ಯಾದಗಿರಿ: ಪ್ರಜಾಧ್ವನಿ ಸಮಾವೇಶದ ವೇದಿಕೆಯಲ್ಲೇ ಎಂ.ಬಿ.ಪಾಟೀಲರು ತಮ್ಮ ಐಫೋನ್ ಕಳೆದುಕೊಂಡ್ರು ಮಾರಾಯ್ರೆ
ಚುನಾವಣೆಯಲ್ಲಿ ಗೆಲುವು ಸಾಧಿಸಿ ರಾಜ್ಯದ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕೈಗೊಂಡಿದೆ. ಈ ಯಾತ್ರೆ ಇಂದು ಯಾದಗಿರಿಯಲ್ಲಿ ನಡೆದಿದೆ. ಆದರೆ ಯಾತ್ರೆ ವೇಳೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ತಮ್ಮ ಮೊಬೈಲ್ ಕಳೆದುಕೊಂಡ ಘಟನೆ ನಡೆದಿದೆ.
ಯಾದಗಿರಿ: ಜಿಲ್ಲೆಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ (Prajadhwani Yatra) ಸಮಾವೇಶದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ (M.B.Patil) ಅವರು ತಮ್ಮ ಐಫೋನ್ ಅನ್ನು ಕಳೆದುಕೊಂಡು (M.B.Patil Mobile Miss) ಪೇಚಿಗೆ ಸಿಲುಕಿದರು. ತಮ್ಮ ಫೋನ್ ಕಳೆದುಕೊಂಡಿರುವ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತ ಪಾಟೀಲರು, ಮೈಕ್ ಅನೌನ್ಸ್ಮೆಂಟ್ ಮಾಡಿದ್ದಾರೆ. ಯಾರಿಗಾದರೂ ಮೊಬೈಲ್ ಸಿಕ್ಕರೆ ಕೂಡಲೇ ತಲುಪಿಸಿ. ಅದರಲ್ಲಿ ನೀರಾವರಿ ಇಲಾಖೆ, ಕೆಪಿಸಿಸಿಗೆ ಸಂಬಂಧಿಸಿದ ದಾಖಲೆಗಳಿವೆ, ದಯವಿಟ್ಟು ಕೂಡಲೇ ಮೊಬೈಲ್ ತಲುಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Feb 10, 2023 07:04 PM
Latest Videos