BHEL Jobs 2022: ಐಟಿಐ ಪಾಸಾದವರಿಗೆ BHEL ನಲ್ಲಿದೆ ಉದ್ಯೋಗಾವಕಾಶ
BHEL Jobs 2022: BHEL ವೆಲ್ಡರ್ ನೇಮಕಾತಿ 2022 ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ, ನೀವು ಅರ್ಜಿಯನ್ನು ಆಫ್‌ಲೈನ್‌ನಲ್ಲಿಯೂ ಕಳುಹಿಸಬೇಕು.
BHEL Jobs 2022: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ITI ಪಾಸ್‌ಗಾಗಿ ವೆಲ್ಡರ್‌ಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳ ನೇಮಕಾತಿ ಗುತ್ತಿಗೆ ಆಧಾರದ ಮೇಲೆ ನಡೆಯಲಿದೆ. ಈ ಒಪ್ಪಂದವು 12 ತಿಂಗಳುಗಳು ಅಂದರೆ ಒಂದು ವರ್ಷದವರೆಗೆ ಇರಲಿದೆ. ಆಯ್ಕೆಯಾದ ಅಭ್ಯರ್ಥಿಯನ್ನು ದೇಶದಲ್ಲಿ ಎಲ್ಲಿಯಾದರೂ ಚಾಲ್ತಿಯಲ್ಲಿರುವ ಯೋಜನೆಯ ಕೆಲಸದ ಸ್ಥಳದಲ್ಲಿ ನೇಮಿಸಬಹುದು. ಈ ಹುದ್ದೆಗಳಿಗೆ ಅಧಿಕೃತ ವೆಬ್‌ಸೈಟ್ https://careers.bhel.in ಗೆ ಭೇಟಿ ನೀಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಒಟ್ಟು ಖಾಲಿ ಹುದ್ದೆ – 75 ಸಾಮಾನ್ಯ ಅಭ್ಯರ್ಥಿಗಳಿಗೆ – 37 ಹುದ್ದೆಗಳು SC – 11 ಹುದ್ದೆಗಳು ST – 3 ಹುದ್ದೆಗಳು OBC – 18 ಹುದ್ದೆಗಳು EWS – 6 ಹುದ್ದೆಗಳು ಒಟ್ಟು – 75 ಹುದ್ದೆಗಳು
ವಿದ್ಯಾರ್ಹತೆ: BHEL ನಲ್ಲಿ ವೆಲ್ಡರ್ ನೇಮಕಾತಿ 2022 ಗಾಗಿ, ಅಭ್ಯರ್ಥಿಗಳು ವೆಲ್ಡರ್ ಟ್ರೇಡ್‌ನಲ್ಲಿ ITI ಉತ್ತೀರ್ಣರಾಗಿರಬೇಕು. ಅಲ್ಲದೆ ಅರ್ಹ ಬಾಯ್ಲರ್ ವೆಲ್ಡರ್ ಪ್ರಮಾಣಪತ್ರವನ್ನು ಹೊಂದಿರಬೇಕು. ಇದಲ್ಲದೆ, ವೆಲ್ಡರ್ ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷಗಳ ಕೆಲಸದ ಅನುಭವ ಇರಬೇಕು.
ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಫೀ ಆಗಿ 200 ರೂ. ಪಾವತಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ? BHEL ವೆಲ್ಡರ್ ನೇಮಕಾತಿ 2022 ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ, ನೀವು ಅರ್ಜಿಯನ್ನು ಆಫ್‌ಲೈನ್‌ನಲ್ಲಿಯೂ ಕಳುಹಿಸಬೇಕು. ಅಂದರೆ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ಭರ್ತಿ ಮಾಡಿದ ನಂತರ ಕಳುಹಿಸಬೇಕಾಗುತ್ತದೆ.
ಅರ್ಜಿ ಕಳುಹಿಸಬೇಕಾದ ವಿಳಾಸ: Deputy Manager (HR). Bharat Heavy Electricals Limited. Power Sector Western Region. Shree Mohini Complex,. 345, Kingsway, Nagpur-440001
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 13, 2022. ಆದಾಗ್ಯೂ, ದೂರದ ಪ್ರದೇಶಗಳ ಅಭ್ಯರ್ಥಿಗಳಿಗೆ ಮೇ 15 ಕೊನೆಯ ದಿನಾಂಕವಾಗಿದೆ.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.