ಒಂದು ಮತದಲ್ಲಿ ಏನಾಗುತ್ತದೆ? ಮತದಾರರಲ್ಲಿ ಕೇಳಿದ ಉತ್ತರ ಪ್ರದೇಶದ ಅಧಿಕಾರಿಗಳು; ಕ್ರಮ ಕೈಗೊಳ್ಳಲು ಅಖಿಲೇಶ್ ಒತ್ತಾಯ

| Updated By: ರಶ್ಮಿ ಕಲ್ಲಕಟ್ಟ

Updated on: Feb 07, 2022 | 6:36 PM

ಮತದಾನದ ಕರ್ತವ್ಯ ನಿರ್ವಹಿಸುವ ಅಧಿಕಾರಿಯೊಬ್ಬರು "ಏಕ್ ವೋಟ್ ಸೆ ಕುಚ್ ಹೋತಾ ಹೈ ಕ್ಯಾ" ಎಂದು ಸಾರ್ವಜನಿಕವಾಗಿ ಹೇಳುವುದು ತುಂಬಾ ಗಂಭೀರವಾದ ವಿಷಯವಾಗಿದೆ. ಅಂತಹ ಅಧಿಕಾರಿಗಳನ್ನು ಗುರುತಿಸಿ ತಕ್ಷಣವೇ ಅಮಾನತುಗೊಳಿಸಬೇಕು ಎಂದ ಅಖಿಲೇಶ್.

ಒಂದು ಮತದಲ್ಲಿ ಏನಾಗುತ್ತದೆ? ಮತದಾರರಲ್ಲಿ ಕೇಳಿದ ಉತ್ತರ ಪ್ರದೇಶದ ಅಧಿಕಾರಿಗಳು; ಕ್ರಮ ಕೈಗೊಳ್ಳಲು ಅಖಿಲೇಶ್ ಒತ್ತಾಯ
ಜನರಲ್ಲಿ ಮಾತನಾಡುತ್ತಿರುವ ಮತಗಟ್ಟೆ ಕರ್ತವ್ಯದ ಅಧಿಕಾರಿ
Follow us on

ಲಖನೌ:  ಮತದಾರರಲ್ಲಿ  ಮತವನ್ನು ಬದಲಾಯಿಸುವಂತೆ ಒತ್ತಾಯಿಸಿದ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಭಾನುವಾರ ಚುನಾವಣಾ ಆಯೋಗವನ್ನು(Election Commission) ಒತ್ತಾಯಿಸಿದ್ದಾರೆ. ಅದೇ ವೇಳೆ ತಮ್ಮ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮತದಾನದ ಸಂದರ್ಭದಲ್ಲಿ ಜಾಗರೂಕರಾಗಿರಬೇಕು ಎಂದು ಅಖಿಲೇಶ್ ಹೇಳಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯು ಭಾನುವಾರ ಆಗ್ರಾದಲ್ಲಿ ಅಂಗವಿಕಲರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಪ್ರಾರಂಭವಾಯಿತು. ಅಂಚೆ ಮತಪತ್ರಗಳ ಮೂಲಕ ಮತದಾನ ನಡೆಯಿತು.  ಆಗ್ರಾದ ಫತೇಹಾಬಾದ್‌ನಲ್ಲಿ (Fatehabad) ಮತಗಟ್ಟೆ ಅಧಿಕಾರಿಗಳು ಭಾನುವಾರ ಬಿಜೆಪಿಗೆ ಮತ ಹಾಕುವಂತೆ ಒತ್ತಾಯಿಸಿದ್ದಾರೆ ಎಂದು ಅಂಗವಿಕಲ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಆ ವ್ಯಕ್ತಿ ಬೇರೆ ಪಕ್ಷಕ್ಕೆ ಮತ ಹಾಕಲು ಬಯಸಿದ್ದರು.  ಬಲವಂತದ ಮತದಾನದ ಕುರಿತು ಸ್ಥಳೀಯರು ಪ್ರತಿಭಟನೆ ನಡೆಸಿದ ನಂತರ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳನ್ನು ಕರೆಸಲಾಯಿತು. ಅಖಿಲೇಶ್ ಯಾದವ್ ಅವರು ಟ್ವೀಟ್ ಮಾಡಿರುವ ವಿಡಿಯೊದಲ್ಲಿ, ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮತದಾರರಿಗೆ ಒಂದು ಮತದಿಂದ ವ್ಯತ್ಯಾಸವೇನೂ ಆಗುವುದಿಲ್ಲ ಎಂದು ಹೇಳುವುದನ್ನು ಕೇಳಬಹುದು. ಇದು ಗಂಭೀರ ವಿಷಯವಾಗಿದೆ ಮತ್ತು ಅಂತಹ ಅಧಿಕಾರಿಗಳನ್ನು ಗುರುತಿಸಿ ಅಮಾನತುಗೊಳಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.

ಮತದಾನದ ಕರ್ತವ್ಯ ನಿರ್ವಹಿಸುವ ಅಧಿಕಾರಿಯೊಬ್ಬರು “ಏಕ್ ವೋಟ್ ಸೆ ಕುಚ್ ಹೋತಾ ಹೈ ಕ್ಯಾ” ಎಂದು ಸಾರ್ವಜನಿಕವಾಗಿ ಹೇಳುವುದು ತುಂಬಾ ಗಂಭೀರವಾದ ವಿಷಯವಾಗಿದೆ. ಅಂತಹ ಅಧಿಕಾರಿಗಳನ್ನು ಗುರುತಿಸಿ ತಕ್ಷಣವೇ ಅಮಾನತುಗೊಳಿಸಬೇಕು ಎಂದು ಚುನಾವಣಾ ಆಯೋಗದಿಂದ ನಿರೀಕ್ಷಿಸುತ್ತೇನೆ ಎಂದು ಯಾದವ್ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಫೆಬ್ರವರಿ 10 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: Viral Video: ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷರ ಕಪಾಲಕ್ಕೆ ಹೊಡೆಯಲು ಮುಂದಾದ ನಾಯಕ; ಜೋರಾಗಿ ನಕ್ಕ ಅಖಿಲೇಶ್ ಯಾದವ್