Sign In

By signing in or creating an account, you agree with Associated Broadcasting Company's Terms & Conditions and Privacy Policy.

UAS Dharwad Recruitment 2025 : ಧಾರವಾಡ ಕೃಷಿ ಯೂನಿವರ್ಸಿಟಿ ನೇಮಕಾತಿ; ವಿಸಿಟಿಂಗ್ ಡಾಕ್ಟರ್ ಹುದ್ದೆಗೆ ನೇರ ಸಂದರ್ಶನ

ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಹನುಮನಮಟ್ಟಿಯಲ್ಲಿ ವಿಸಿಟಿಂಗ್ ಡಾಕ್ಟರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. MBBS ಅಥವಾ BAMS ಪದವೀಧರರು ಮಾರ್ಚ್ 18 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು. ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿದೆ. ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಹಾಜರಾಗತಕ್ಕದ್ದು.

UAS Dharwad Recruitment 2025 : ಧಾರವಾಡ ಕೃಷಿ ಯೂನಿವರ್ಸಿಟಿ ನೇಮಕಾತಿ; ವಿಸಿಟಿಂಗ್ ಡಾಕ್ಟರ್ ಹುದ್ದೆಗೆ ನೇರ ಸಂದರ್ಶನ
Uas Dharwad Visiting Doctor Jobs
Follow us
ಅಕ್ಷತಾ ವರ್ಕಾಡಿ
|

Updated on:Mar 07, 2025 | 12:30 PM

ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ(UAS Dharwad)ವು ಅಧಿಕೃತ ಅಧಿಸೂಚನೆಯ ಮೂಲಕ ಹನುಮನಮಟ್ಟಿಯಲ್ಲಿ ವಿಸಿಟಿಂಗ್ ಡಾಕ್ಟರ್ ಹುದ್ದೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಿಂದ ಹನುಮನಮಟ್ಟಿಯಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮಾರ್ಚ್ 18 ರಂದು ಬೆಳಿಗ್ಗೆ 11:00 ಗಂಟೆಗೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

ಯುಎಎಸ್ ಧಾರವಾಡ ನೇಮಕಾತಿಯ ಅರ್ಹತಾ ವಿವರಗಳು:

ಶೈಕ್ಷಣಿಕ ಅರ್ಹತೆ:

  • ಧಾರವಾಡ ವಿಶ್ವವಿದ್ಯಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ MBBS , BAMS ಪೂರ್ಣಗೊಳಿಸಿರಬೇಕು .
  • ಮಾನ್ಯತೆ ಪಡೆದ ಮತ್ತು ಪ್ರತಿಷ್ಠಿತ ನರ್ಸಿಂಗ್‌ಹೋಮ್ / ಆಸ್ಪತ್ರೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವವನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:

ಇದನ್ನೂ ಓದಿ
Image
IFFCO ನಲ್ಲಿ ಪದವೀಧರರಿಗೆ ಉದ್ಯೋಗವಕಾಶ; ತಿಂಗಳಿಗೆ 33,000 ರೂ. ಸಂಬಳ
Image
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್​​ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
Image
ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; ಡಿಗ್ರಿ ಕಂಪ್ಲೀಟ್ ಆಗಿದ್ರೆ ಸಾಕು
Image
ಜೂ.ಇಂಜಿನಿಯರ್ ಹುದ್ದೆಗೆ ನೇಮಕಾತಿ; ಮಾ. 8 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಇದನ್ನೂ ಓದಿ: ವೈದ್ಯಕೀಯ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಉಪಯುಕ್ತ ಮಾಹಿತಿ ಇಲ್ಲಿದೆ

ಯುಎಎಸ್ ಧಾರವಾಡ ನೇಮಕಾತಿ (ವಿಸಿಟಿಂಗ್ ಡಾಕ್ಟರ್) ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನಮೂದಿಸಿರುವ ಅರ್ಜಿ ನಮೂನೆಯಲ್ಲಿ ಸ್ವವಿವರಗಳನ್ನು ಭರ್ತಿ ಮಾಡಿದ ಎರಡು ಪ್ರತಿಗಳೊಂದಿಗೆ ದಿ: 18.03.2025 ರಂದು ಬೆಳಿಗ್ಗೆ 11.00ಗಂಟೆಗೆ ಡೀನ್ (ಕೃಷಿ) ರವರ ಕಾರ್ಯಾಲಯ, ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿಯಲ್ಲಿ ಸಂದರ್ಶನಕ್ಕೆ ಹಾಜರಾಗ ಬೇಕು. ಸಂದರ್ಶನಕ್ಕೆ ಬರುವಾಗ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ದೃಢೀಕೃತ ಎರಡು ಪ್ರತಿಗಳನ್ನು ತರಲು ತಿಳಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಪ್ರಾಧಾನ್ಯತೆ ನೀಡಲಾಗುವುದು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:30 pm, Fri, 7 March 25