AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dream job: ದಿನಕ್ಕೆ 1 ಗಂಟೆ ಮಾತ್ರ ಕೆಲಸ ಮಾಡ್ತೇನೆ, 1.2 ಕೋಟಿ ರೂಪಾಯಿ ವಾರ್ಷಿಕ ವೇತನ ಗಳಿಸುತ್ತೇನೆ ಎಂದ 20 ವರ್ಷದ ಗೂಗಲ್ ಟೆಕ್ಕಿ!

Google Techie: ತನ್ನ ಗುರುತನ್ನು ಅನಾಮಧೇಯವಾಗಿಯೇ ಉಳಿಸಿಕೊಂಡಿರುವ ಈ ಅದೃಷ್ಟವಂತ ತನ್ನ ಅಸಾಮಾನ್ಯ ಕಥೆಯನ್ನು ಹೇಳಲು ಡೆವೊನ್ ಎಂಬ ಗುಪ್ತನಾಮವನ್ನು ಹೇಳಿದ್ದಾನೆ. ಅಮೆರಿಕದ ನಿಯತಕಾಲಿಕೆಯು ಸದರಿ ಗೂಗಲ್ ಟೆಕ್ಕಿ ದಿನದಲ್ಲಿ ಇಡೀ ದಿನದ ಶಿಫ್ಟ್​​ ಅವಧಿಯನ್ನೂ ದುಡಿಯುವುದಿಲ್ಲ ಎಂದು ಬಹಿರಂಗಪಡಿಸಿದ್ದಾನೆ. ಆ ಯುವಕ ಪ್ರತಿದಿನ ಗೂಗಲ್​ ಟೂಲ್ಸ್​​ ಮತ್ತು ಉತ್ಪನ್ನಗಳಿಗೆ ಕೋಡ್ ಬರೆಯಲು ಕೇವಲ ಒಂದು ಗಂಟೆಯನ್ನು ಮೀಸಲಿಡುತ್ತಾನಂತೆ!

Dream job: ದಿನಕ್ಕೆ 1 ಗಂಟೆ ಮಾತ್ರ ಕೆಲಸ ಮಾಡ್ತೇನೆ, 1.2 ಕೋಟಿ ರೂಪಾಯಿ ವಾರ್ಷಿಕ ವೇತನ ಗಳಿಸುತ್ತೇನೆ ಎಂದ 20 ವರ್ಷದ ಗೂಗಲ್ ಟೆಕ್ಕಿ!
1.2 ಕೋಟಿ ರೂಪಾಯಿ ವಾರ್ಷಿಕ ವೇತನ ಗಳಿಸುತ್ತೇನೆ ಎಂದ 20 ವರ್ಷದ ಗೂಗಲ್ ಟೆಕ್ಕಿ!
ಸಾಧು ಶ್ರೀನಾಥ್​
|

Updated on: Aug 28, 2023 | 4:02 PM

Share

ದಿನ ಜಸ್ಟ್ ಒಂದು ಗಂಟೆ ಕಾಲ ಕೆಲಸ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಕೋಟಿಗಟ್ಟಲೆ ಹಣ (annual salary) ಜಮೆಯಾಗುವುದನ್ನು ನೋಡಿದರೆ ಆಶ್ಚರ್ಯವಾಗುವುದಿಲ್ಲವೇ? ಇದು ಅನೇಕರಿಗೆ ಕನಸಾಗಿರಬಹುದು (Dream job), ಆದರೆ ಈ ಕನಸನ್ನು ನನಸಾಗಿಸಿಕೊಂಡು ಜೀವಿಸುತ್ತಿದ್ದಾರೆ 20ರ ಆಯಸ್ಸಿನ ಕೆಲ ಅದೃಷ್ಟವಂತರು! ಉದಾಹರಣೆಗೆ ಗೂಗಲ್ ಸಾಫ್ಟ್‌ವೇರ್ ಇಂಜಿನಿಯರ್ (Google Techie) ಇತ್ತೀಚೆಗೆ ವರ್ಷಕ್ಕೆ $150,000 (ಸುಮಾರು ರೂ 1.2 ಕೋಟಿ) ವಾರ್ಷಿಕ ವೇತನ ಪಡೆಯುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ ಎಂದು ನ್ಯೂಯಾರ್ಕ್ ಸಿಟಿ ಆಧಾರಿತ ವ್ಯಾಪಾರ ನಿಯತಕಾಲಿಕೆ ಫಾರ್ಚ್ಯೂನ್ ಪರಿಶೀಲಿಸಿದೆ.

ಆದರೆ ತನ್ನ ಗುರುತನ್ನು ಅನಾಮಧೇಯವಾಗಿಯೇ ಉಳಿಸಿಕೊಂಡಿದ್ದಾನೆ ಈ ಅದೃಷ್ಟವಂತ. ಇನ್ನು ಫಾರ್ಚೂನ್ ಪತ್ರಿಕೆಯು ಆತನ ಅಸಾಮಾನ್ಯ ಕಥೆಯನ್ನು ಹೇಳಲು ಡೆವೊನ್ ಎಂಬ ಗುಪ್ತನಾಮವನ್ನು ಬಳಸಿದೆ. ಅಮೆರಿಕದ ನಿಯತಕಾಲಿಕೆಯು ಸದರಿ ಗೂಗಲ್ ಟೆಕ್ಕಿ ದಿನದಲ್ಲಿ ಇಡೀ ದಿನದ ಶಿಫ್ಟ್​​ ಅವಧಿಯನ್ನೂ ದುಡಿಯುವುದಿಲ್ಲ ಎಂದು ಬಹಿರಂಗಪಡಿಸಿದೆ. ಆ ಯುವಕ ಪ್ರತಿದಿನ Google ನ ಉಪಕರಣಗಳು ಮತ್ತು ಉತ್ಪನ್ನಗಳಿಗೆ ಕೋಡ್ ಬರೆಯಲು ಕೇವಲ ಒಂದು ಗಂಟೆಯನ್ನು ಮೀಸಲಿಡುತ್ತಾನಂತೆ!

ತನ್ನ ದೈನಂದಿನ ದಿನಚರಿಯನ್ನು ಬಹಿರಂಗಪಡಿಸುತ್ತಾ, ಡೆವೊನ್ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಅಥವಾ ಮಧ್ಯಾಹ್ನ (ಅಮೆರಿಕದ ಕಾಲಮಾನ) ಸುಮಾರು 9 ಗಂಟೆಗೆ ಎಚ್ಚರವಾದ ನಂತರ ತಮ್ಮ ದಿನವನ್ನು ಪ್ರಾರಂಭಿಸುತ್ತಾರಂತೆ. ನಂತರ ಉಪಹಾರ ಮತ್ತು ಸ್ನಾನವನ್ನು ಮಾಡುತ್ತಾರೆ. ಅವರು ಗೂಗಲ್‌ಗಾಗಿ ತಮ್ಮ ಕೆಲಸಕ್ಕೆ ಕೇವಲ ಒಂದು ಗಂಟೆಯನ್ನು ಮೀಸಲಿಡುತ್ತಾರೆ ಮತ್ತು ಉಳಿದ ದಿನವನ್ನು ರಾತ್ರಿ 9 ಅಥವಾ ರಾತ್ರಿ 10 ರವರೆಗೆ ತಮ್ಮದೇ ಸ್ವ ಉದ್ಯಮಕ್ಕೆ ಮೀಸಲಿಡುತ್ತಾರಂತೆ.

ಇದನ್ನೂ ಓದಿ: IIT Dharwad Recruitment 2023: 01 ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ನೀವು ಲೇಟ್​​ ನೈಟ್​​, ಅನಿಯಮಿತ ಶಿಫ್ಟ್​ಗಳಲ್ಲಿ ದುಡಿಯುವ ಜನರು ಕಾರ್ಪೊರೇಟ್ ಏಣಿಯ ಮೇಲೆ ಇನ್ನೂ ಪ್ರಗತಿ ಸಾಧಿಸದಿರುವುದನ್ನು ನೋಡಿದಾಗ ಕಷ್ಟಪಟ್ಟು ಕೆಲಸ ಮಾಡುವುದು ತುಂಬಾ ಅರ್ಥಹೀನವೆಂದು ನನಗೆ ತೋರುತ್ತದೆ. ಹಾಗಾಗಿ, ನಾನು ಎಂದಿಗೂ ಕಷ್ಟಪಟ್ಟು ಕೆಲಸ ಮಾಡುವುದನ್ನು ಸಮರ್ಥಿಸುವ ಮಾತೇ ಇಲ್ಲ ಎಂದು ಅವರು ಫಾರ್ಚೂನ್‌ಗೆ ನೀಡಿದ ಸಂದರ್ಶನದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಏನನ್ನೂ ಮಾಡದೆ ಅಥವಾ ಅತ್ಯಲ್ಪ ಉದ್ಯೋಗ ಮಾಡಿ ಸಂಬಳ ಪಡೆಯುವ ಸಾವಿರಾರು ಟೆಕ್ ಕಾರ್ಮಿಕರಲ್ಲಿ ತಾನೂ ಒಬ್ಬ ಎಂದು ಈ ಸಾಫ್ಟ್‌ವೇರ್ ಇಂಜಿನಿಯರ್ ಹೇಳುತ್ತಾರೆ.

ಉದ್ಯೋಗಕ್ಕೆ ಸಂಬಂಧಪಟ್ಟ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ