ಬೆತ್ತಲೆ ದೃಶ್ಯದ ಶೂಟ್ ವೇಳೆ ಯಾರೂ ಊಹಿಸದ ರೀತಿ ನಡೆದುಕೊಂಡ ಹೀರೋ; ಎಲ್ಲವನ್ನೂ ವಿವರಿಸಿದ ನಟಿ
ಪಂಖುರಿ ಗಿಡ್ವಾನಿ 1998ರಲ್ಲಿ ಜನಿಸಿದರು. ಅವರಿಗೆ ಇನ್ನೂ ಸಣ್ಣ ವಯಸ್ಸು. ಅವರು ಬೋಲ್ಡ್ ಪಾತ್ರಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ. ನವದೀಪ್ ಹಾಗೂ ಪಂಖುರಿ ಕೆಮಿಸ್ಟ್ರಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ಬೋಲ್ಡ್ ಸಿನಿಮಾಗಳನ್ನು ಮಾಡಿ ಗೆದ್ದವರು ಅನೇಕರಿದ್ದಾರೆ. ಇವರೂ ಗೆಲ್ಲುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ತೆಲುಗು ನಟ ನವದೀಪ್ ಅವರು ‘ಲವ್ ಮೌಲಿ’ (Love Mouli Movie) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟೀಸರ್ ಹಾಗೂ ಟ್ರೇಲರ್ಗಳು ಗಮನ ಸೆಳೆದಿವೆ. ಈ ಚಿತ್ರದ ಟ್ರೇಲರ್ನಲ್ಲಿ ಕೆಲವು ಬೋಲ್ಡ್ ದೃಶ್ಯಗಳಿವೆ. ಈ ಸಿನಿಮಾದಲ್ಲಿ ಮಿಸ್ ಇಂಡಿಯಾ ಸ್ಪರ್ಧಿ ಪಂಖುರಿ ಗಿಡ್ವಾನಿ ನಾಯಕಿ ಪಾತ್ರ ಮಾಡುತ್ತಿದ್ದಾರೆ. ಅವರು ಅರೆಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ನಡೆದ ಘಟನೆಯೊಂದನ್ನು ನಟಿ ಮೆಲುಕು ಹಾಕಿದ್ದಾರೆ.
ಸ್ವತಃ ಪಂಖುರಿ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ. ಬೆತ್ತಲೆ ಶೂಟಿಂಗ್ ವೇಳೆ ನಿಜಕ್ಕೂ ಆಗಿದ್ದೇನು ಎಂಬುದನ್ನು ಅವರು ವಿವರಿಸಿದ್ದಾರೆ. ಎದೆ ಭಾಗಕ್ಕೆ ಚಿಕ್ಕದಾಗ ಪ್ಯಾಚ್ ಒಂದನ್ನು ಹಾಕಿಕೊಂಡಿದ್ದರು ಪಂಖುರಿ. ಆದರೆ, ಸಾಕಷ್ಟು ಬೆವರಿದ್ದರಿಂದ ಆ ಪ್ಯಾಚ್ ಕಳಚಿ ಹೋಗುವುದರಲ್ಲಿತ್ತು. ಇದು ಗೊತ್ತಿದ್ದೂ ಅವರು ಶೂಟ್ ಪೂರ್ಣಗೊಳಿಸಿದರು. ನಿರ್ದೇಶಕರು ಕಟ್ ಹೇಳುತ್ತಿದ್ದಂತೆ ನವದೀಪ್ ಅವರು ಈ ವಿಚಾರ ಗಮನಿಸಿದರು. ಅವರು ನಡೆದುಕೊಂಡ ರೀತಿಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.
ನವದೀಪ್ ಅವರು ಮುಖವನ್ನು ಬೇರೆ ಕಡೆ ತಿರುಗಿಸಿದರು. ಅವರ ದೇಹವನ್ನು ಕವರ್ ಮಾಡುವಂತೆ ಪ್ರೊಡಕ್ಷನ್ ಸಿಬ್ಬಂದಿಗೆ ಸೂಚಿಸಿದರು. ತಕ್ಷಣಕ್ಕೆ ಬಟ್ಟೆಯಿಂದ ಅವರ ದೇಹವನ್ನು ಮುಚ್ಚಲಾಯಿತು. ಈ ವಿಚಾರ ಅನೇಕರಿಗೆ ಮೆಚ್ಚುಗೆ ತರಿಸಿದೆ. ಅವರ ನಡೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಶಾರುಖ್, ಆಮಿರ್, ಸಲ್ಮಾನ್; ‘ರಾಜಮೌಳಿ ನಿರ್ದೇಶನ ಮಾಡ್ಬೇಕು’ ಎಂದ ನೆಟ್ಟಿಗರು
ಪಂಖುರಿ ಗಿಡ್ವಾನಿ 1998ರಲ್ಲಿ ಜನಿಸಿದರು. ಅವರಿಗೆ ಇನ್ನೂ ಸಣ್ಣ ವಯಸ್ಸು. ಅವರು ಬೋಲ್ಡ್ ಪಾತ್ರಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ. ನವದೀಪ್ ಹಾಗೂ ಪಂಖುರಿ ಕೆಮಿಸ್ಟ್ರಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ಬೋಲ್ಡ್ ಸಿನಿಮಾಗಳನ್ನು ಮಾಡಿ ಗೆದ್ದವರು ಅನೇಕರಿದ್ದಾರೆ. ‘ಅರ್ಜುನ್ ರೆಡ್ಡಿ’, ‘ಆರ್ಎಕ್ಸ್ 100’ ರೀತಿಯ ಸಿನಿಮಾಗಳು ಬೋಲ್ಡ್ ಪಾತ್ರಗಳ ಮೂಲಕವೇ ಗಮನ ಸೆಳೆದಿವೆ. ಈ ಸಾಲಿಗೆ ‘ಲವ್ ಮೌಲಿ’ ಕೂಡ ಸೇರ್ಪಡೆ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.