RailTel Recruitment 2022: ರೈಲ್ಟೆಲ್ನ ಹುದ್ದೆಗಳಿಗೆ ಅರ್ಜಿ ಆಹ್ವಾನ
RailTel Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂದರೆ ಅಂಚೆ ಅಥವಾ ಕೊರಿಯರ್ ಮೂಲಕ ಅರ್ಜಿ ಕಳುಹಿಸಬೇಕು.
RailTel Recruitment 2022: ಕೇಂದ್ರ ರೈಲ್ವೇ ಸಚಿವಾಲಯದ ಅಧೀನದಲ್ಲಿರುವ ರೈಲ್ಟೆಲ್ನಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ. ರೈಲ್‌ಟೆಲ್ ಪ್ರಾಜೆಕ್ಟ್ ಕೋಆರ್ಡಿನೇಟರ್, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಮತ್ತು ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂದರೆ ಅಂಚೆ ಅಥವಾ ಕೊರಿಯರ್ ಮೂಲಕ ಅರ್ಜಿ ಕಳುಹಿಸಬೇಕು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು: ಒಟ್ಟು ಹುದ್ದೆಗಳ ಸಂಖ್ಯೆ- 3
ಅರ್ಹತಾ ಮಾನದಂಡಗಳು: ಐಟಿ ಕ್ಷೇತ್ರದಲ್ಲಿ ಬಿಇ/ಬಿ.ಟೆಕ್/ಎಂ.ಟೆಕ್ (ಕಂಪ್ಯೂಟರ್/ಎಲೆಕ್ಟ್ರಾನಿಕ್ಸ್) ಸಿಸಿಎನ್‌ಎ, ರೂಟಿಂಗ್ ಮತ್ತು ಸ್ವಿಚಿಂಗ್ ಜೊತೆಗೆ ಕನಿಷ್ಠ 3 ರಿಂದ 6 ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಯ ವಯಸ್ಸು ಕನಿಷ್ಠ 24 ವರ್ಷಗಳು ಮತ್ತು ಗರಿಷ್ಠ 36 ವರ್ಷಗಳ ಒಳಗಿರಬೇಕು.
ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 21, 2022
ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಪೋಸ್ಟ್/ಕೊರಿಯರ್/ಅಂಚೆಯ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ:
Additional General Manager/IT-HR, RailTel Corporation of India Ltd., H. No. 1-10-39 to 44, 6A,6th Floor, GUMEDELLI TOWERS, Begumpet Airport Road, Opposite Shoppers Stop, Begumpet, Hyderabad. 50001.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.