AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NEET UG 2025: NEET UG ಉತ್ತರ ಕೀ ಬಿಡುಗಡೆ, ಪರಿಶೀಲಿಸುವುದು ಹೇಗೆ?

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG 2025 ಪರೀಕ್ಷೆಯ ತಾತ್ಕಾಲಿಕ ಉತ್ತರ ಕೀಲಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು neet.nta.nic.in ನಲ್ಲಿ ನೋಂದಣಿ ಸಂಖ್ಯೆಯನ್ನು ಬಳಸಿ ಉತ್ತರ ಕೀಲಿಯನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ಜೂನ್ 3 ರಿಂದ 5 ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಜೂನ್ 14 ರಂದು ಫಲಿತಾಂಶ ಪ್ರಕಟಣೆ ನಿರೀಕ್ಷಿಸಲಾಗಿದೆ.

NEET UG 2025: NEET UG ಉತ್ತರ ಕೀ ಬಿಡುಗಡೆ, ಪರಿಶೀಲಿಸುವುದು ಹೇಗೆ?
Neet Ug 2025 Answer Key Released
ಅಕ್ಷತಾ ವರ್ಕಾಡಿ
|

Updated on: Jun 03, 2025 | 2:27 PM

Share

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು NEET UG ಪರೀಕ್ಷೆಯ ತಾತ್ಕಾಲಿಕ ಉತ್ತರ ಕೀಲಿಯನ್ನು ಬಿಡುಗಡೆ ಮಾಡಿದೆ. ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ neet.nta.nic.in ಗೆ ಭೇಟಿ ನೀಡಿ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಉತ್ತರ ಕೀಲಿಯನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ಅಭ್ಯರ್ಥಿಗಳು ಇಂದು ಜೂನ್ 3 ರಿಂದ ಜೂನ್ 5 ರವರೆಗೆ ಬಿಡುಗಡೆಯಾದ ತಾತ್ಕಾಲಿಕ ಉತ್ತರ ಕೀಲಿಯ ಬಗ್ಗೆ ಆಕ್ಷೇಪಣೆಗಳನ್ನು ನೋಂದಾಯಿಸಬಹುದು.

ಮೇ 4 ರಂದು ಪರೀಕ್ಷೆ ನಡೆಸಲಾಗಿತ್ತು. ಸುಮಾರು 21 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಭಾರತದಾದ್ಯಂತ 557 ನಗರಗಳಲ್ಲಿ 4,750 ಕೇಂದ್ರಗಳಲ್ಲಿ ಹಾಗೂ ವಿದೇಶದಲ್ಲಿರುವ 14 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು. ತಾತ್ಕಾಲಿಕ ಉತ್ತರ ಕೀಲಿಯ ಕುರಿತು ಬಂದ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿದ ನಂತರ ಅಂತಿಮ ಉತ್ತರ ಕೀಲಿಯನ್ನು ಬಿಡುಗಡೆ ಮಾಡಲಾಗುತ್ತದೆ. ಜೂನ್ 14 ರಂದು ಫಲಿತಾಂಶವನ್ನು ಘೋಷಿಸುವ ನಿರೀಕ್ಷೆಯಿದೆ.

ಉತ್ತರ ಕೀ ಪರಿಶೀಲಿಸುವುದು ಹೇಗೆ?

  • neet.nta.nic.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ನೀಡಲಾದ NEET UG 2025 ಉತ್ತರ ಕೀ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಈಗ ನೋಂದಣಿ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಿ ಮತ್ತು ಸಲ್ಲಿಸಿ.
  • ಉತ್ತರದ ಕೀಲಿಯು ನಿಮ್ಮ ಸ್ಕ್ರೀನ್​​​ ಮೇಲೆ ಕಾಣಿಸುತ್ತದೆ.
  • ಈಗ ಪರಿಶೀಲಿಸಿ ಮತ್ತು ಪ್ರಿಂಟ್​ ತೆಗೆದುಕೊಳ್ಳಿ.

ಅಂಕಗಳ ವ್ಯವಸ್ಥೆಯ ಪ್ರಕಾರ, ಒಂದು ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಆಯ್ಕೆಗಳು ಸರಿಯಾಗಿದ್ದರೆ, ಸರಿಯಾದ ಆಯ್ಕೆಯನ್ನು ಗುರುತಿಸಿದವರಿಗೆ ಮಾತ್ರ ನಾಲ್ಕು ಅಂಕಗಳನ್ನು (+4) ನೀಡಲಾಗುತ್ತದೆ. ಆದಾಗ್ಯೂ, ಎಲ್ಲಾ ಆಯ್ಕೆಗಳು ಸರಿಯಾಗಿದ್ದರೆ, ಪ್ರಶ್ನೆಗೆ ಪ್ರಯತ್ನಿಸಿದ ಎಲ್ಲರಿಗೂ ನಾಲ್ಕು ಅಂಕಗಳನ್ನು (+4) ನೀಡಲಾಗುತ್ತದೆ.

ಇದನ್ನೂ  ಓದಿ: ಭಾರತೀಯ ವಾಯುಪಡೆಯಲ್ಲಿ ಕೆಲಸ ಪಡೆಯಲು ಸುವರ್ಣವಕಾಶ; ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಯಾವುದೇ ಆಯ್ಕೆ ಸರಿಯಾಗಿ ಕಂಡುಬಂದಿಲ್ಲವಾದರೆ ಅಥವಾ ಯಾವುದೇ ಪ್ರಶ್ನೆ ತಪ್ಪಾಗಿ ಕಂಡುಬಂದರೆ ಅಥವಾ ಯಾವುದೇ ಪ್ರಶ್ನೆಗೆ ಉತ್ತರಿಸದೆ ಬಿಟ್ಟರೆ, ಅಭ್ಯರ್ಥಿಯು ಪ್ರಶ್ನೆಗೆ ಪ್ರಯತ್ನಿಸಿದ್ದಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಎಲ್ಲಾ ಅಭ್ಯರ್ಥಿಗಳಿಗೆ ನಾಲ್ಕು ಅಂಕಗಳನ್ನು (4) ನೀಡಲಾಗುತ್ತದೆ. ಈ ಕುರಿತು ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು NEET UG ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ