DSSSB Recruitment 2022: ಡಿಎಸ್​ಎಸ್​ಎಸ್​ಬಿನಲ್ಲಿ ನೇಮಕಾತಿ: ತಿಂಗಳ ವೇತನ 34 ಸಾವಿರ ರೂ.

| Updated By: ಝಾಹಿರ್ ಯೂಸುಫ್

Updated on: Feb 02, 2022 | 6:59 PM

DSSSB Recruitment 2022: ಆಯಾ ಹುದ್ದೆಗಳಿಗೆ ವಯೋಮಿತಿ ನಿಗದಿ ಮಾಡಲಾಗಿದ್ದು, ಅದರಂತೆ ದೆಹಲಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (DSIIDC)/ದೆಹಲಿ ಜಲ ಮಂಡಳಿ ಹುದ್ದೆಗಳಿಗೆ 18 ರಿಂದ 30 ವರ್ಷಗಳ ಒಳಗಿನವರು ಅರ್ಜಿ ಸಲ್ಲಿಸಬಹುದು.

DSSSB Recruitment 2022: ಡಿಎಸ್​ಎಸ್​ಎಸ್​ಬಿನಲ್ಲಿ ನೇಮಕಾತಿ: ತಿಂಗಳ ವೇತನ 34 ಸಾವಿರ ರೂ.
DSSSB Recruitment 2022
Follow us on

DSSSB Recruitment 2022: ದೆಹಲಿ ಅಧೀನ ಸೇವೆಗಳ ಆಯ್ಕೆ ಮಂಡಳಿ (DSSSB) ಜೂನಿಯರ್ ಇಂಜಿನಿಯರ್ (JE) ಹುದ್ದೆಗಳ (DSSSB Recruitment 2022) ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು DSSSB ಯ ಅಧಿಕೃತ ವೆಬ್‌ಸೈಟ್ dsssbonline.nic.in ಅಥವಾ dsssb.delhi.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09 ಫೆಬ್ರವರಿ 2022 ಆಗಿದೆ.

ಈ ನೇಮಕಾತಿ (DSSSB Recruitment 2022) ಪ್ರಕ್ರಿಯೆಯ ಅಡಿಯಲ್ಲಿ ಒಟ್ಟು 691 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇದು EDMC, NDMC, ದೆಹಲಿ ಜಲ ಮಂಡಳಿ ಮುಂತಾದ ದೆಹಲಿಯ ವಿವಿಧ ಸರ್ಕಾರಿ ಇಲಾಖೆಗಳನ್ನು ಒಳಗೊಂಡಿದೆ.

ಖಾಲಿ ಇರುವ ಹುದ್ದೆಗಳು:
ಜೂನಿಯರ್ ಇಂಜಿನಿಯರ್ / SO (ಸಿವಿಲ್) – 575 ಹುದ್ದೆಗಳು
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) / ಸೆಕ್ಷನ್ ಆಫೀಸರ್ (ಎಲೆಕ್ಟ್ರಿಕಲ್) – 116 ಹುದ್ದೆಗಳು

ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ / ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು. ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಎಲೆಕ್ಟ್ರಿಕಲ್ / ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿರಬೇಕು. ಅಲ್ಲದೆ, ಎರಡು ವರ್ಷಗಳ ವೃತ್ತಿಪರ ಅನುಭವವೂ ಇರಬೇಕು.

ವಯೋಮಿತಿ:
ಆಯಾ ಹುದ್ದೆಗಳಿಗೆ ವಯೋಮಿತಿ ನಿಗದಿ ಮಾಡಲಾಗಿದ್ದು, ಅದರಂತೆ ದೆಹಲಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (DSIIDC)/ದೆಹಲಿ ಜಲ ಮಂಡಳಿ ಹುದ್ದೆಗಳಿಗೆ 18 ರಿಂದ 30 ವರ್ಷಗಳ ಒಳಗಿನವರು ಅರ್ಜಿ ಸಲ್ಲಿಸಬಹುದು.
ಇತರೆ DPT ಹುದ್ದೆಗಳಿಗೆ 18 ರಿಂದ 27 ವರ್ಷಗಳ ಒಳಗಿನವರು ಅರ್ಜಿ ಸಲ್ಲಿಸಬಹುದು.
DTC ಹುದ್ದೆಗಳಿಗೆ 18 ರಿಂದ 35 ವರ್ಷಗಳ ಒಳಗಿನವರು ಅರ್ಜಿ ಸಲ್ಲಿಸಬಹುದು.

ವೇತನ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 34800ರವರೆಗೂ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 09 ಫೆಬ್ರವರಿ 2022

ಹೆಚ್ಚಿನ ಮಾಹಿತಿ:
ಈ ಹುದ್ದೆಗಳಿಗೆ (DSSSB Recruitment 2022) ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು https://dsssbonline.nic.in/Registration . ಅಲ್ಲದೆ, ನೀವು ಈ ಲಿಂಕ್ https://dsssbonline.nic.in/ ಮೂಲಕ ಅಧಿಕೃತ ಅಧಿಸೂಚನೆಯನ್ನು ಓದಬಹುದಾಗಿದೆ.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ

ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್

(DSSSB Recruitment 2022: Only Few Days Left to Apply)