Alankrita Sakshi joins Google: ವಿಪ್ರೋ ಮಾಜಿ ಉದ್ಯೋಗಿ ಅಲಂಕೃತಾಗೆ ಗೂಗಲ್‌ನಲ್ಲಿ ಸಿಕ್ತು ಭಾರೀ ಕೆಲಸ, ಗಂಡ ಬೆಂಗಳೂರಿನಲ್ಲಿ ಟೆಕ್ಕಿ!

Ex-Wipro employee now Google Security Analyst: ಬಿಹಾರದ ಮಹಿಳೆಯೊಬ್ಬರು ದೈತ್ಯ ಟೆಕ್​ ಕಂಪನಿ ಗೂಗಲ್‌ನಲ್ಲಿ ವಾರ್ಷಿಕ 60 ಲಕ್ಷ ರೂಪಾಯಿ ಪ್ಯಾಕೇಜ್‌ ಹೊಂದಿರುವ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ. ಹಾಗಂತ ಈಕೆ ಯಾವುದೇ IIT ಪದವಿ ಪಡೆದಿಲ್ಲ. ಇವರ ಗಂಡ ಬೆಂಗಳೂರಿನಲ್ಲಿ ಈಗಲೂ ಟೆಕ್ಕಿಯಾಗಿದ್ದಾರೆ! ಅಲಂಕೃತಾ ಗೂಗಲ್​​ನಲ್ಲಿ ಈ ಸ್ಥಾನ ಅಲಂಕರಿಸಿರುವುದನ್ನು ಕಂಡು ಸಾಮಾಜಿಕ ಮಾಧ್ಯಮ ಬೆಕ್ಕಸಬೆರಗಾಗಿದೆ.

Alankrita Sakshi joins Google: ವಿಪ್ರೋ ಮಾಜಿ ಉದ್ಯೋಗಿ ಅಲಂಕೃತಾಗೆ ಗೂಗಲ್‌ನಲ್ಲಿ ಸಿಕ್ತು ಭಾರೀ ಕೆಲಸ, ಗಂಡ ಬೆಂಗಳೂರಿನಲ್ಲಿ ಟೆಕ್ಕಿ!
ವಿಪ್ರೋ ಮಾಜಿ ಉದ್ಯೋಗಿ ಅಲಂಕೃತಾಗೆ ಗೂಗಲ್‌ನಲ್ಲಿ ಕೆಲಸ ಸಿಕ್ತು
Follow us
ಸಾಧು ಶ್ರೀನಾಥ್​
|

Updated on: Sep 14, 2024 | 4:33 AM

ಬಿಹಾರದ ಮಹಿಳೆಯೊಬ್ಬರು ದೈತ್ಯ ಟೆಕ್​ ಕಂಪನಿ ಗೂಗಲ್‌ನಲ್ಲಿ ವಾರ್ಷಿಕ 60 ಲಕ್ಷ ರೂಪಾಯಿ ಪ್ಯಾಕೇಜ್‌ ಹೊಂದಿರುವ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾರೆ. ಹಾಗಂತ ಈಕೆ ಯಾವುದೇ IIT ಪದವಿ ಪಡೆದಿಲ್ಲ. ಅಲಂಕೃತಾ ಸಾಕ್ಷಿ ಎಂಬ ಈ ಮಹಿಳೆ ಇದಕ್ಕೂ ಮುನ್ನ ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ 2 ವರ್ಷ ಉದ್ಯೋಗಿಯಾಗಿದ್ದರು. ಇವರ ಗಂಡ ಬೆಂಗಳೂರಿನಲ್ಲಿ ಈಗಲೂ ಟೆಕ್ಕಿಯಾಗಿದ್ದಾರೆ! ಅಲಂಕೃತಾ ಗೂಗಲ್​​ನಲ್ಲಿ ಈ ಸ್ಥಾನ ಅಲಂಕರಿಸಿರುವುದನ್ನು ಕಂಡು ಸಾಮಾಜಿಕ ಮಾಧ್ಯಮ ಬೆಕ್ಕಸಬೆರಗಾಗಿದೆ. ಅರ್ನ್ಸ್ಟ್ ಅಂಡ್ ಯಂಗ್, ವಿಪ್ರೋ ಮತ್ತು ಸ್ಯಾಮ್‌ಸಂಗ್‌ನಂತಹ ಕಂಪನಿಗಳಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಅಲಂಕೃತಾ ಸಾಕ್ಷಿ ಅವರು ತಮ್ಮ ಲಿಂಕ್ಡ್‌ಇನ್‌ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ನಾನು Google ಗೆ ಭದ್ರತಾ ವಿಶ್ಲೇಷಕನಾಗಿ ಸೇರಿದ್ದೇನೆ ಎಂದು ಘೋಷಿಸಲು ರೋಮಾಂಚನಗೊಂಡಿದ್ದೇನೆ! ಈ ಅವಕಾಶ ನೀಡಿದ್ದಕ್ಕೆ ಗೂಗಲ್​​ಗೆ ನಾನು ಅಪಾರವಾಗಿ ಆಭಾರಿಯಾಗಿದ್ದೇನೆ. ಮತ್ತು ಗೂಗಲ್​​ನಲ್ಲಿ ನಾವಿನ್ಯ ಮತ್ತು ಕ್ರಿಯಾತ್ಮಕ ತಂಡದೊಂದಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ನನ್ನ ಪ್ರಯಾಣದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ದೊಡ್ಡ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಅತ್ಯಮೂಲ್ಯವಾಗಿದೆ. ಹೊಸ ಆರಂಭಗಳು ಮತ್ತು ಮುಂದಿನ ಪ್ರಯಾಣ ಶುರುವಾಗಿದೆ ಎಂದು ಸಾಕ್ಷಿ ತಮ್ಮ ಲಿಂಕ್ಡ್‌ಇನ್‌ ಖಾತೆಯಲ್ಲಿ (LinkedIn) ಬರೆದುಕೊಂಡಿದ್ದಾರೆ.

ಅಲಂಕೃತಾ ಇದುವರೆಗೂ 5 ವರ್ಷಗಳ ಕೆಲಸದ ಅನುಭವವನ್ನು ಹೊಂದಿದ್ದಾರೆ. ಅವರು QRADAR-SIEM, ಸ್ಪ್ಲಂಕ್, ಫಿಶಿಂಗ್ ಇಮೇಲ್ ವಿಶ್ಲೇಷಣೆ, ಫೈರ್‌ವಾಲ್, ಮಾಲ್‌ವೇರ್ ಅನಾಲಿಸಿಸ್, Service-now.com ನಲ್ಲಿ ಪರಿಣತಿ ಹೊಂದಿದ್ದಾರೆ ಎಂದು ಅವರ ಬಯೋದಲ್ಲಿ ಉಲ್ಲೇಖಿಸಲಾಗಿದೆ. ಅವರು ಹಜಾರೈಬಾಗ್‌ನಲ್ಲಿರುವ ಯೂನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ (UCET) ಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಸ್ಟ್ರೀಮ್‌ನಲ್ಲಿ ಎಂಜಿನಿಯರಿಂಗ್ ಅನ್ನು ಪಡೆದಿದ್ದಾರೆ (BTech graduate from the University College of Engineering & Technology in Jharkhand).

ಇದನ್ನೂ ಓದಿ: FCI Recruitment- 15 ಸಾವಿರ ಹುದ್ದೆಗಳು ಖಾಲಿಯಿವೆ, ಆನ್‌ಲೈನ್‌ನಲ್ಲಿ ಇಂದೇ ಅರ್ಜಿ ಸಲ್ಲಿಸಿ

ಜಾರ್ಖಂಡ್‌ನ ಕೊಡೆರ್ಮಾದಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿ ಶಂಕರ್ ಮಿಶ್ರಾ ಮತ್ತು ಖಾಸಗಿ ಶಾಲಾ ಶಿಕ್ಷಕಿ ರೇಖಾ ಮಿಶ್ರಾ ದಂಪತಿಯ ಸುಪುತ್ರಿ ಅಲಂಕೃತಾ ಅವರು ಎರಡು ತಿಂಗಳ ಹಿಂದೆ Google ಗೆ “ಸೆಕ್ಯುರಿಟಿ ಅನಾಲಿಸ್ಟ್” ಆಗಿ ಸೇರಿದ್ದಾರೆ. ಬಿಹಾರ ಮೂಲದ ಈ ಯುವತಿ 20203 ರ ಡಿಸೆಂಬರ್‌ನಲ್ಲಿ ಮನೀಶ್‌ ಜೊತೆ ಮದುವೆಯಾಗಿದ್ದಾರೆ. ಅಲಂಕೃತಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೊಡೆರ್ಮಾದ ಜವಾಹರ್ ನವೋದಯ ಶಾಲೆಯಲ್ಲಿ ಪಡೆದವರು. ಅವರು ಹರಾಜಿಬಾಗ್ ಜಿಲ್ಲೆಯಿಂದ ಬಿ.ಟೆಕ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಅಲಂಕೃತಾ ಸಾಕ್ಷಿ ಅವರ ಈ ಪೋಸ್ಟ್ ಕ್ಷಿಪ್ರವಾಗಿ ವೈರಲ್ ಆಗಿದೆ. ಭಾರೀ ಲೈಕ್​ಗಳು ಮತ್ತು ಕಾಮೆಂಟ್‌ಗಳನ್ನು ಗಳಿಸಿದೆ. ಒಬ್ಬರು ಹೀಗೆ ಬರೆದಿದ್ದಾರೆ: ಅಲಂಕೃತಾ ಅಭಿನಂದನೆಗಳು! ನಿಮ್ಮ Google ನೇಮಕಾತಿ ಸುದ್ದಿಯ ಕುರಿತು ನಾನು ಓದಿದೆ. ಟೆಕ್ ದೈತ್ಯರಿಂದ ಅತ್ಯುನ್ನತ ಪ್ಯಾಕೇಜ್ ಅನ್ನು ಪಡೆದುಕೊಳ್ಳುವುದು ದೊಡ್ಡ ಸಾಧನೆಯಾಗಿದೆ. ನೀವು ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ. ಇನ್ನು ಮತ್ತೊಬ್ಬರು: ನಿಮ್ಮ ಅದ್ಭುತ ಯಶಸ್ಸಿಗೆ ಅಭಿನಂದನೆಗಳು ಎಂದು ಸೇರಿಸಿದ್ದಾರೆ. ನಾಲ್ಕನೇ ಬಳಕೆದಾರರು ಬರೆದಿದ್ದಾರೆ: ಅಲಂಕೃತಾ ನೀವು ಪ್ರತಿಷ್ಠಿತ IIT, IIIT, IIM ನಿಂದ ಬಂದವರಲ್ಲ ಎಂಬುದು ಆಶ್ಚರ್ಯಕರವಾಗಿದೆ!

ಲಿಂಕ್ಡ್‌ಇನ್ ಪ್ರಕಾರ, ಅಲಂಕೃತಾ ಸಾಕ್ಷಿ ಬಿಹಾರದ ಭಾಗಲ್ಪುರ್ ಜಿಲ್ಲೆಯ ಮೂಲದ ಕೊಡೆರ್ಮಾ ಮತ್ತು ಹಜಾರಿಬಾಗ್‌ನಲ್ಲಿ ಯೂನಿವರ್ಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಿಂದ ಬಿಟೆಕ್ ಪದವಿ ಪಡೆದಿದ್ದಾರೆ. ಅವರು ಈ ಹಿಂದೆ ವಿಪ್ರೋದಲ್ಲಿ ಪ್ರಾಜೆಕ್ಟ್ ಇಂಜಿನಿಯರ್ ಆಗಿ ಕೆಲಸ ಮಾಡಿದವರು. ಮತ್ತು ನಂತರ ಅರ್ನ್ಸ್ಟ್ ಮತ್ತು ಯಂಗ್ ಕಂಪನಿಯಲ್ಲಿ ಭದ್ರತಾ ವಿಶ್ಲೇಷಕರಾಗಿ ಉದ್ಯೋಗ ಮಾಡಿದ್ದಾರೆ.

ಇನ್ನಷ್ಟು  ಉದ್ಯೋಗ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?