AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷರ ಕಪಾಲಕ್ಕೆ ಹೊಡೆಯಲು ಮುಂದಾದ ನಾಯಕ; ಜೋರಾಗಿ ನಕ್ಕ ಅಖಿಲೇಶ್ ಯಾದವ್

ರಾಮ್‌ಜಿಲಾಲ್ ಸುಮನ್ ಅವರ ಭಾಷಣದ ಸಮಯದಲ್ಲಿ ಜಿತೇಂದ್ರ ವರ್ಮಾ ಮತ್ತು ಅಖಿಲೇಶ್ ಯಾದವ್ ಇಬ್ಬರೂ ಮಾತನಾಡುತ್ತಿದ್ದರು. ಇದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನು ಕೆರಳಿಸಿತು.

Viral Video: ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷರ ಕಪಾಲಕ್ಕೆ ಹೊಡೆಯಲು ಮುಂದಾದ ನಾಯಕ; ಜೋರಾಗಿ ನಕ್ಕ ಅಖಿಲೇಶ್ ಯಾದವ್
ಉತ್ತರ ಪ್ರದೇಶದಲ್ಲಿ ರಾಮ್‌ಜಿಲಾಲ್ ಸುಮನ್ ಎಸ್​ಪಿ ಜಿಲ್ಲಾಧ್ಯಕ್ಷ ಜಿತೇಂದ್ರ ವರ್ಮಾ ಅವರಿಗೆ ಕಪಾಳಮೋಕ್ಷ ಮಾಡಲು ಮುಂದಾದ ದೃಶ್ಯ
TV9 Web
| Updated By: ಸುಷ್ಮಾ ಚಕ್ರೆ|

Updated on:Feb 07, 2022 | 4:15 PM

Share

ಉತ್ತರ ಪ್ರದೇಶದ (Uttar Pradesh) ಬಹ್ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಜಿಲಾಲ್ ಸುಮನ್ ಎಸ್​ಪಿ ಜಿಲ್ಲಾಧ್ಯಕ್ಷ ಜಿತೇಂದ್ರ ವರ್ಮಾ ಅವರಿಗೆ ಕಪಾಳಮೋಕ್ಷ ಮಾಡಲು ಮುಂದಾದ ವಿಡಿಯೋ ವೈರಲ್ ಆಗಿದೆ. ಇದರಿಂದ ಜಿತೇಂದ್ರ ವರ್ಮಾ ಭಯಭೀತರಾಗಿ ಕಾಣುತ್ತಿದ್ದರೆ, ಅಖಿಲೇಶ್ ಯಾದವ್ (Akhilesh Yadav) ಜೋರಾಗಿ ನಗುತ್ತಾ ಎಲ್ಲರತ್ತ ಕೈಮುಗಿದರು.

ರಾಮ್‌ಜಿಲಾಲ್ ಸುಮನ್ ಭಾನುವಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಜಿತೇಂದ್ರ ವರ್ಮಾ ವೇದಿಕೆಯಲ್ಲಿ ಅಖಿಲೇಶ್ ಯಾದವ್ ಅವರೊಂದಿಗೆ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ, ರಾಮ್‌ಜಿಲಾಲ್ ಸುಮನ್ ತನ್ನ ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿ ಜಿತೇಂದ್ರ ವರ್ಮಾ ಬಳಿಗೆ ಹೋಗಿ ಕಪಾಳಮೋಕ್ಷ ಮಾಡುವಂತೆ ಕೈ ಎತ್ತಿದರು. ಅದನ್ನು ನೋಡಿದ ಅಖಿಲೇಶ್ ಯಾದವ್ ಜೋರಾಗಿ ನಗುತ್ತಾ ರಾಮ್‌ಜಿಲಾಲ್ ಸುಮನ್ ಅವರನ್ನು ಸಮಾಧಾನಪಡಿಸಿ, ಸಭಿಕರತ್ತ ಕೈ ಮುಗಿದರು.

ವರದಿಯ ಪ್ರಕಾರ, ರಾಮ್‌ಜಿಲಾಲ್ ಸುಮನ್ ಅವರ ಭಾಷಣದ ಸಮಯದಲ್ಲಿ ಜಿತೇಂದ್ರ ವರ್ಮಾ ಮತ್ತು ಅಖಿಲೇಶ್ ಯಾದವ್ ಇಬ್ಬರೂ ಮಾತನಾಡುತ್ತಿದ್ದರು. ಇದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನು ಕೆರಳಿಸಿತು. ಇದರಿಂದ ಕೋಪಗೊಂಡ ಅವರು ತಮ್ಮ ಭಾಷಣವನ್ನು ನಿಲ್ಲಿಸಿ ಜಿತೇಂದ್ರ ವರ್ಮಾ ಅವರನ್ನು ಹೊಡೆಯಲು ಮುಂದಾದರು. ಆಗ ಅವರ ಕೋಪವನ್ನು ಅರ್ಥ ಮಾಡಿಕೊಂಡ ಅಖಿಲೇಶ್ ಯಾದವ್ ಜೋರಾಗಿ ನಗುತ್ತಾ, ರಾಮ್‌ಜಿಲಾಲ್ ಸುಮನ್ ಅವರನ್ನು ತಡೆದು, ಸಭಿಕರತ್ತ ನೋಡುತ್ತಾ, ಕೈ ಮುಗಿದಿದ್ದಾರೆ.

ಇದನ್ನೂ ಓದಿ: Viral Video: ಗೆಳತಿಯನ್ನು ಸೂಟ್​ಕೇಸ್​ನಲ್ಲಿಟ್ಟು ಹಾಸ್ಟೆಲ್​ನೊಳಗೆ ಕರೆದೊಯ್ದ ವಿದ್ಯಾರ್ಥಿ; ಮಣಿಪಾಲ್ ಗರ್ಲ್ ವಿಡಿಯೋ ವೈರಲ್

Viral News: ಚಿರತೆಯೊಂದಿಗೆ ಸೆಣಸಾಡಿ 6 ವರ್ಷದ ಮಗಳನ್ನು ಸಾವಿನ ದವಡೆಯಿಂದ ಕಾಪಾಡಿದ ಮಹಿಳೆ!

Published On - 4:09 pm, Mon, 7 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ