ಮುರುಘಾಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ; ನ್ಯಾಯ ಕೊಡಿಸಿ ಇಲ್ಲಾ ದಯಾಮರಣ ನೀಡಿ ಎಂದು ರಾಷ್ಟ್ರಪತಿಗೆ ಮತ್ತೊಂದು ಪತ್ರ ಬರೆದ ಬಾಲಕಿಯರ ತಾಯಿ

ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರಪತಿಗೆ ಮತ್ತೊಂದು ಪತ್ರ ಬರೆದ ಬಾಲಕಿಯರ ತಾಯಿ ‘ನ್ಯಾಯ ಕೊಡಿಸಿ ಇಲ್ಲಾ ದಯಾಮರಣ ನೀಡಿ' ಎಂದು ಕೇಳಿದ್ದಾರೆ.

ಮುರುಘಾಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ; ನ್ಯಾಯ ಕೊಡಿಸಿ ಇಲ್ಲಾ ದಯಾಮರಣ ನೀಡಿ ಎಂದು ರಾಷ್ಟ್ರಪತಿಗೆ ಮತ್ತೊಂದು ಪತ್ರ ಬರೆದ ಬಾಲಕಿಯರ ತಾಯಿ
ಮುರುಘಾ ಶ್ರೀ
Edited By: ಕಿರಣ್ ಹನುಮಂತ್​ ಮಾದಾರ್

Updated on: Dec 05, 2022 | 8:09 AM

ಮೈಸೂರು: ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ‌ ಮುರ್ಮು ಅವರಿಗೆ ಬಾಲಕಿಯರ ತಾಯಿ ಪತ್ರ ಬರೆದಿದ್ದಾರೆ. ‘ನ್ಯಾಯ ಕೊಡಿಸಿ ಇಲ್ಲಾ ದಯಾಮರಣ ನೀಡಿ, ತಳಮಟ್ಟದ ಸಮುದಾಯಗಳ ಮಹಿಳಾ ಪ್ರತಿನಿಧಿ ನೀವಾಗಿದ್ದೀರಿ, ನಮ್ಮಂತವರ ತಾಯಿ ಸ್ಥಾನದಲ್ಲಿರುವ ನೀವು ನಮಗೆ ನ್ಯಾಯ ಕೊಡಿಸಿ ಎಂದು ಬರೆದಿದ್ದಾರೆ. ಸ್ವಾಮಿಜಿಯಿಂದ ಯಾವ ಕೆಟ್ಟ ಕೃತ್ಯ ನಡೆದಿಲ್ಲ. ಎಲ್ಲ ನಿಮ್ಮ ಹಾಗೂ ನಿಮ್ಮ ಮಕ್ಕಳ ಷಡ್ಯಂತ್ರ ಕೆಲವು ಅಧಿಕಾರಿಗಳು ಈ ರೀತಿ ನಿರ್ಧಾರಕ್ಕೆ ಬಂದಿದ್ದಾರೆ. ಪ್ರಕರಣ ದಾಖಲಾದ ನಂತರ ನಾನು ನನ್ನ ಮಕ್ಕಳು ಆಶ್ರಯ ಕಳೆದುಕೊಂಡಿದ್ದೇವೆ. ಊಟ ಆಶ್ರಯ ಇಲ್ಲದಂತಾಗಿದೆ. ಆಶ್ರಯ ಕೊಡುವವರನ್ನು ಅನುಮಾನದಿಂದ ನೋಡಲಾಗುತ್ತಿದೆ. ‘ಭೇಟಿ ಪಡಾವೋ ಭೇಟಿ ಬಚಾವೋ’ ನಗೆಪಾಟಲಿಗೀಡಾಗುತ್ತಿದೆ. ನಮಗೆ ನ್ಯಾಯ ಕೊಡಿಸಿ ಎಂದು ಬಾಲಕಿಯರ ತಾಯಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ:Murugha Shree: ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ವಜಾಕ್ಕೆ ಆಗ್ರಹ: ಸಭೆಯಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ, ತಳ್ಳಾಟ-ನೂಕಾಟ

ಜಿಲ್ಲೆಯ ಪ್ರಸಿದ್ಧ ಮಠವಾಗಿದ್ದ ಮುರುಘಾ ಮಠದಲ್ಲಿ ನಡೆಯಬಾರದ ಅನಾಚಾರ ನಡೆದಿದೆ. ಮುರುಘಾಶ್ರೀ ವಿರುದ್ಧ ಎರಡು ಫೋಕ್ಸೋ ಪ್ರಕರಣಗಳು ದಾಖಲಾಗಿದ್ದು ಕಾವಿಧಾರಿಯ ಕಾಮರಾಕ್ಷಸತನವನ್ನ ಕಂಡು ಇಡೀ ರಾಜ್ಯ ಬೆಚ್ಚಿಬಿದ್ದಿದೆ. ಇಡೀ ಕಾವಿ ಕುಲವನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ. ಎಲ್ಲ ಕಳೆದುಕೊಂಡು ತಮ್ಮ ಆಶ್ರಯಕ್ಕೆ ಬಂದಿದ್ದ ಮಕ್ಕಳನ್ನು ತಂದೆಯಂತೆ ಪೊರೆಯಬೇಕಿದ್ದ ವ್ಯಕ್ತಿಯೇ ಕಾಮಪಿಪಾಸೆ ತಣಿಸಿಕೊಳ್ಳಲು ಬಳಸಿಕೊಂಡು ಕ್ರೌರ್ಯ ಮೆರೆದಿದ್ದಾರೆ.ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಕ್ಸೋ ಪ್ರಕರಣ ಎದುರಿಸುತ್ತಿರುವ ಮುರುಘಾ ಶರಣರು ಇಂದು ಸೆರೆಮನೆ ವಾಸದಲ್ಲಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us