Union Bank Recruitment 2023: ಯೂನಿಯನ್ ಬ್ಯಾಂಕ್ ನೇಮಕಾತಿ: ಮಾಸಿಕ ವೇತನ 89 ಸಾವಿರ ರೂ.
Union Bank Recruitment 2023: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕಿಂಗ್ ನೇಮಕಾತಿಯ ಅಧಿಕೃತ ವೆಬ್ಸೈಟ್ ibpsonline.ibps.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
Union Bank Recruitment 2023: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಕ್ರೆಡಿಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕಿಂಗ್ ನೇಮಕಾತಿಯ ಅಧಿಕೃತ ವೆಬ್ಸೈಟ್ ibpsonline.ibps.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಚೀಫ್ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್)- 3 ಹುದ್ದೆಗಳು
- ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- 34 ಹುದ್ದೆಗಳು
- ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- 5 ಹುದ್ದೆಗಳು
ಅರ್ಹತಾ ಮಾನದಂಡಗಳು:
- ಚೀಫ್ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್)- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನ ಸಹಾಯಕ ಸದಸ್ಯ (ACA) ಆಗಿರಬೇಕು.
- ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
- ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- ಈ ಹುದ್ದೆಗಳಿಗೆ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ:
- ಚೀಫ್ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್)- 25 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
- ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- 35 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
- ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- 22 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇನ್ನು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ PWD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ವೇತನ:
- ಚೀಫ್ ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್)- ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 76,010 ರಿಂದ 89,890 ರೂ.ವರೆಗೆ ಮಾಸಿಕ ವೇತನ ಸಿಗಲಿದೆ.
- ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 63,840 ರಿಂದ 78,230 ರೂ.ವರೆಗೆ ತಿಂಗಳ ವೇತನ ನೀಡಲಾಗುತ್ತದೆ.
- ಮ್ಯಾನೇಜರ್ (ಕ್ರೆಡಿಟ್ ಆಫೀಸರ್)- ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 48,170 ರಿಂದ 69,810 ರೂ.ವರೆಗೆ ಮಾಸಿಕ ವೇತನ ಸಿಗಲಿದೆ.
ಅರ್ಜಿ ಶುಲ್ಕ:
- UR/OBC ಅಭ್ಯರ್ಥಿಗಳಿಗೆ- 850 ರೂ.
- SC/ST/PWD ಅಭ್ಯರ್ಥಿಗಳು-150 ರೂ.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್ಲೈಕ್ ಪರೀಕ್ಷೆಯ ಮೂಲಕ ಶಾರ್ಟ್ ಲೀಸ್ಟ್ ಮಾಡಲಾಗುತ್ತದೆ. ಇದರಲ್ಲಿ ಪಾಸಾದ ಅಭ್ಯರ್ಥಿಗಳನ್ನು ಗ್ರೂಪ್ ಡಿಸ್ಕಶನ್ ಹಾಗೂ ವೈಯುಕ್ತಿಕ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
Also Read: SJVN Limited Recruitment 2023: ಜಲ ವಿದ್ಯುತ್ ನಿಗಮದ ನೇಮಕಾತಿ: ತಿಂಗಳ ಸಂಬಳ 45 ಸಾವಿರ ರೂ.
ಪ್ರಮುಖ ದಿನಾಂಕಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಫೆಬ್ರವರಿ 12, 2023
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.