AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Job Alert: ಪದವೀಧರರಿಗೆ ಗುಡ್ ನ್ಯೂಸ್; ಇನ್​ಫೋಸಿಸ್​ ಕಂಪನಿಯಲ್ಲಿದೆ 35,000 ಉದ್ಯೋಗಾವಕಾಶ

Infosys Jobs: ಈ ಮೊದಲು ಟಿಸಿಎಸ್ 40,000 ಪ್ರೆಷರ್​ಗಳನ್ನು ಕಾಲೇಜಿನ ಕ್ಯಾಂಪಸ್​ಗಳಿಂದಲೇ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿತ್ತು. ಅದರ ಬೆನ್ನಲ್ಲೇ ಇನ್​ಫೋಸಿಸ್ ಕೂಡ 35,000 ಪದವೀಧರರಿಗೆ ಉದ್ಯೋಗಾವಕಾಶ ನೀಡಲು ನಿರ್ಧರಿಸಿದೆ.

Job Alert: ಪದವೀಧರರಿಗೆ ಗುಡ್ ನ್ಯೂಸ್; ಇನ್​ಫೋಸಿಸ್​ ಕಂಪನಿಯಲ್ಲಿದೆ 35,000 ಉದ್ಯೋಗಾವಕಾಶ
ಇನ್ಫೋಸಿಸ್ (ಸಾಂದರ್ಭಿಕ ಚಿತ್ರ)
TV9 Web
| Updated By: ಸುಷ್ಮಾ ಚಕ್ರೆ|

Updated on:Jul 14, 2021 | 6:45 PM

Share

ಬೆಂಗಳೂರು: ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟ ಉಂಟಾಗಿ ಈಗಾಗಲೇ ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಶೈಕ್ಷಣಿಕ ಚಟುವಟಿಕೆಗಳೂ ಸರಿಯಾಗಿ ನಡೆಯದ ಕಾರಣದಿಂದ ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆಯೇ ನಡೆಯುತ್ತಿಲ್ಲ. ಹೀಗಾಗಿ, ಇದೀಗ ಪದವಿ, ಸ್ನಾತಕೋತ್ತರ ಪದವಿ ಮುಗಿಸಿ ಕಾಲೇಜಿನಿಂದ ಹೊರಬರುತ್ತಿರುವ ಬ್ಯಾಚ್​ನವರಿಗೆ ಉದ್ಯೋಗ ಹುಡುಕುವುದೇ ದೊಡ್ಡ ಸವಾಲಾಗಿದೆ. ನೀವೇನಾದರೂ ಆ ರೀತಿ ಉದ್ಯೋಗ ಹುಡುಕುತ್ತಾ ಭವಿಷ್ಯದ ಚಿಂತೆಯಲ್ಲಿದ್ದರೆ ನಿಮಗಿಲ್ಲಿದೆ ಗುಡ್ ನ್ಯೂಸ್!

ಭಾರತದ ಪ್ರಮುಖ ಐಟಿ ಕಂಪನಿಯಾದ ಇನ್​ಫೋಸಿಸ್​ನಲ್ಲಿ (Infosys)ಕೆಲಸ ಮಾಡಬೇಕೆಂಬುದು ಬಹುತೇಕರ ಆಸೆ. ನಿಮಗೂ ಇನ್​ಫೋಸಿಸ್​ನಲ್ಲಿ ಕೆಲಸ ಮಾಡುವ ಬಯಕೆಯಿದ್ದರೆ ಖಂಡಿತ ಪ್ರಯತ್ನ ಮಾಡಬಹುದು. ಏಕೆಂದರೆ ಇನ್​ಫೋಸಿಸ್​ ಸದ್ಯದಲ್ಲೇ 35,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಲಾಕ್​ಡೌನ್​ನಿಂದ ಹಲವು ಕಂಪನಿಗಳು ನಷ್ಟದಲ್ಲಿದ್ದರೆ ಇನ್​ಫೋಸಿಸ್ ಲಿಮಿಟೆಡ್ ಮಾತ್ರ ಭಾರೀ ಲಾಭ ಕಂಡಿದೆ. ಇನ್​ಫೋಸಿಸ್​ ಸಂಸ್ಥೆಯ ಲಾಭದಲ್ಲಿ ಶೇ. 22.7ರಷ್ಟು ಹೆಚ್ಚಳವಾಗಿದ್ದು, ಈ ವರ್ಷ ಇನ್ನೂ ಸಾಕಷ್ಟು ಪ್ರಾಜೆಕ್ಟ್​ಗಳು ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮತ್ತೆ 35 ಸಾವಿರ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ.

ಬೆಂಗಳೂರು ಮೂಲದ ಐಟಿ ಕಂಪನಿಯಾದ ಇನ್​ಫೋಸಿಸ್ ಮೊದಲ ಕ್ವಾರ್ಟರ್ ಅವಧಿಯಲ್ಲಿ 5,195 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ವರ್ಷ 4,233 ಕೋಟಿ ರೂ. ಆದಾಯ ಗಳಿಸಿತ್ತು. 2022ರ ಆರ್ಥಿಕ ವರ್ಷದ ವೇಳೆಗೆ ಇನ್​ಫೋಸಿಸ್ ಶೇ. 14ರಿಂದ 16ರಷ್ಟು ಆದಾಯದ ನಿರೀಕ್ಷೆಯಲ್ಲಿದೆ. ಇನ್​ಫೋಸಿಸ್ ಸಂಸ್ಥೆಯ ಈ ಸಾಧನೆ ಬಗ್ಗೆ ಮಾತನಾಡಿರುವ ಭಾರತದ ಎರಡನೇ ಐಟಿ ಸರ್ವಿಸ್ ಸಂಸ್ಥೆಯಾಗಿರುವ ಇನ್​ಫೋಸಿಸ್ ಡಿಜಿಟಲ್ ವಲಯಕ್ಕೆ ವಿಶ್ವಾದ್ಯಂತ ಮತ್ತಷ್ಟು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.

ಇದಕ್ಕೂ ಮೊದಲು ಟಿಸಿಎಸ್ (TCS) ಕೂಡ 40,000 ಪ್ರೆಷರ್​ಗಳನ್ನು ಕಾಲೇಜಿನ ಕ್ಯಾಂಪಸ್​ಗಳಿಂದಲೇ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿತ್ತು. ಅದರ ಬೆನ್ನಲ್ಲೇ ಇನ್​ಫೋಸಿಸ್ ಕೂಡ ಪದವೀಧರರಿಗೆ ಉದ್ಯೋಗಾವಕಾಶ ನೀಡಲು ಮುಂದಾಗಿದ್ದು, ಇದರಿಂದ ಸಾವಿರಾರು ಜನರ ಉದ್ಯೋಗದ ಸಮಸ್ಯೆ ದೂರವಾಗಲಿದೆ.

ಇದನ್ನೂ ಓದಿ: Indian Navy Recruitment 2021: ಭಾರತೀಯ ನೌಕಾಪಡೆಯಲ್ಲಿದೆ ಉದ್ಯೋಗಾವಕಾಶ; 2500 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

(Infosys to Hire 35000 College Graduates as Demand for Tech based Jobs on Rise)

Published On - 6:43 pm, Wed, 14 July 21

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?