Uma Raman: ಹಿರಿಯ ತಮಿಳು ಗಾಯಕಿ ಉಮಾ ರಮಣನ್ ನಿಧನ
ಉಮಾ ರಮಣನ್ ಅವರು 35 ವರ್ಷಗಳ ಅವಧಿಯಲ್ಲಿ 6000ಕ್ಕೂ ಅಧಿಕ ಕಾನ್ಸರ್ಟ್ಗಳಲ್ಲಿ ಹಾಡಿದ್ದಾರೆ. ಎವಿ ರಮಣನ್ ಅವರನ್ನು ಭೇಟಿ ಮಾಡಿದ ನಂತರ ಇಬ್ಬರೂ ಜಂಟಿಯಾಗಿ ಕಾರ್ಯಕ್ರಮ ನೀಡಲು ಪ್ರಾರಂಭಿಸಿದರು. ಇಳಯರಾಜ ಜೊತೆ ಕೆಲಸ ಮಾಡಲು ಪ್ರಾರಂಭಿಸಿದ ಮೇಲೆ ಅವರ ಖ್ಯಾತಿ ಹೆಚ್ಚಾಯಿತು.
ತಮಿಳು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಉಮಾ ರಮಣನ್ (Uma Ramanan) ಅವರು ಬುಧವಾರ (ಮೇ 1) ನಿಧನ ಹೊಂದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ತಮಿಳು ಸಿನಿಮಾಗಳಲ್ಲಿ ಹಲವು ಮೆಲೋಡಿ ಹಾಡುಗಳನ್ನು ಹಾಡಿದ ಖ್ಯಾತಿ ಅವರಿಗೆ ಇದೆ. ಅವರ ಪತಿ ಅವಿ ರಮಣನ್ ಅವರು ಖ್ಯಾತ ಗಾಯಕರು. ಈ ದಂಪತಿಗೆ ಓರ್ವ ಮಗ ಇದ್ದಾನೆ. ಉಮಾ ಅವರ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಉಮಾ ರಮಣನ್ ಅವರು 35 ವರ್ಷಗಳ ಅವಧಿಯಲ್ಲಿ 6000ಕ್ಕೂ ಅಧಿಕ ಕಾನ್ಸರ್ಟ್ಗಳಲ್ಲಿ ಹಾಡಿದ್ದಾರೆ. ಎವಿ ರಮಣನ್ ಅವರನ್ನು ಭೇಟಿ ಮಾಡಿದ ನಂತರ ಇಬ್ಬರೂ ಜಂಟಿಯಾಗಿ ಕಾರ್ಯಕ್ರಮ ನೀಡಲು ಪ್ರಾರಂಭಿಸಿದರು. ಇಳಯರಾಜ ಜೊತೆ ಕೆಲಸ ಮಾಡಲು ಪ್ರಾರಂಭಿಸಿದ ಮೇಲೆ ಅವರ ಖ್ಯಾತಿ ಹೆಚ್ಚಾಯಿತು.
1977ರಲ್ಲಿ ರಿಲೀಸ್ ಆದ ‘ಶ್ರೀ ಕೃಷ್ಣಲೀಲಾ’ ಸಿನಿಮಾದ ‘ಮೋಹನ ಕಣ್ಣನ ಮುರಳಿ..’ ಹಾಡಿನ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು. ‘ನೀಳಲ್ಗಳ್’ ಸಿನಿಮಾದ ‘ಪೂಂಗಾತವೇ ತಾಳ ತಿರವೈ..’ ಹಾಡನ್ನು ಹಾಡಿ ಉಮಾ ರಮಣ್ ಅವರು ಗಮನ ಸೆಳೆದರು. ಈ ಹಾಡು ಅವರ ವೃತ್ತಿ ಜೀವನವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಯಿತು.
ಉಮಾ ಅವರು ಇಳಯರಾಜ ಕಂಪೋಸ್ ಮಾಡಿದ 100ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ವಿದ್ಯಾ ಸಾಗರ್, ಮಣಿ ಶರ್ಮಾ ಹಾಗೂ ದೇವ ಅವರು ಕಂಪೋಸ್ ಮಾಡಿದ ಹಾಡುಗಳನ್ನು ಕೂಡ ಹಾಡಿದ್ದಾರೆ. ಅವರು ಹಾಡಿದ ‘ಪನ್ನೀರ್ ಪುಷ್ಪಂಗಳ್’ ಸಿನಿಮಾದ ‘ಆನಂದ ರಾಗಮ್..’, ‘ತೆಂಡ್ರಾಲೆ ಎನ್ನೈ ತೊಡು’ ಸಿನಿಮಾದ ‘ಕಣ್ಮಣಿ ನೀ ವರಾ..’ ಸೇರಿ ಅನೇಕ ಹಾಡುಗಳು ಕೇಳುಗರ ಫೇವರಿಟ್ ಎನಿಸಿಕೊಂಡಿದೆ. 2005ರಿಂದ ಈಚೆ ಅವರು ಸಿನಿಮಾಗಾಗಿ ಹಾಡಿಲ್ಲ.
ಇದನ್ನೂ ಓದಿ: 36 ಭಾಷೆಗಳಲ್ಲಿ ಗಾಯನದ ಮೋಡಿ ಮಾಡಿದ್ದ ‘ಬಾಲಿವುಡ್ ನೈಟಿಂಗೇಲ್’; ಅನನ್ಯ ಸಾಧಕಿ ಲತಾ ಮಂಗೇಶ್ಕರ್ ಜೀವನಯಾನದ ಮೆಲುಕು ಇಲ್ಲಿದೆ
ಉಮಾ ರಮಣ್ ನಿಧನವಾರ್ತೆ ತಮಿಳು ಚಿತ್ರರಂಗವನ್ನು ಶೋಕಕ್ಕೆ ತಳ್ಳಿದೆ. ಅನೇಕ ಸೆಲೆಬ್ರಿಟಿಗಳು ಉಮಾ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ಅವರು ತಮಿಳು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.