AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Navy Recruitment 2021: ಭಾರತೀಯ ನೌಕಾಪಡೆಯಲ್ಲಿದೆ ಉದ್ಯೋಗಾವಕಾಶ; 2500 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತೀಯ ನೌಕಾಪಡೆ 2,500 ನಾವಿಕರ ನೇಮಕಾತಿಗೆ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ಸಾಧ್ಯತೆ ಇದೆ. ಅರ್ಜಿ ನಮೂನೆಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಿರುತ್ತದೆ.

Indian Navy Recruitment 2021: ಭಾರತೀಯ ನೌಕಾಪಡೆಯಲ್ಲಿದೆ ಉದ್ಯೋಗಾವಕಾಶ; 2500 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
Indian Navy Recruitment 2021
shruti hegde
|

Updated on: Apr 26, 2021 | 1:51 PM

Share

ದೆಹಲಿ: ಭಾರತೀಯ ನೌಕಾಪಡೆ 2,500 ನಾವಿಕರ ನೇಮಕಾತಿಗೆ ನೋಂದಣಿ ಪ್ರಕ್ರಿಯೆ ಶೀಘ್ರದಲ್ಲೇ  ಆರಂಭವಾಗಲಿದೆ . ಅರ್ಜಿ ನಮೂನೆಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್​ಸೈಟ್​ನಲ್ಲಿ joinindiannavya.gov.in ಲಭ್ಯವಿರುತ್ತದೆ. ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ ಮೇ 5. 

ಈ ನೇಮಕಾತಿಯಲ್ಲಿ ಖಾಲಿ ಇರುವ  2,500 ಹುದ್ದೆಗಳನ್ನು  ಭರ್ತಿ ಮಾಡಲಾಗುವುದು. ಅವಿವಾಹಿತ ಪುರುಷರಿಂದ ಆನ್​ಲೈನ್​ ಮೂಲಕ  ಪ್ರಸ್ತುತ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ‘ಆರ್ಟಿಫಿಸರ್​ ಅಪ್ರೆಂಟಿಸ್ (ಎಎ) ಮತ್ತು ಸೀನಿಯರ್​ ಸೆಕೆಂಡರಿ ನೇಮಕಾತಿ (ಎಸ್​ಎಸ್​ಆರ್​)ಗೆ ನಾವಿಕನಾಗಿ ಕ್ರಮವಾಗಿ 500 ಮತ್ತು 2,000 ಖಾಲಿ ಹುದ್ದೆಗಳಿಗೆ ಭಾರತ ಸರ್ಕಾರವು ನಿಗದಿಪಡಿಸಿದ ರಾಷ್ಟ್ರೀಯತೆಯ ಷರತ್ತುಗಳನ್ನು ಪೂರೈಸುವ ಆನ್​ಲೈನ್​ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ.

ಆರ್ಟಿಫಿಸರ್​ ಅಪ್ರೆಂಟಿಸ್​ ಉಗಿ ಚಾಲಿತ ಯಂತ್ರೋಪಕರಣಗಳು, ಡೀಸೆಲ್​ ಮತ್ತು ಅನಿಲ ಟರ್ಬೈನ್​ಗಳು ಮಾರ್ಗದರ್ಶಿ ಕ್ಷಿಪಣಿಗಳು ಮತ್ತು ಇತರ ಸ್ವಯಂಚಾಲಿತವಾಗಿ ನಿಯಂತ್ರಿತ ಆಯುಧಗಳು, ಸಂವೇದಕಗಳು, ವೈಮಾನಿಕ​ ಉಪಕರಣಗಳು, ಕಂಪ್ಯೂಟರ್​ಗಳು ಮತ್ತು ಹೆಚ್ಚು ಸುಧಾರಿತ ರೇಡಿಯೋ ಮತ್ತು ವಿದ್ಯುತ್​ ಶಕ್ತಿ ವ್ಯವಸ್ಥೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಐಎನ್​ಎಸ್​ ಚಿಲ್ಕಾದಲ್ಲಿ 9 ವಾರ ಪ್ರಾಥಮಿಕ ತರಬೇತಿ ಮತ್ತು ನಿಯೋಜಿತ ನೌಕಾ ತರಬೇತಿ ಕೇಂದ್ರಗಳಲ್ಲಿ ವೃತ್ತಿಪರ ತರಬೇತಿ ನೀಡಲಾಗುವುದು.

ಎಸ್​ಎಸ್​ಆರ್​ನ ಕೆಲಸವು, ರಾಡರ್​ಗಳು- ಸೋನಾರ್​ಗಳು ಅಥವಾ ಸಂವಹನ ಅಥವಾ ಕ್ಷಿಪಣಿಗಳು, ಬಂದೂಕುಗಳು, ರಾಕೆಟ್​ಗಳಂತಹ ಶಸ್ತ್ರಾಸ್ತ್ರಗಳ ಗುಂಡಿನಂತಹ ವಿವಿಧ ಸಾಧನಗಳ ಕಾರ್ಯಾಚರಣೆ ಆಗಿರುತ್ತದೆ.  ಆಯ್ಕೆಯಾದ ಅಭ್ಯರ್ಥಿಗಳಿಗೆ ಐಎನ್​ಎಸ್​ ಚಿಲ್ಕಾದಲ್ಲಿ 22 ವಾರ ಪ್ರಾಥಮಿಕ ತರಬೇತಿ ಮತ್ತು ನಿಯೋಜಿತ ನೌಕಾ ತರಬೇತಿ ಕೇಂದ್ರಗಳಲ್ಲಿ ವೃತ್ತಿಪರ ತರಬೇತಿ ನೀಡಲಾಗುವುದು.

ಗಣಿತ, ಭಾತಶಾಸ್ತ್ರ ಮತ್ತು ರಸಾಯನ ಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್​ ವಿಜ್ಞಾನ ಇತರೆ ಯಾವುದೇ ವಿಷಯಗಳೊಂದಿಗೆ ಒಟ್ಟುಶೇ.60ರಷ್ಟು ಹೆಚ್ಚಿನ ಅಂಕಗಳೊಂದಿಗೆ 10+2 ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ವಯಸ್ಸು 17 ರಿಂದ 20ರ ನಡುವೆ ಇರಬೇಕು.

ಇದನ್ನೂ ಓದಿ: Explainer | ನೌಕಾಪಡೆ ದಿನ Indian Navy Day 2020 ಕರಾಚಿ ಬಂದರು ಮೇಲೆ ಭಾರತೀಯ ಯೋಧರ ಪಾರಮ್ಯದ ನೆನಪು

ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?