ಕಳ್ಳದೊರೆಗಳ ಲೆಕ್ಕ ಸರಿ ಮಾಡಲು ಬಂದ ಪವನ್ ಕಲ್ಯಾಣ್; ಚುನಾವಣೆ ಹೊಸ್ತಿಲಲ್ಲಿ ಪವರ್​ಫುಲ್ ಟೀಸರ್

Hari Hara Veera Mallu Part 1 Teaser: ‘ಹರಿ ಹರ ವೀರ ಮಲ್ಲು ಪಾರ್ಟ್ 1’ ಟೀಸರ್ ತೆಲುಗಿನ ಜೊತೆಗೆ ಕನ್ನಡ, ತಮಿಳು, ಮಲಯಾಳಂ, ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಿದೆ. ಚುನಾವಣ ಹೊಸ್ತಿಲಲ್ಲೇ ಈ ಟೀಸರ್ ರಿಲೀಸ್ ಮಾಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರವನ್ನು ದಯಾಕರ್ ರಾವ್ ನಿರ್ಮಾಣ ಮಾಡುತ್ತಿದ್ದಾರೆ.

ಕಳ್ಳದೊರೆಗಳ ಲೆಕ್ಕ ಸರಿ ಮಾಡಲು ಬಂದ ಪವನ್ ಕಲ್ಯಾಣ್; ಚುನಾವಣೆ ಹೊಸ್ತಿಲಲ್ಲಿ ಪವರ್​ಫುಲ್ ಟೀಸರ್
ಪವನ್

Updated on: May 02, 2024 | 12:34 PM

ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ (Pawan Kalyan) ಅವರು ಸಿನಿಮಾ ಹಾಗು ರಾಜಕೀಯ ಎರಡರಲ್ಲೂ ಬ್ಯುಸಿ ಇದ್ದಾರೆ. ಅವರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಇದಕ್ಕಾಗಿ ಅವರು ಪ್ರಚಾರ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರ ನಟನೆಯ ‘ಹರಿ ಹರ ವೀರ ಮಲ್ಲು ಪಾರ್ಟ್ 1’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಸಿನಿಮಾದ ಟೀಸರ್ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ತಮ್ಮ ಮೇಲಾಗುತ್ತಿರುವ ದಬ್ಬಾಳಿಕೆಯ ಬಗ್ಗೆ ಬಾಲಕಿ ಒಬ್ಬಳು ಪ್ರಶ್ನೆ ಮಾಡುತ್ತಾಳೆ. ಇದಕ್ಕೆ ಆಕೆಯ ತಂದೆ ಉತ್ತರ ನೀಡುತ್ತಾನೆ. ‘ಪ್ರತಿಯೊಬ್ಬನನ್ನೂ ಅವನ ಮೇಲಿರೋನು ದೋಚಿಕೊಳ್ಳುತ್ತಾನೆ. ನಮ್ಮನ್ನು ದೊರೆ ದೋಚಿಕೊಳ್ಳುತ್ತಾನೆ. ನಮ್ಮ ದೊರೆಯನ್ನು ಗೋಲ್ಕುಂಡ ನವಾಬ್ ದೋಚಿಕೊಳ್ಳುತ್ತಾನೆ. ಅವನಲ್ಲಿರೋದನ್ನು ದೆಹಲಿಯ ಮೊಘಲ್ ಚಕ್ರರ್ತಿ ದೋಚಿಕೊಳ್ಳುತ್ತಾನೆ’ ಎಂದು ಹೇಳುವಾಗ ಬಾಬಿ ಡಿಯೋಲ್ ಕಾಣಿಸಿಕೊಳ್ಳುತ್ತಾರೆ. ಅವರು ಮೊಘಲ್ ಚಕ್ರವರ್ತಿ ಆಗಿ ಕಾಣಿಸಿಕೊಂಡಿದ್ದಾರೆ.

‘ನಮ್ಮ ಮೇಲಿರುವ ಈ ಕಳ್ಳರನ್ನು ದೋಚಿಕೊಳ್ಳೋಕೆ ದೇವರು ಒಬ್ಬರನ್ನು ಕಳುಹಿಸಿಕೊಟ್ಟೇ ಕೊಡುತ್ತಾರೆ. ಅವನು ಬಂದು ಈ ಕಳ್ಳ ದೊರೆಗಳ ಲೆಕ್ಕ ಸರಿ ಮಾಡುತ್ತಾನೆ’ ಎನ್ನುವಾಗ ಪವನ್ ಕಲ್ಯಾಣ್ ಎಂಟ್ರಿ ಆಗುತ್ತದೆ. ಈ ಟೀಸರ್ ಸಾಕಷ್ಟು ಗಮನ ಸೆಳೆದಿದೆ. ದಬ್ಬಾಳಿಕೆ ಮಾಡುವವರ ವಿರುದ್ಧ ಹೋರಾಡುವ ಹರಿ ಹರ ವೀರ ಮಲ್ಲು ಆಗಿ ಪವನ್ ಕಲ್ಯಾಣ್ ಕಾಣಿಸಿಕೊಂಡಿದ್ದಾರೆ. ‘ಧರ್ಮಕ್ಕಾಗಿ ಯುದ್ಧ’ ಎನ್ನುವ ಕ್ಯಾಪ್ಶನ್ ಗಮನ ಸೆಳೆದಿದೆ.

ಇದನ್ನೂ ಓದಿ: ‘ಹರಿ ಹರ ವೀರಮಲ್ಲು’ ಚಿತ್ರಕ್ಕಾಗಿ ಮಾಸ್ ಅವತಾರ ತಾಳಿದ ಪವನ್ ಕಲ್ಯಾಣ್​; ಬರ್ತ್​ಡೇಗೆ ಟೀಸರ್ ಗಿಫ್ಟ್

‘ಹರಿ ಹರ ವೀರ ಮಲ್ಲು ಪಾರ್ಟ್ 1’ ಟೀಸರ್ ತೆಲುಗಿನ ಜೊತೆಗೆ ಕನ್ನಡ, ತಮಿಳು, ಮಲಯಾಳಂ, ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಿದೆ. ಚುನಾವಣ ಹೊಸ್ತಿಲಲ್ಲೇ ಈ ಟೀಸರ್ ರಿಲೀಸ್ ಮಾಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರವನ್ನು ದಯಾಕರ್ ರಾವ್ ನಿರ್ಮಾಣ ಮಾಡುತ್ತಿದ್ದಾರೆ. ಎಂಎಂ ಕೀರವಾಣಿ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಪವನ್ ಕಲ್ಯಾಣ್ ಜೊತೆಗೆ ನಿಧಿ ಅಗರ್​ವಾಲ್, ಬಾಬಿ ಡಿಯೋಲ್, ಎಂ ನಾಸರ್, ಸುನಿಲ್ ಮೊದಲಾದವರು ನಟಿಸಿದ್ದಾರೆ. ಕ್ರಿಶ್ ಜಾಗರ್ಲಮುಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.