AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Recruitment: ಎಸ್​ಬಿಐ ಬ್ಯಾಂಕ್​ನಲ್ಲಿ ಉದ್ಯೋಗಾವಕಾಶ: ವೇತನ 76 ಸಾವಿರ ರೂ.

State Bank of India Recruitment: ಜುಲೈ 1, 2021 ರಂತೆ ಗರಿಷ್ಠ 45 ವರ್ಷಗಳೊಳಗಿನ ಅಭ್ಯರ್ಥಿಗಳು ಮುಖ್ಯ ವ್ಯವಸ್ಥಾಪಕ (ಕಂಪನಿ ಕಾರ್ಯದರ್ಶಿ) ಹುದ್ದೆಗೆ ಅರ್ಜಿ ಸಲ್ಲಿಸಬಹುದು.

SBI Recruitment: ಎಸ್​ಬಿಐ ಬ್ಯಾಂಕ್​ನಲ್ಲಿ ಉದ್ಯೋಗಾವಕಾಶ: ವೇತನ 76 ಸಾವಿರ ರೂ.
SBI
TV9 Web
| Edited By: |

Updated on: Jan 02, 2022 | 7:37 PM

Share

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್ ಹೊಸ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಒಟ್ಟು 15 ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ sbi.co.in ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ಸಂಖ್ಯೆ ಮತ್ತು ವಿವರ: ಮುಖ್ಯ ವ್ಯವಸ್ಥಾಪಕರು (ಕಂಪನಿ ಕಾರ್ಯದರ್ಶಿ): 02 ಹುದ್ದೆಗಳು ಮ್ಯಾನೇಜರ್ (SME ಪ್ರೊಡಕ್ಟ್​): 06 ಹುದ್ದೆಗಳು ಡೆಪ್ಯುಟಿ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್): 07 ಹುದ್ದೆಗಳು

ವಿದ್ಯಾರ್ಹತೆ: ಮುಖ್ಯ ವ್ಯವಸ್ಥಾಪಕರು (ಕಂಪನಿ ಕಾರ್ಯದರ್ಶಿ): ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ICSI) ಸದಸ್ಯರಾಗಿರಬೇಕು. ಇತರ ಅಪೇಕ್ಷಣೀಯ ಅರ್ಹತೆಗಳೆಂದರೆ LLB, CA, ICWA, FRM. ಮ್ಯಾನೇಜರ್ (SME ಪ್ರೊಡಕ್ಟ್​): ಮಾನ್ಯತೆ ಪಡೆದಿರುವ ವಿದ್ಯಾ ಸಂಸ್ಥೆಯಿಂದ ಪೂರ್ಣ ಸಮಯದ MBA/PGDM ಅಥವಾ ತತ್ಸಮಾನವಾದ ಸ್ನಾತಕೋತ್ತರ ಮ್ಯಾನೇಜ್ಮೆಂಟ್ ಪದವಿ ಮತ್ತು ಪೂರ್ಣ ಸಮಯದ BE/BTech ಪದವಿ ಪಡೆದಿರಬೇಕು. ಡೆಪ್ಯುಟಿ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್): ಚಾರ್ಟರ್ಡ್ ಅಕೌಂಟೆಂಟ್ ಆಗಿರಬೇಕು. (ಒಂದೇ ಪ್ರಯತ್ನದಲ್ಲಿ ಉತ್ತೀರ್ಣರಾಗಿರಬೇಕು).

ವಯೋಮಿತಿ: ಜುಲೈ 1, 2021 ರಂತೆ ಗರಿಷ್ಠ 45 ವರ್ಷಗಳೊಳಗಿನ ಅಭ್ಯರ್ಥಿಗಳು ಮುಖ್ಯ ವ್ಯವಸ್ಥಾಪಕ (ಕಂಪನಿ ಕಾರ್ಯದರ್ಶಿ) ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಗಸ್ಟ್ 1, 2021 ರಂತೆ ಗರಿಷ್ಠ 35 ವರ್ಷಗಳ ಒಳಗಿನ ಅಭ್ಯರ್ಥಿಗಳು ಮ್ಯಾನೇಜರ್ (SME) ಹುದ್ದೆಗಳಿಗೆ ಅರ್ಜಿ ಹಾಕಬಹುದು. ಅಕ್ಟೋಬರ್ 1, 2021 ರಂತೆ ಕನಿಷ್ಠ 25 ಮತ್ತು ಗರಿಷ್ಠ 35 ವರ್ಷಗಳೊಳಗಿನ ಅಭ್ಯರ್ಥಿಗಳು ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್) ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ವೇತನ: ಮುಖ್ಯ ವ್ಯವಸ್ಥಾಪಕರು (ಕಂಪನಿ ಕಾರ್ಯದರ್ಶಿ): ರೂ. 76010-2220/4-84890-2500/2-89890 ಮ್ಯಾನೇಜರ್ (SME ಪ್ರೊಡಕ್ಟ್​): ರೂ. 63840-1990/5-73790-2220/2-78230 ಡೆಪ್ಯುಟಿ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್): ರೂ. 48170-1740/1-49910-1990/10-69810

ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದರಂತೆ ಎಸ್‌ಬಿಐನ ಅಧಿಕೃತ ವೆಬ್‌ಸೈಟ್ https://bank.sbi/careers ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು: ಅಭ್ಯರ್ಥಿಗಳು ಜನವರಿ 13, 2022 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಈ ಹುದ್ದೆಗಳ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

(State Bank of India Recruitment: SBI announces various vacancies)

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು