Fact Check: 10ನೇ ತರಗತಿ ತೇರ್ಗಡೆಯಾದ ಯುವಕರಿಗೆ 3500 ರೂ. ನಿರುದ್ಯೋಗ ಭತ್ಯೆ
ನಿರುದ್ಯೋಗ ಭತ್ಯೆ ಯೋಜನೆ 2024-25 ರ ಅಡಿಯಲ್ಲಿ, ಕೇಂದ್ರ ಸರ್ಕಾರವು 10 ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3,500 ರೂಪಾಯಿಗಳ ನಿರುದ್ಯೋಗ ಭತ್ಯೆಯನ್ನು ನೀಡುತ್ತಿದೆ ಎಂದು ಹೇಳಲಾಗಿದೆ. ಈ ಸುದ್ದಿಯ ನಿಜಾಂಶ ಇಲ್ಲಿದೆ.
ಕೇಂದ್ರ ಸರ್ಕಾರದ ಕೆಲವು ಯೋಜನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಡುವುದು ಸಾಮಾನ್ಯ ಆಗಿ ಬಿಟ್ಟಿದೆ. ಇತ್ತೀಚೆಗಂತು ಇದು ದೊಡ್ಡ ಮಟ್ಟದ ಸ್ಕ್ಯಾಮ್ ರೂಪ ಪಡೆದುಕೊಂಡಿದ್ದು, ನಮ್ಮಿಂದಲೇ ಹಣ ವಸೂಲಿ ಮಾಡುವವರೆಗೆ ಬಂದು ನಿಂತಿದೆ. ಇದೀಗ ಕೇಂದ್ರ ಸರ್ಕಾರವು 10 ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3500 ರೂಪಾಯಿಗಳ ನಿರುದ್ಯೋಗ ಭತ್ಯೆಯನ್ನು ನೀಡುತ್ತಿದೆ ಎಂದು ಹೇಳಲಾಗುತ್ತಿರುವ ಪೋಸ್ಟ್ ಒಂದು ವೈರಲ್ ಆಗುತ್ತಿದೆ.
ಮನೋಜ್ ಸರ್ ಜಾಬ್ಸ್ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿನ ವಿಡಿಯೋದ ಥಂಬ್‌ನೇಲ್‌ನಲ್ಲಿ ಹೀಗೆ ಬರೆಯಲಾಗಿದೆ, ‘‘ನಿರುದ್ಯೋಗ ಭತ್ಯೆ ಯೋಜನೆ 2024-25 ರ ಅಡಿಯಲ್ಲಿ, ಕೇಂದ್ರ ಸರ್ಕಾರವು 10 ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3,500 ರೂಪಾಯಿಗಳ ನಿರುದ್ಯೋಗ ಭತ್ಯೆಯನ್ನು ನೀಡುತ್ತಿದೆ,’’ ಎಂದು ಬರೆಯಲಾಗಿದೆ.
ರೂ. 3500 ನಿರುದ್ಯೋಗ ಭತ್ಯೆಯ ಥಂಬ್‌ನೇಲ್ ಹೊಂದಿರುವ ಈ ವಿಡಿಯೋದಲ್ಲಿ, ಈ ಯೋಜನೆಯು ಎಲ್ಲಾ ರಾಜ್ಯಗಳ ನಿರುದ್ಯೋಗಿ ಯುವಕರಿಗೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಗ್ರಾಮ ಪಂಚಾಯತ್ ಲೈಬ್ರರಿ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ
Fact Check:
ಟಿವಿ9 ಕನ್ನಡ ತಂಡವು ತನಿಖೆಗಾಗಿ ಸಂಬಂಧಿಸಿದ ಕೀವರ್ಡ್‌ಗಳನ್ನು ಗೂಗಲ್ನಲ್ಲಿ ಹುಡುಕಿದೆ. ಆಗ ಕೇಂದ್ರ ಸರ್ಕಾರವು 10 ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ರೂ. 3500 ನಿರುದ್ಯೋಗ ಭತ್ಯೆ ನೀಡುವ ಕುರಿತು ಯಾವುದೇ ಸುದ್ದಿ ನಮಗೆ ಕಂಡುಬಂದಿಲ್ಲ.
ಇದರ ಹೊರತಾಗಿ, ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ನ ಎಕ್ಸ್-ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಈ ವೈರಲ್ ಹಕ್ಕು ಸುಳ್ಳು ಎಂದು ಹೇಳಲಾಗಿದೆ. ಪಿಐಬಿ ಪೋಸ್ಟ್‌ನಲ್ಲಿ, ‘‘ಮನೋಜ್ ಸರ್‌ಜಾಬ್ಸ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ತನ್ನ ವಿಡಿಯೋ ಥಂಬ್‌ನೇಲ್ ಒಂದರ ಮೂಲಕ ಹೇಳಿಕೊಳ್ಳುತ್ತಿದೆ, ನಿರುದ್ಯೋಗ ಭತ್ಯೆ ಯೋಜನೆ 2024-25 ಅಡಿಯಲ್ಲಿ ಸರ್ಕಾರವು 10 ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ₹3,500 ಭತ್ಯೆ ನೀಡುತ್ತಿದೆ. #PIBFactCheck ಈ ಹಕ್ಕು ನಕಲಿಯಾಗಿದೆ ಎಂದು ಹೇಳುತ್ತದೆ. ಭಾರತ ಸರ್ಕಾರವು ಅಂತಹ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ’’ ಎಂದು ಸ್ಪಷ್ಟಪಡಿಸಿದೆ.
“ManojSirJobs” नामक #YouTube चैनल अपने एक वीडियो थंबनेल के माध्यम से दावा कर रहा है कि ‘बेरोजगारी भत्ता योजना 2024-25’ के तहत सरकार 10वीं पास बेरोजगार युवाओं को हर महीने ₹3,500 का भत्ता दे रही है#PIBFactCheck
❌यह दावा #फर्जी है
✅ भारत सरकार ऐसी कोई योजना नहीं चला रही है pic.twitter.com/oiNQrpe0TF
— PIB Fact Check (@PIBFactCheck) November 9, 2024
ಹೀಗಾಗಿ 10ನೇ ತರಗತಿ ಉತ್ತೀರ್ಣರಾದ ಯುವಕರಿಗೆ 3500 ರೂಪಾಯಿ ನಿರುದ್ಯೋಗ ಭತ್ಯೆ ನೀಡುವ ವೈರಲ್ ಹಕ್ಕು ನಕಲಿ ಎಂಬುದು ಟಿವಿ9 ಕನ್ನಡ ಫ್ಯಾಕ್ಟ್ ಚೆಕ್ನಿಂದ ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರ ಅಂತಹ ಯಾವುದೇ ಯೋಜನೆಯನ್ನು ತಂದಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ