ಇವಿಎಂನಲ್ಲಿ ಸಮಾಜವಾದಿ ಪಕ್ಷದ ಬಟನ್ ಒತ್ತಿದರೆ ಬಿಜೆಪಿ ಸ್ಲಿಪ್ ಬರುತ್ತಿದೆ: ಸಮಾಜವಾದಿ ಪಕ್ಷ ಆರೋಪ

| Updated By: ರಶ್ಮಿ ಕಲ್ಲಕಟ್ಟ

Updated on: Feb 20, 2022 | 3:28 PM

ಕಾನ್ಪುರ ಗ್ರಾಮಾಂತರದ ಭೋಗ್ನಿಪುರ 208 ವಿಧಾನಸಭೆಯ ಬೂತ್ ಸಂಖ್ಯೆ 121 ರಲ್ಲಿ ಸಮಾಜವಾದಿ ಪಕ್ಷದ ಬಟನ್ ಒತ್ತಿದ ನಂತರ ಬಿಜೆಪಿಯ ಸ್ಲಿಪ್ ಹೊರಬರುತ್ತಿದೆ. ಸುಗಮ ಮತ್ತು ನ್ಯಾಯಯುತ ಮತದಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಗಮನಹರಿಸಬೇಕು

ಇವಿಎಂನಲ್ಲಿ ಸಮಾಜವಾದಿ ಪಕ್ಷದ ಬಟನ್ ಒತ್ತಿದರೆ ಬಿಜೆಪಿ ಸ್ಲಿಪ್ ಬರುತ್ತಿದೆ: ಸಮಾಜವಾದಿ ಪಕ್ಷ ಆರೋಪ
ಅಖಿಲೇಶ್ ಯಾದವ್
Follow us on

ದೆಹಲಿ: ಇಂದು ಉತ್ತರ ಪ್ರದೇಶದಲ್ಲಿ (UP Polls)ಮೂರನೇ ಹಂತದ ಮತದಾನದ ವೇಳೆ ವಿದ್ಯುನ್ಮಾನ ಮತಯಂತ್ರದಲ್ಲಿ (EVM) ಅಕ್ರಮ ಕಂಡುಬಂದಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಸಮಾಜವಾದಿ ಪಕ್ಷದ ಪಕ್ಕದಲ್ಲಿರುವ ಬಟನ್ ಅನ್ನು ಮತದಾರರು ಒತ್ತಿದರೂ ಸಹ, ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (VVPAT)ನಲ್ಲಿ  ಬಿಜೆಪಿಯ ಸ್ಲಿಪ್ ಬರುತ್ತಿದೆ ಎಂದು ಪಕ್ಷ ಆರೋಪಿಸಿದೆ. “ಕಾನ್ಪುರ ಗ್ರಾಮಾಂತರದ ಭೋಗ್ನಿಪುರ 208 ವಿಧಾನಸಭೆಯ ಬೂತ್ ಸಂಖ್ಯೆ 121 ರಲ್ಲಿ ಸಮಾಜವಾದಿ ಪಕ್ಷದ ಬಟನ್ ಒತ್ತಿದ ನಂತರ ಬಿಜೆಪಿಯ ಸ್ಲಿಪ್ ಹೊರಬರುತ್ತಿದೆ. ಸುಗಮ ಮತ್ತು ನ್ಯಾಯಯುತ ಮತದಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಗಮನಹರಿಸಬೇಕು” ಎಂದು ಸಮಾಜವಾದಿ ಪಕ್ಷ ಟ್ವೀಟ್ ಮಾಡಿದೆ. ಈ ದೂರನ್ನು ಆಧಾರ ರಹಿತ ಎಂದು ಚುನಾವಣಾ ಆಯೋಗ ಹೇಳಿದೆ. ಕಾನ್ಪುರ ದೇಹತ್‌ನ ಭೋಗ್ನಿಪುರ್‌ನಲ್ಲಿರುವ ಮತಗಟ್ಟೆ ಸಂಖ್ಯೆ 21 ರಲ್ಲಿ ಇವಿಎಂನಲ್ಲಿ ಎಸ್‌ಪಿಯ ಸೈಕಲ್ ಚಿಹ್ನೆಯ ಎದುರಿರುವ ಬಟನ್ ಒತ್ತಿದ ನಂತರ ಬಿಜೆಪಿ ಚಿಹ್ನೆಯನ್ನು ಪ್ರದರ್ಶಿಸುವ ಚಿಟ್  ಬಂದಿದೆ ಎಂದು ನಮಗೆ ದೂರು ಬಂದಿದೆ. ಈ ದೂರು ಆಧಾರರಹಿತವಾಗಿದೆ ಎಂದು ಕಂಡುಬಂದಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಬಿಡಿ ರಾಮ್ ತಿವಾರಿ ಹೇಳಿದ್ದಾರೆ. ಸಮಾಜವಾದಿ ಪಕ್ಷವು ಚುನಾವಣಾ ಆಯೋಗವು ಮಧ್ಯಪ್ರವೇಶಿಸಿ “ನ್ಯಾಯಯುತ ಮತ್ತು ಸುಗಮ” ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಒತ್ತಾಯಿಸಿ ಹಲವಾರು ಇತರ ದೂರುಗಳನ್ನು ಮಾಡಿದೆ. ಹಮೀರ್‌ಪುರದ ಬೂತ್‌ನಲ್ಲಿ ವಿವಿಪಿಎಟಿ ದೋಷಪೂರಿತವಾಗಿದೆ ಎಂದು ಪಕ್ಷವು ಟ್ವಿಟರ್‌ನಲ್ಲಿ ಆರೋಪಿಸಿದೆ. “ಹಮೀರ್‌ಪುರ ಜಿಲ್ಲೆಯ 228 ವಿಧಾನ ಸಭೆ, ಬೂತ್ ಸಂಖ್ಯೆ 432 ಸ್ಲಿಪ್ ಮತದಾನದ ನಂತರ ಹೊರಬರುತ್ತಿಲ್ಲ” ಎಂದು ಪಕ್ಷ ಹೇಳಿದೆ.

ಮೈನ್‌ಪುರಿಯ ಕೆಲವು ಮತಗಟ್ಟೆಗಳಲ್ಲಿ ಇವಿಎಂಗಳು ಅಸಮರ್ಪಕವಾಗಿವೆ ಎಂದು ಅಖಿಲೇಶ್ ಯಾದವ್ ಅವರ ಪಕ್ಷ ಆರೋಪಿಸಿದೆ.

ಫರ್ಖುರಾಬಾದ್ ಜಿಲ್ಲೆಯ 194 ಫರ್ಖುರಾಬಾದ್ ವಿಧಾನಭೆಯ ಬೂತ್ ಸಂಖ್ಯೆ 37ರಲ್ಲಿ ಇವಿಎಂ ಯಂತ್ರದಲ್ಲಿ ಸೈಕಲ್ ಚುನಾವಣೆ ಚಿಹ್ನೆಯೇ ಇಲ್ಲ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ.


ಏಳು ಹಂತದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೂರನೇ ಸುತ್ತಿನ ಮತದಾನ ಇಂದು ನಡೆಯುತ್ತಿದೆ. 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಇಂದು ಮತದಾನ ನಡೆಯುವ ಸ್ಥಾನಗಳು ಉತ್ತರ ಪ್ರದೇಶದ ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿವೆ. 2017 ರಲ್ಲಿ, ಈ 59 ಸ್ಥಾನಗಳಲ್ಲಿ ಬಿಜೆಪಿ 49 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಸಮಾಜವಾದಿ ಪಕ್ಷವು 9 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿದೆ ಮತ್ತು ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷವು ಯಾವುದೇ ಸ್ಥಾನಗಳಿಸಿಲ್ಲ.

ಇದನ್ನೂ ಓದಿ: UP Elections 2022: ಮೂರನೇ ಹಂತದ ಮತದಾನಕ್ಕೆ ಉತ್ತರ ಪ್ರದೇಶ ಸಜ್ಜು; ಈ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ?

Published On - 3:09 pm, Sun, 20 February 22