BEL Recruitment 2025: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿ ನೇಮಕಾತಿ; ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣವಕಾಶ
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಬೆಂಗಳೂರಿನಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ತಿಂಗಳಿಗೆ ರೂ. 12,500 ಸ್ಟೈಫಂಡ್‌ನೊಂದಿಗೆ, ಬಿ.ಕಾಂ ಅಥವಾ ಬಿಬಿಎ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಗಸ್ಟ್ 13 ರಂದು ನಡೆಯುವ ವಾಕ್-ಇನ್ ಇಂಟರ್ವ್ಯೂಗೆ ಹಾಜರಾಗಬೇಕು. ವಯೋಮಿತಿ ಮತ್ತು ಇತರ ಅರ್ಹತಾ ಮಾನದಂಡಗಳ ಕುರಿತು ವಿವರವಾದ ಮಾಹಿತಿಯ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಧಿಕೃತ ಅಧಿಸೂಚನೆಯ ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 13 ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯುವ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು.
BEL ಹುದ್ದೆಯ ಅಧಿಸೂಚನೆ:
- ಸಂಸ್ಥೆಯ ಹೆಸರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ( BEL )
- ಉದ್ಯೋಗ ಸ್ಥಳ: ಬೆಂಗಳೂರು
- ಸ್ಟೈಫಂಡ್: ತಿಂಗಳಿಗೆ ರೂ.12500/-
BEL ನೇಮಕಾತಿ ಅರ್ಹತಾ ವಿವರಗಳು:
ಶೈಕ್ಷಣಿಕ ಅರ್ಹತೆ:
ಬಿಇಎಲ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಬಿ.ಕಾಂ, ಬಿಬಿಎ, ಪದವಿ ಪೂರ್ಣಗೊಳಿಸಿರಬೇಕು . ವಯೋಮಿತಿ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 25 ವರ್ಷಗಳು.
ವಯೋಮಿತಿ ಸಡಿಲಿಕೆ:
- ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
- SC/ST ಅಭ್ಯರ್ಥಿಗಳು: 05 ವರ್ಷಗಳು
- ಪಿಡಬ್ಲ್ಯೂಡಿ ಅಭ್ಯರ್ಥಿಗಳು: 10 ವರ್ಷಗಳು
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ
ಇದನ್ನೂ ಓದಿ: ಧಾರವಾಡದ ಕೃಷಿ ವಿಜ್ಞಾನ ವಿವಿಯಲ್ಲಿ ನೇಮಕಾತಿ; ಅರ್ಜಿ ಸಲ್ಲಿಸುವ ವಿವರ ಇಲ್ಲಿದೆ
ಬಿಇಎಲ್ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ಈ ಕೆಳಗಿನ ಸ್ಥಳದಲ್ಲಿ ನಡೆಯುವ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
ಸಂದರ್ಶನ ನಡೆಯುವ ಸ್ಥಳ: ಸೆಂಟರ್ ಫಾರ್ ಲರ್ನಿಂಗ್ ಆ್ಯಂಡ್ ಡೆವಲಪ್‌ಮೆಂಟ್ (CLD), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ ಪೋಸ್ಟ್, ಬೆಂಗಳೂರು-560013.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




