AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank of Maharashtra Hiring: ಲಿಖಿತ ಪರೀಕ್ಷೆಯಿಲ್ಲದೆ ಬ್ಯಾಂಕ್​ನಲ್ಲಿ ಉದ್ಯೋಗವಕಾಶ; ತಿಂಗಳಿಗೆ 60ರಿಂದ 1,45,500ರೂ. ವರೆಗೆ ವೇತನ

ಬ್ಯಾಂಕ್ ಆಫ್ ಮಹಾರಾಷ್ಟ್ರವು ದೇಶಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ 350ಕ್ಕೂ ಹೆಚ್ಚು ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಐಟಿ, ಡಿಜಿಟಲ್ ಬ್ಯಾಂಕಿಂಗ್, ಮತ್ತು ಇತರ ವಿಭಾಗಗಳಲ್ಲಿ ಖಾಲಿ ಹುದ್ದೆಗಳಿವೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 30 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವೇತನ ರೂ. 64,820 ರಿಂದ ರೂ. 1,45,500 ವರೆಗೆ.

Bank of Maharashtra Hiring: ಲಿಖಿತ ಪರೀಕ್ಷೆಯಿಲ್ಲದೆ ಬ್ಯಾಂಕ್​ನಲ್ಲಿ ಉದ್ಯೋಗವಕಾಶ; ತಿಂಗಳಿಗೆ 60ರಿಂದ 1,45,500ರೂ. ವರೆಗೆ ವೇತನ
Bank Of Maharashtra Hiring
ಅಕ್ಷತಾ ವರ್ಕಾಡಿ
|

Updated on: Sep 16, 2025 | 4:52 PM

Share

ದೇಶಾದ್ಯಂತ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಬ್ಯಾಂಕ್ ಆಫ್ ಮಹಾರಾಷ್ಟ್ರ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಅಧಿಸೂಚನೆಯಡಿಯಲ್ಲಿ, ಒಟ್ಟು 350 ಡೆಪ್ಯೂಟಿ ಜನರಲ್/ ಅಸಿಸ್ಟೆಂಟ್ ಜನರಲ್/ ಚೀಫ್/ ಸೀನಿಯರ್ ಮ್ಯಾನೇಜರ್/ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳನ್ನು ಐಟಿ, ಡಿಜಿಟಲ್ ಬ್ಯಾಂಕಿಂಗ್, ಐಟಿ ಸೆಕ್ಯುರಿಟಿ, ಐಎಸ್ ಆಡಿಟ್, ಸಿಐಎಸ್ಒ, ಟ್ರೆಷರಿ, ಇಂಟರ್ನ್ಯಾಷನಲ್ ಬ್ಯುಸಿನೆಸ್, ಲೀಗಲ್, ಫೈನಾನ್ಶಿಯಲ್ ಮ್ಯಾನೇಜ್ಮೆಂಟ್ ಮತ್ತು ಅಕೌಂಟ್ಸ್, ಕ್ರೆಡಿಟ್, ಸಿಎ, ಇಂಟಿಗ್ರೇಟೆಡ್ ರಿಸ್ಕ್ ಮ್ಯಾನೇಜ್ಮೆಂಟ್, ಮಾರ್ಕೆಟಿಂಗ್ ಮತ್ತು ಪಬ್ಲಿಸಿಟಿ ಇತ್ಯಾದಿಗಳಲ್ಲಿ ಭರ್ತಿ ಮಾಡಲಾಗುತ್ತದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಸಂಬಂಧಿತ ವಿಭಾಗದಲ್ಲಿ ಪದವಿ, ಬಿಟೆಕ್/ಬಿಇ, ಎಂಎಸ್ಸಿ, ಎಂಸಿಎ ಉತ್ತೀರ್ಣರಾಗಿರಬೇಕು. ಅಲ್ಲದೆ, ಅಧಿಸೂಚನೆಯ ಪ್ರಕಾರ ಕೆಲಸದ ಅನುಭವ ಇರಬೇಕು. ಅಭ್ಯರ್ಥಿಗಳ ವಯೋಮಿತಿ 25 ರಿಂದ 50 ವರ್ಷಗಳ ನಡುವೆ ಇರಬೇಕು. ಮೀಸಲಾತಿ ವರ್ಗಗಳಿಗೆ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 30, 2025 ರಂದು ಅಥವಾ ಅದಕ್ಕೂ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: 10th ಪಾಸಾದವರಿಗೆ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣವಕಾಶ; ತಿಂಗಳಿಗೆ 60ಸಾವಿರ ರೂ. ಸಂಬಳ

ಅರ್ಜಿ ಶುಲ್ಕ ಎಷ್ಟು?

ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು ತಲಾ ರೂ. 118 ಪಾವತಿಸಬೇಕಾಗುತ್ತದೆ. ಅಂತಿಮ ಆಯ್ಕೆಯು ಶೈಕ್ಷಣಿಕ ಅರ್ಹತೆ, ಅನುಭವ, ಸಂದರ್ಶನ ಮತ್ತು ಗುಂಪು ಚರ್ಚೆಯನ್ನು ಆಧರಿಸಿರುತ್ತದೆ, ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಆಯ್ಕೆ ಮಾಡಲಾಗುತ್ತಿದೆ. ಆಯ್ಕೆಯಾದವರಿಗೆ 6 ತಿಂಗಳ ಪ್ರೊಬೇಶನ್ ಅವಧಿ ಇರುತ್ತದೆ. ಅದರ ನಂತರ, ಆಯಾ ಹುದ್ದೆಗಳಿಗೆ ಅನುಗುಣವಾಗಿ ಅವರಿಗೆ ತಿಂಗಳಿಗೆ ರೂ. 64,820 ರಿಂದ ರೂ. 1,45,500 ವರೆಗೆ ವೇತನ ನೀಡಲಾಗುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ