UP Assembly Polls 2022: ಲಾಕ್​ಡೌನ್ ವೇಳೆ ಮೋದಿ, ಯೋಗಿ ಸರ್ಕಾರ ನಿಮ್ಮ ನೋವನ್ನು ನಿರ್ಲಕ್ಷ್ಯಿಸಿದೆ; ಸೋನಿಯಾ ಗಾಂಧಿ ಟೀಕೆ

| Updated By: ಸುಷ್ಮಾ ಚಕ್ರೆ

Updated on: Feb 21, 2022 | 3:44 PM

Uttar Pradesh Assembly Elections: ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಕೊರೊನಾ ಸಾಂಕ್ರಾಮಿಕ, ಲಾಕ್​ಡೌನ್ ಸಮಯದಲ್ಲಿ ಜನರ ನೋವನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

UP Assembly Polls 2022: ಲಾಕ್​ಡೌನ್ ವೇಳೆ ಮೋದಿ, ಯೋಗಿ ಸರ್ಕಾರ ನಿಮ್ಮ ನೋವನ್ನು ನಿರ್ಲಕ್ಷ್ಯಿಸಿದೆ; ಸೋನಿಯಾ ಗಾಂಧಿ ಟೀಕೆ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
Follow us on

ರಾಯ್​ಬರೇಲಿ: ತಮ್ಮ ಸ್ವಕ್ಷೇತ್ರವಾದ ರಾಯ್​ಬರೇಲಿಯ ಮತದಾರರನ್ನು ಉದ್ದೇಶಿಸಿ ಮಾತನಾಡಿರುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi), ಕೇಂದ್ರ ಸರ್ಕಾರ ಮತ್ತು ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2004ರಿಂದ ಕಾಂಗ್ರೆಸ್ ಭದ್ರಕೋಟೆಯಾದ ರಾಯ್​​ಬರೇಲಿಯ ಸಂಸದರಾಗಿರುವ ಸೋನಿಯಾ ಗಾಂಧಿ, ಕೇಂದ್ರದ ಮೋದಿ ಸರ್ಕಾರ ಮತ್ತು ಯೋಗಿ ಸರ್ಕಾರ ಎರಡನ್ನೂ ಟೀಕಿಸಿದ್ದಾರೆ. ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಕೊರೊನಾ ಸಾಂಕ್ರಾಮಿಕ, ಲಾಕ್​ಡೌನ್ ಸಮಯದಲ್ಲಿ ಜನರ ನೋವನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ನಿಮ್ಮ ಅಂಗಡಿ, ವಹಿವಾಟುಗಳನ್ನು ಮುಚ್ಚಲಾಯಿತು. ಆ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆಯಿಲ್ಲದೆ ನೀವು ಮೈಲುಗಟ್ಟಲೆ ದೂರ ನಡೆದಾಡುವ ನೋವನ್ನು ಅನುಭವಿಸಿದ್ದೀರಿ. ಆದರೆ, ನರೇಂದ್ರ ಮೋದಿ- ಯೋಗಿ ಆದಿತ್ಯನಾಥ್ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸಿತು. ನಿಮ್ಮ ನೋವನ್ನು ಲೆಕ್ಕಿಸದೆ ಮುಖ ತಿರುಗಿಸಿಕೊಂಡು ಹೋಯಿತು. ನಿಮ್ಮ ಸಂಕಷ್ಟದ ಸಮಯದಲ್ಲಿ ಕಣ್ಣು ಮುಚ್ಚಿ ಕುಳಿತಿದ್ದ ಮೋದಿ ಸರ್ಕಾರವು ನಿಮಗೆ ಯಾವುದೇ ಪರಿಹಾರವನ್ನು ನೀಡಲಿಲ್ಲ ಎಂದು ಸೋನಿಯಾ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

5 ವರ್ಷಗಳ ಕಾಲ ನಿಮ್ಮ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವುದನ್ನು ಹೊರತುಪಡಿಸಿ ಬೇರೇನೂ ಮಾಡದ ಸರ್ಕಾರವನ್ನು ನೀವು ನೋಡಿದ್ದೀರಿ. ರೈತರು ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ನಿಮಗೆ ಸರ್ಕಾರ ಹಣ ನೀಡಿಲ್ಲ ಅಥವಾ ರಸಗೊಬ್ಬರಗಳನ್ನು ನೀಡಿಲ್ಲ, ನೀರಾವರಿ ಸೌಲಭ್ಯಗಳನ್ನು ಸಹ ನೀಡಿಲ್ಲ ಎಂದು ಸೋನಿಯಾ ಗಾಂಧಿ ಟೀಕಿಸಿದ್ದಾರೆ.

ಯುವಕರು ಓದುತ್ತಾರೆ ಮತ್ತು ಉದ್ಯೋಗಕ್ಕೆ ಸಿದ್ಧರಾಗುತ್ತಾರೆ. ಆದರೆ ಬಿಜೆಪಿ ಸರ್ಕಾರ ನಿಮ್ಮನ್ನು ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ. ಕನಿಷ್ಠ 12 ಲಕ್ಷ ಸರ್ಕಾರಿ ಉದ್ಯೋಗ ಹುದ್ದೆಗಳು ಖಾಲಿ ಇವೆ. ಆದರೆ ನಿಮಗೆ ಸರ್ಕಾರ ಕೆಲಸ ನೀಡಿಲ್ಲ. ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಸಾಸಿವೆ ಎಣ್ಣೆಯ ಬೆಲೆಗಳು ಗಗನಕ್ಕೇರುತ್ತಿವೆ, ಜನರು ತಮ್ಮ ಮನೆಗಳನ್ನು ನಡೆಸುವುದು ಕಷ್ಟಕರವಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಫೆಬ್ರವರಿ 2 ರಂದು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ ರಾಯ್ಬರೇಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10ರಂದು ನಡೆಯಲಿದೆ.

ಇದನ್ನೂ ಓದಿ: ಪೆಗಾಸಸ್​ ಸ್ಪೈವೇರ್​ನ್ನು ಮೋದಿ ಸರ್ಕಾರವೇ ಖರೀದಿಸಿತ್ತು ಎಂದು ವರದಿ ಮಾಡಿದ್ದ ನ್ಯೂಯಾರ್ಕ್​ ಟೈಮ್ಸ್​ಗೆ ಲೀಗಲ್​ ನೋಟಿಸ್​ ಕಳಿಸಿದ ಚೆನ್ನೈ ವಕೀಲ

UP Assembly Polls ಮತಗಟ್ಟೆಯಲ್ಲಿ ಫೋಟೊ, ವಿಡಿಯೊ ಚಿತ್ರೀಕರಣ; ಮತದಾನದ ಗೌಪ್ಯತೆ ಉಲ್ಲಂಘಿಸಿದ ಕಾನ್ಪುರ್ ಮೇಯರ್