North Western Railway Recruitment 2024: ವಾಯುವ್ಯ ರೈಲ್ವೆಯಲ್ಲಿ ಖಾಲಿಯಿರುವ 1791 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ
ವಾಯುವ್ಯ ರೈಲ್ವೆಯಲ್ಲಿ ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿಯೂ ಈ ಕೆಳಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಸೂಚನೆ ಓದಿ ನಂತರವೇ ಈ ಕೆಳಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ನೀವು ಐಟಿಐ ಪದವಿಯನ್ನು ಹೊಂದಿದ್ದು, ರೈಲ್ವೆಯಲ್ಲಿ ಅಪ್ರೆಂಟಿಸ್ ಕೆಲಸ ಮಾಡಲು ಬಯಸುವವರಿಗೆ ಒಂದೊಳ್ಳೆ ಸುದ್ದಿಯಿದೆ. ವಾಯುವ್ಯ ರೈಲ್ವೆಯಲ್ಲಿ ಸಾವಿರಾರು ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯ ಅಡಿಯಲ್ಲಿ, ರೈಲ್ವೆಯಲ್ಲಿ ಒಟ್ಟು 1791 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಡಿಸೆಂಬರ್ 10 ರೊಳಗೆ ಆಸಕ್ತ ಅಭ್ಯರ್ಥಿಗಳು ಆರ್‌ಆರ್‌ಸಿ ಜೈಪುರದ ಅಧಿಕೃತ ವೆಬ್‌ಸೈಟ್ rrcjaipur.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅಪ್ರೆಂಟಿಸ್ ಹುದ್ದೆಯ ವಿವರಗಳು
* ಡಿಆರ್‌ಎಂ ಆಫಿಸ್, ಅಜ್ಮೀರ್ ಡಿವಿಸನ್: 440
* ಡಿಆರ್‌ಎಂ ಆಫಿಸ್, ಬಿಜಾನೇರ್ ಡಿವಿಸನ್: 482
* ಡಿಆರ್‌ಎಂ ಆಫಿಸ್, ಜೈಪುರ ಡಿವಿಸನ್ :532
* ಡಿಆರ್‌ಎಂ ಆಫಿಸ್, ಜೋಧಪುರ ಡಿವಿಸನ್ :67
* ಬಿಟಿಸಿ ಕ್ಯಾರೇಜ್,ಅಜ್ಮೀರ್ :99
* ಬಿಟಿಸಿ, ಲೋಕೋ, ಅಜ್ಮೀರ್ : 69
* ಕ್ಯಾರೇಜ್ ವರ್ಕ್ ಶಾಪ್, ಬಿಕಾನೇರ್ :32
* ಕ್ಯಾರೇಜ್ ವರ್ಕ್ ಶಾಪ್, ಜೋಧಪುರ :70
ಶೈಕ್ಷಣಿಕ ಅರ್ಹತೆ
* ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ಪರೀಕ್ಷೆ ಅಥವಾ ಅದರ ಸಮಾನ ಪರೀಕ್ಷೆಯನ್ನು (10+2 ಪರೀಕ್ಷಾ ವ್ಯವಸ್ಥೆಯ ಅಡಿಯಲ್ಲಿ) ಉತ್ತೀರ್ಣರಾಗಿರಬೇಕು.
* ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ (ಎನ್‌ಸಿವಿಟಿ)/ಸ್ಟೇಟ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ (ಎಸ್‌ಸಿವಿಟಿ) ಹೊರಡಿಸಿದ ಅಧಿಸೂಚಿತ ವ್ಯಾಪಾರದಲ್ಲಿ ಅಭ್ಯರ್ಥಿಯು ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರವನ್ನು ಹೊಂದಿರಬೇಕು.
ಇದನ್ನೂ ಓದಿ: ಗ್ರಾಮ ಪಂಚಾಯತ್ ಲೈಬ್ರರಿ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ
ವಯಸ್ಸಿನ ಮಿತಿ
ಅರ್ಜಿದಾರರ ಕನಿಷ್ಠ ವಯಸ್ಸು 15 ವರ್ಷ. ಗರಿಷ್ಠ ವಯಸ್ಸು 24 ವರ್ಷ ಮೀರಿರಬಾರದು. 24 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ.
ಅರ್ಜಿ ಶುಲ್ಕ
ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ ಪಾವತಿಸಬೇಕು. ಆದರೆ ಎಸ್ ಸಿ/ ಎಸ್ ಟಿ, ಅಂಗವಿಕಲರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಮೆಟ್ರಿಕ್ಯುಲೇಷನ್‌ನಲ್ಲಿ ಶೇಕಡಾವಾರು ಅಂಕಗಳು (ಕನಿಷ್ಠ 50% ಒಟ್ಟು ಅಂಕಗಳು) ಮತ್ತು ಆಯಾ ಟ್ರೇಡ್‌ನಲ್ಲಿ ಐಟಿಐಯಲ್ಲಿನ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧ ಪಡಿಸಲಾಗುತ್ತದೆ.
ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10-11-2024
* ಅರ್ಜಿ ಸಲ್ಲಿಕೆ ಮತ್ತು ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 10-12-2024
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:07 pm, Wed, 13 November 24