KSDA Recruitment 2023: ಕರ್ನಾಟಕ ರಾಜ್ಯ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂಡ್ಯ - ಕರ್ನಾಟಕ ಸರ್ಕಾರಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮಾರ್ಚ 06, 2023 ರಂದು ಅಥವಾ ಮೊದಲು ಆಫ್‌ಲೈನ್‌ ಮೋಡ್​ನಲ್ಲಿ ಅರ್ಜಿ ಸಲ್ಲಿಸಬಹುದು.

KSDA Recruitment 2023:  ಕರ್ನಾಟಕ ರಾಜ್ಯ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಕೃಷಿ ಇಲಾಖೆ
Follow us
ನಯನಾ ಎಸ್​ಪಿ
| Updated By: ರಮೇಶ್ ಬಿ. ಜವಳಗೇರಾ

Updated on:Feb 24, 2023 | 7:58 PM

ವಿವಿಧ ಹುದ್ದೆಗಳ ನೇಮಕಾತಿಗೆ ಕರ್ನಾಟಕ ರಾಜ್ಯ ಕೃಷಿ ಇಲಾಖೆಯು(KSDA) ಅಧಿಕೃತ ಅಧಿಸೂಚನೆ ಹೊರಡಿಸಿದೆ. ಸಹಾಯಕ ತಾಂತ್ರಿಕ ವ್ಯವಸ್ಥಾಪಕ, ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 08 ಅಸಿಸ್ಟೆಂಟ್ ಟೆಕ್ನಿಕಲ್ ಮ್ಯಾನೇಜರ್, ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 2023, ಮಾರ್ಚ್​ 06ರಿಂದ ಆನ್​ಲೈನ್​ ಅಥವಾ ಮೊದಲು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

KSDA ಹುದ್ದೆಯ ಅಧಿಸೂಚನೆ

  • ಸಂಸ್ಥೆಯ ಹೆಸರು: ಕರ್ನಾಟಕ ರಾಜ್ಯ ಕೃಷಿ ಇಲಾಖೆ (KSDA)
  • ಹುದ್ದೆಗಳ ಸಂಖ್ಯೆ: 08
  • ಉದ್ಯೋಗ ಸ್ಥಳ: ಮಂಡ್ಯ – ಕರ್ನಾಟಕ
  • ಹುದ್ದೆಯ ಹೆಸರು: ಅಸಿಸ್ಟೆಂಟ್ ಟೆಕ್ನಿಕಲ್ ಮ್ಯಾನೇಜರ್, ಕಂಪ್ಯೂಟರ್ ಪ್ರೋಗ್ರಾಮರ್
  • ವೇತನ: ರೂ.16000-30000/- ಪ್ರತಿ ತಿಂಗಳು

KSDA ಹುದ್ದೆಯ ವಿವರಗಳು

  • ಕಂಪ್ಯೂಟರ್ ಪ್ರೋಗ್ರಾಮರ್/ಆಪರೇಟರ್- 1 ಹುದ್ದೆ ಖಾಲಿ
  • ತಾಲೂಕು ತಾಂತ್ರಿಕ ವ್ಯವಸ್ಥಾಪಕರು- 3 ಹುದ್ದೆ ಖಾಲಿ
  • ಸಹಾಯಕ ತಾಂತ್ರಿಕ ವ್ಯವಸ್ಥಾಪಕ- 4 ಹುದ್ದೆ ಖಾಲಿ

KSDA ಅರ್ಹತಾ ಮಾನದಂಡಗಳು

  • ಕಂಪ್ಯೂಟರ್ ಪ್ರೋಗ್ರಾಮರ್/ಆಪರೇಟರ್: ಬಿ.ಟೆಕ್, ಎಂಸಿಎ, ಡಿಪ್ಲೊಮಾ, ಪದವಿ
  • ತಾಲೂಕು ತಾಂತ್ರಿಕ ವ್ಯವಸ್ಥಾಪಕರು: ಕೃಷಿಯಲ್ಲಿ ಸ್ನಾತಕೋತ್ತರ ಪದವಿ
  • ಸಹಾಯಕ ತಾಂತ್ರಿಕ ವ್ಯವಸ್ಥಾಪಕ: ಪದವಿ, ಕೃಷಿಯಲ್ಲಿ ಸ್ನಾತಕೋತ್ತರ ಪದವಿ

ಅನುಭವದ ವಿವರಗಳು

  • ಕಂಪ್ಯೂಟರ್ ಪ್ರೋಗ್ರಾಮರ್/ಆಪರೇಟರ್: ಅಭ್ಯರ್ಥಿಗಳು ಡಿಪ್ಲೊಮಾ ಅಥವಾ ಬಿ.ಟೆಕ್ ಮುಗಿಸಿ 01 ವರ್ಷ ಅನುಭವ ಹೊಂದಿರಬೇಕು. ಎಂಸಿಎ ಮುಗಿಸಿದ್ದಾರೆ 1.5 ವರ್ಷಗಳ ಅನುಭವ ಹೊಂದಿರಬೇಕು.
  • ತಾಲೂಕು ತಾಂತ್ರಿಕ ವ್ಯವಸ್ಥಾಪಕರು: ಅಭ್ಯರ್ಥಿಗಳು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಕನಿಷ್ಠ 02 ವರ್ಷಗಳ ಅನುಭವವನ್ನು ಹೊಂದಿರಬೇಕು
  • ಅಸಿಸ್ಟೆಂಟ್ ಟೆಕ್ನಿಕಲ್ ಮ್ಯಾನೇಜರ್: ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 01 ವರ್ಷದ ಅನುಭವ ಹೊಂದಿರಬೇಕು

KSDA ವೇತನ ವಿವರ

  • ಕಂಪ್ಯೂಟರ್ ಪ್ರೋಗ್ರಾಮರ್/ಆಪರೇಟರ್- ರೂ.16000/- ತಿಂಗಳಿಗೆ
  • ತಾಲೂಕು ತಾಂತ್ರಿಕ ವ್ಯವಸ್ಥಾಪಕರು- ರೂ.30000/- ತಿಂಗಳಿಗೆ
  • ಸಹಾಯಕ ತಾಂತ್ರಿಕ ವ್ಯವಸ್ಥಾಪಕ- ರೂ.25000/- ತಿಂಗಳಿಗೆ

ಇದನ್ನೂ ಓದಿ: CSG ಕರ್ನಾಟಕ ನೇಮಕಾತಿ 2023 – 44 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

KSDA ನೇಮಕಾತಿ 2023 ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯ ಜೊತೆಗೆ ಸಂಬಂಧಿತ ದಾಖಲೆಗಳೊಂದಿಗೆ ಜಂಟಿ ಕೃಷಿ ನಿರ್ದೇಶಕರು, ಮಂಡ್ಯ ಜಿಲ್ಲೆ, ಮಂಡ್ಯ, ಕರ್ನಾಟಕ ಇವರಿಗೆ ಮಾರ್ಚ್ 06, ಸಂಜೆ 4 ಗಂಟೆಗೆ ಅಥವಾ ಮೊದಲು ಕಳುಹಿಸಬೇಕಾಗುತ್ತದೆ.

KSDA ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್‌ಸೈಟ್: raitamitra.karnataka.gov.in


ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:56 pm, Fri, 24 February 23