಕ್ಷ್ಮಿ ದೇವತೆ ಆನೆ, ಸೈಕಲ್ ಮೇಲೆ ಯಾರ ಮನೆಗೂ ಬರುವುದಿಲ್ಲ; ರಾಜನಾಥ್ ಸಿಂಗ್ ಟೀಕೆ
ರಾಜನಾಥ್ ಸಿಂಗ್
Follow us on

ನವದೆಹಲಿ: “ಲಕ್ಷ್ಮಿ ದೇವಿಯು ಎಂದೂ ‘ಸೈಕಲ್‌’ ಅಥವಾ ‘ಆನೆ’ಯ ಮೇಲೆ ಕುಳಿತು ಯಾರ ಮನೆಗೂ ಭೇಟಿ ನೀಡುವುದಿಲ್ಲ. ಹಾಗೆಯೇ ಆಕೆ ಯಾರತ್ತಲೂ ತನ್ನ ‘ಕೈ’ ಬೀಸುವುದಿಲ್ಲ. ಲಕ್ಷ್ಮಿ ಮಾತೆ ಕೇವಲ ‘ಕಮಲ’ದ ಮೇಲೆ ಕುಳಿತು ಬರುತ್ತಾಳೆ. ಈ ಮಾತನ್ನು ನೀವು ಒಪ್ಪುತ್ತೀರಲ್ಲವೇ?” ಎಂದು ಗೋರಖ್‌ಪುರದಲ್ಲಿ (Gorakhur) ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಉತ್ತರ ಪ್ರದೇಶದ ಇತರೆ ಪಕ್ಷಗಳನ್ನು ಲೇವಡಿ ಮಾಡಿದ್ದಾರೆ.

ಇದೇ ವೇಳೆ ಬಿಜೆಪಿ ಸರ್ಕಾರದ ಸಾಧನೆಗಳನ್ನು ಎತ್ತಿ ಹಿಡಿದ ಸಚಿವ ರಾಜನಾಥ್ ಸಿಂಗ್, ಬಡವರಿಗೆ ವಾರ್ಷಿಕ 6,000 ರೂ. ಹಣ, ಉಚಿತ ಪಡಿತರ, ಹಲವಾರು ಜನರಿಗೆ ಉತ್ತಮವಾದ ಮನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ನಾವು ಕೇವಲ ಸರ್ಕಾರ ರಚನೆಗಾಗಿ ರಾಜಕೀಯ ಮಾಡುತ್ತಿಲ್ಲ. ನಾವು ಸಮಾಜ ಮತ್ತು ದೇಶವನ್ನು ಕಟ್ಟಲು ರಾಜಕೀಯ ಮಾಡುತ್ತೇವೆ. ಆದ್ದರಿಂದ ನಾವು ದೇಶದ ಒಳಿತಿಗಾಗಿ ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ” ಎಂದು ಹೇಳಿದ್ದಾರೆ.

“ಚುನಾವಣೆ ಬಂದಾಗ, ಎಲ್ಲಾ ರಾಜಕೀಯ ಪಕ್ಷಗಳು ಜನರಿಗೆ ದೊಡ್ಡ ಭರವಸೆಗಳನ್ನು ನೀಡುತ್ತವೆ. ಕಳೆದ 75 ವರ್ಷಗಳಲ್ಲಿ ‘ನೇತಾಸ್’ ಆ ಭರವಸೆಗಳನ್ನು ಈಡೇರಿಸಿದ್ದರೆ ಭಾರತ 10-20 ವರ್ಷಗಳ ಹಿಂದೆ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶವಾಗಬಹುದಿತ್ತು” ಎಂದು ರಾಜನಾಥ್ ಸಿಂಗ್ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಈ ಹಿಂದೆ ಉತ್ತರ ಪ್ರದೇಶದ ಗೋಂಡಾದ ಕರ್ನಲ್‌ಗಂಜ್‌ನಲ್ಲಿ ಚುನಾವಣಾ ರ್ಯಾಲಿ ನಡೆಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್​, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿವರ್ಷವೂ ಹೋಳಿ ಹುಣ್ಣಿಮೆ ಮತ್ತು ದೀಪಾವಳಿ ಹಬ್ಬಗಳಂದು ಉಚಿತವಾಗಿ ಎಲ್​​ಪಿಜಿ ಸಿಲಿಂಡರ್​ ನೀಡಲಾಗುವುದು ಎಂದು ಭರವಸೆ ನೀಡಿದ್ದರು.

ಇದನ್ನೂ ಓದಿ: UP Assembly Polls 2022: ಲಾಕ್​ಡೌನ್ ವೇಳೆ ಮೋದಿ, ಯೋಗಿ ಸರ್ಕಾರ ನಿಮ್ಮ ನೋವನ್ನು ನಿರ್ಲಕ್ಷ್ಯಿಸಿದೆ; ಸೋನಿಯಾ ಗಾಂಧಿ ಟೀಕೆ

UP Elections 2022: ಮೂರನೇ ಹಂತದ ಮತದಾನಕ್ಕೆ ಉತ್ತರ ಪ್ರದೇಶ ಸಜ್ಜು; ಈ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ?