AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ESIC Recruitment 2025: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ

ನೌಕರರ ರಾಜ್ಯ ವಿಮಾ ನಿಗಮ (ESIC) ಕರ್ನಾಟಕವು ಕಲಬುರಗಿಯಲ್ಲಿರುವ ತನ್ನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 64 ಪ್ರಾಧ್ಯಾಪಕರು ಮತ್ತು ಹಿರಿಯ ನಿವಾಸಿ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 08 ರಂದು ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು. ವೇತನ ರೂ. 1,38,108 ರಿಂದ ರೂ. 2,41,740 ವರೆಗೆ ಇದೆ. ಅಧಿಕೃತ ಅಧಿಸೂಚನೆಯಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದೆ.

ESIC Recruitment 2025: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ
ನೌಕರರ ರಾಜ್ಯ ವಿಮಾ ನಿಗಮ
ಅಕ್ಷತಾ ವರ್ಕಾಡಿ
|

Updated on: Sep 01, 2025 | 5:30 PM

Share

ನೌಕರರ ರಾಜ್ಯ ವಿಮಾ ನಿಗಮ ಅಧಿಕೃತ ಅಧಿಸೂಚನೆಯ ಮೂಲಕ ಅಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸೀನಿಯರ್ ರೆಸಿಡೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಅದರಲ್ಲೂ ವಿಶೇಷವಾಗಿ ಕಲಬುರಗಿಯಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್08 ರಂದು ನಡೆಯುವ ಇಂಟರ್ವ್ಯೂಗೆ ಹಾಜರಾಗಬಹುದು.

ESIC ಕರ್ನಾಟಕ ಹುದ್ದೆಯ ಅಧಿಸೂಚನೆ

  • ಸಂಸ್ಥೆಯ ಹೆಸರು : ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ
  • ಹುದ್ದೆಗಳ ಸಂಖ್ಯೆ: 64
  • ಉದ್ಯೋಗ ಸ್ಥಳ: ಕಲಬುರಗಿ
  • ಹುದ್ದೆ ಹೆಸರು: ಬೋಧಕರು, ಸೀನಿಯರ್ ರೆಸಿಡೆಂಟ್
  • ವೇತನ: ತಿಂಗಳಿಗೆ ರೂ. 1,38,108 – 2,41,740/-

ಇದನ್ನೂ ಓದಿ: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಜೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ನೇಮಕಾತಿ

ESIC ಕರ್ನಾಟಕ ಹುದ್ದೆ ಮತ್ತು ವಯಸ್ಸಿನ ಮಿತಿ ವಿವರಗಳು:

ಪೋಸ್ಟ್ ಹೆಸರು ಪೋಸ್ಟ್‌ಗಳ ಸಂಖ್ಯೆ ವಯಸ್ಸಿನ ಮಿತಿ
ಪ್ರಾಧ್ಯಾಪಕರು 8 ಗರಿಷ್ಠ 69
ಅಸೋಸಿಯೇಟ್ ಪ್ರೊಫೆಸರ್ 8 ಗರಿಷ್ಠ 69
ಸಹಾಯಕ ಪ್ರಾಧ್ಯಾಪಕರು 4 ಗರಿಷ್ಠ 69
ಸೀನಿಯರ್ ರೆಸಿಡೆಂಟ್ 45 ಗರಿಷ್ಠ 45

ಅರ್ಜಿ ಸಲ್ಲಿಸುವುದು ಹೇಗೆ?

ಉದ್ಯೋಗ ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ಈ ಕೆಳಗಿನ ಸ್ಥಳದಲ್ಲಿ ನಡೆಯುವ ಇಂಟರ್ವ್ಯೂಗೆ ಹಾಜರಾಗಬಹುದು. ಸಂದರ್ಶನ ನಡೆಯುವ ಸ್ಥಳ: ESIC ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕಲಬುರಗಿ

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ