Indian Air Force Recruitment 2022: ಭಾರತೀಯ ವಾಯುಪಡೆಯಲ್ಲಿ ಉದ್ಯೋಗಾವಕಾಶ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

| Updated By: ಝಾಹಿರ್ ಯೂಸುಫ್

Updated on: Aug 07, 2022 | 4:08 PM

Indian Air Force Recruitment 2022: ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ indianairforce.nic.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Indian Air Force Recruitment 2022: ಭಾರತೀಯ ವಾಯುಪಡೆಯಲ್ಲಿ ಉದ್ಯೋಗಾವಕಾಶ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
Indian Air Force Recruitment 2022
Follow us on

Indian Air Force Recruitment 2022:  ಭಾರತೀಯ ವಾಯುಪಡೆಯ ಚಂಡೀಗಢದ ಏರ್ ಫೋರ್ಸ್ ಸ್ಟೇಷನ್‌ನಲ್ಲಿರುವ ಪ್ರೀಮಿಯರ್ ಬೇಸ್ ರಿಪೇರಿ ಡಿಪೋದಲ್ಲಿ (BRD) ಏರ್‌ಫೋರ್ಸ್ ಅಪ್ರೆಂಟಿಸ್ ಟ್ರೈನಿಂಗ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ indianairforce.nic.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರಗಳು:

  • ಒಟ್ಟು ಹುದ್ದೆಗಳ ಸಂಖ್ಯೆ: 152
  • ಟರ್ನರ್: 16 ಹುದ್ದೆಗಳು
  • ಮೆಷಿನಿಸ್ಟ್: 18 ಹುದ್ದೆಗಳು
  • ಮೆಷಿನಿಸ್ಟ್ ಗ್ರೈಂಡರ್: 12 ಹುದ್ದೆಗಳು
  • ಶೀಟ್ ಮೆಟಲ್ ವರ್ಕರ್: 22 ಹುದ್ದೆಗಳು
  • ಎಲೆಕ್ಟ್ರಿಷಿಯನ್ ಏರ್‌ಕ್ರಾಫ್ಟ್: 15 ಹುದ್ದೆಗಳು
  • ವೆಲ್ಡರ್ ಗ್ಯಾಸ್ ಮತ್ತು ಇಲೆಕ್ಟ್: 06 ಹುದ್ದೆಗಳು
  • ಕಾರ್ಪೆಂಟರ್: 05 ಹುದ್ದೆಗಳು
  • ಮೆಕ್ಯಾನಿಕ್ ರೇಡಿಯೋ ರಾಡಾರ್ ಏರ್‌ಕ್ರಾಫ್ಟ್: 15 ಹುದ್ದೆಗಳು
  • ಪೇಂಟರ್ ಜನರಲ್: 10 ಹುದ್ದೆಗಳು
  • ಡೆಸ್ಕ್‌ಟಾಪ್ ಪಬ್ಲಿಷಿಂಗ್ ಆಪರೇಟರ್: 03 ಹುದ್ದೆಗಳು
  • ಪವರ್ ಎಲೆಕ್ಟ್ರಿಷಿಯನ್: 12 ಹುದ್ದೆಗಳು
  • TIG/MIG ವೆಲ್ಡರ್: 06 ಹುದ್ದೆಗಳು
  • ಕ್ವಾಲಿಟಿ ಅಸುರೆನ್ಸ್ ಅಸಿಸ್ಟೆಂಟ್: 08 ಹುದ್ದೆಗಳು
  • ಕೆಮಿಕಲ್ ಲ್ಯಾಬೊರೇಟರಿ ಅಸಿಸ್ಟೆಂಟ್: 04 ಹುದ್ದೆಗಳು

ಅರ್ಹತಾ ಮಾನದಂಡ:
ಅಭ್ಯರ್ಥಿಯು 50% ಅಂಕಗಳೊಂದಿಗೆ 10ನೇ ಅಥವಾ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ 65% ಅಂಕಗಳೊಂದಿಗೆ ITI ಪ್ರಮಾಣಪತ್ರವನ್ನು ಹೊಂದಿರಬೇಕು.

ಇದನ್ನೂ ಓದಿ
Anganwadi Recruitment 2022: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ
HAL Recruitment 2022: ಹೆಚ್​ಎಎಲ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
Coal India MT Recruitment 2022: ಕೋಲ್ ಇಂಡಿಯಾದ 481 ಹುದ್ದೆಗಳಿಗೆ ಅರ್ಜಿ ಆಹ್ವಾನ
BBMP Recruitment 2022: ‘ನಮ್ಮ ಕ್ಲಿನಿಕ್’​ನಲ್ಲಿರುವ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ:
14 ರಿಂದ 21 ವರ್ಷಗಳವರೆಗಿನ ಅಭ್ಯರ್ಥಿಗಳು ಈ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ವೇತನ ಶ್ರೇಣಿ:
ರೂ. 7700/- (ಪ್ರತಿ ತಿಂಗಳಿಗೆ)

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ apprenticeshipindia.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:
ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 15, 2022

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

 

Published On - 4:08 pm, Sun, 7 August 22