SBI Recruitment 2022 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಂದು ಕೊನೆ ದಿನಾಂಕ

SBI ಅಕ್ಟೋಬರ್ 18, 2022 ರಂದು CBO ಪೋಸ್ಟ್‌ಗಳಿಗೆ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಇದಕ್ಕೆ ಕೊನೆಯ ದಿನಾಂಕದ ನೋಂದಣಿ ನವೆಂಬರ್ 7, 2022 ಆಗಿದೆ

SBI Recruitment 2022 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಂದು ಕೊನೆ ದಿನಾಂಕ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 07, 2022 | 2:37 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಇಂದು ಸೋಮವಾರ, ನವೆಂಬರ್ 7 ರಂದು ಅರ್ಜಿ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುತ್ತದೆ. ಆಸಕ್ತ ಅಭ್ಯರ್ಥಿಗಳು sbi ನ ಅಧಿಕೃತ ವೆಬ್‌ಸೈಟ್‌ sbi.co.inನಲ್ಲಿ 1,400 ಕ್ಕೂ ಹೆಚ್ಚು ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು. SBI ಅಕ್ಟೋಬರ್ 18, 2022 ರಂದು CBO ಪೋಸ್ಟ್‌ಗಳಿಗೆ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಇದಕ್ಕೆ ಕೊನೆಯ ದಿನಾಂಕದ ನೋಂದಣಿ ನವೆಂಬರ್ 7, 2022 ಆಗಿದೆ. SBI CBO 2022 ಪರೀಕ್ಷೆ ಡಿಸೆಂಬರ್ 4, 2022 ರಂದು ನಡೆಯಲಿದೆ.

SBI ನೇಮಕಾತಿ 2022: CBO ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

1) ಎಸ್‌ಬಿಐ ಅಧಿಕೃತ ವೆಬ್‌ಸೈಟ್‌ sbi.co.inಗೆ ಭೇಟಿ ನೀಡಿ.

2) ಮುಖಪುಟದಲ್ಲಿ Recruitment of Circle Based Officers ಮುಂದೆ ನೀಡಿರುವ ‘ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ’ ಕ್ಲಿಕ್ ಮಾಡಿ.

3) ಅಗತ್ಯವಿರುವ ವಿವರಗಳನ್ನು ನಮೂದಿಸಿ. SBI CBO ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

4) ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

5) ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು submit ಕ್ಲಿಕ್ ಮಾಡಿ.

6) ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದಿಡಿ

SBI CBO ನೇಮಕಾತಿ 2022: ಖಾಲಿ ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆಗಳು ಮತ್ತು ಇನ್ನಿತರ ವಿವರಗಳು ಖಾಲಿ ಹುದ್ದೆಗಳು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದಾದ್ಯಂತ 1,422 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಾರಂಭಿಸಿದೆ. SBI ಅಧಿಸೂಚನೆಯ ಪ್ರಕಾರ, CBO ಪೋಸ್ಟ್‌ಗಳಿಗೆ ಹೆಚ್ಚಿನ ಸಂಖ್ಯೆಯ ಖಾಲಿ ಹುದ್ದೆಗಳಿದ್ದು ಈಶಾನ್ಯ ಪ್ರದೇಶದಲ್ಲಿ 300 ಖಾಲಿ ಹುದ್ದೆಗಳಿವೆ. ಜೈಪುರ ಮತ್ತು ಮಹಾರಾಷ್ಟ್ರದಲ್ಲಿ ತಲಾ 200 ಹುದ್ದೆಗಳಿವೆ.

ಶೈಕ್ಷಣಿಕ ಅರ್ಹತೆ: ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಅಥವಾ ಇಂಟಿಗ್ರೇಟೆಡ್ ಡ್ಯುಯಲ್ ಪದವಿ (IDD) ಸೇರಿದಂತೆ ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ ಯಾವುದೇ ಸಮಾನ ಅರ್ಹತೆಯನ್ನು ಹೊಂದಿರಬೇಕು.

ವಯೋಮಿತಿ: CBO ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯ ಪ್ರಕಾರ 21 ರಿಂದ 30 ವರ್ಷ ವಯಸ್ಸಿನವರಾಗಿರಬೇಕು.

ವೇತನ: CBO ಹುದ್ದೆಗಳಿಗೆ ₹36,000 ವೇತನ ಅರ್ಜಿ ಶುಲ್ಕ: ಸಾಮಾನ್ಯ, EWS ಮತ್ತು OBC ವರ್ಗಗಳಿಗೆ, ಅರ್ಜಿ ಶುಲ್ಕ ₹ 750, ಆದರೆ ST, PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: CBO ಹುದ್ದೆಗಳ ಆಯ್ಕೆ ಪ್ರಕ್ರಿಯೆಗೆ ಮೂರು ಸುತ್ತುಗಳಿರುತ್ತವೆ. ಮೊದಲ ಸುತ್ತು ಆನ್‌ಲೈನ್ ಪರೀಕ್ಷೆಯನ್ನು ಒಳಗೊಂಡಿರುತ್ತದೆ, ನಂತರ ಸ್ಕ್ರೀನಿಂಗ್ ಮತ್ತು ಅಂತಿಮ ಸುತ್ತಿನಲ್ಲಿ ಸಂದರ್ಶನವನ್ನು ಒಳಗೊಂಡಿರುತ್ತದೆ.

ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು
ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು
ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​
ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
ಲಂಚ ಕೇಳಿದ ಅಧಿಕಾರಿಯನ್ನು ಟ್ರಾನ್ಸ್​ಫರ್ ಮಾಡೋದೇ ದೊಡ್ಡ ಶಿಕ್ಷೆ!
ಲಂಚ ಕೇಳಿದ ಅಧಿಕಾರಿಯನ್ನು ಟ್ರಾನ್ಸ್​ಫರ್ ಮಾಡೋದೇ ದೊಡ್ಡ ಶಿಕ್ಷೆ!